ಬುಡಾಪೆಸ್ಟ್ (ಹಂಗೇರಿ): ಮಂಗಳವಾರ ನಡೆದ ಪೋರ್ಚುಗಲ್ ಹಾಗೂ ಹಂಗೇರಿ ನಡುವಿನ ಯೂರೊ ಕಪ್ ಫುಟ್‌ಬಾಲ್ ಪಂದ್ಯಕ್ಕೂ ಮುನ್ನ ಸಣ್ಣದೊಂದು ವಿವಾದವೆದ್ದಿದೆ.
ಈ ಪಂದ್ಯದ ಹಿನ್ನೆಲೆಯಲ್ಲಿ ಪೋರ್ಚುಗಲ್ ನಾಯಕ, ಸಮಕಾಲೀನ ಫುಟ್‌ಬಾಲ್ ಜಗತ್ತಿನ ಸರ್ವಶ್ರೇಷ್ಠ ಆಟಗಾರರಲ್ಲೊಬ್ಬರಾದ ಕ್ರಿಸ್ಟಿಯಾನೊ ರೊನಾಲ್ಡೊ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಆ ವೇಳೆ ಟೇಬಲ್‌ನಲ್ಲಿ ಕೊಕಾಕೊಲಾ ಬಾಟಲ್‌ಗಳನ್ನು ಜೋಡಿಸಿಡಲಾಗಿತ್ತು. ಅದನ್ನು ಎತ್ತಿ ಬದಿಗಿಟ್ಟ ರೊನಾಲ್ಡೊ, ನೀರಿನ ಬಾಟಲನ್ನು ಕೈಯಲ್ಲಿ ಹಿಡಿದುಕೊಂಡು ನೀರು ಕುಡಿಯಿರಿ ಎಂದು ಜನರಿಗೆ ಕರೆ ನೀಡಿದರು!
ಕೊಕಾಕೊಲಾ ಯೂರೊ ಕಪ್‌ನ ಅಧಿಕೃತ ಪ್ರಾಯೋಜಕರಲ್ಲೊಂದು. ಆದ್ದರಿಂದ ಅದನ್ನು ಅಲ್ಲಿಡುವುದು ಶಿಷ್ಟಾಚಾರ. ಅದನ್ನೇ ಬದಿಗೆ ಸರಿಸಿರುವುದರಿಂದ ರೊನಾಲ್ಡೊ ವಿರುದ್ಧ ಸಂಘಟಕರು ಶಿಸ್ತುಕ್ರಮ ತೆಗೆದು ಕೊಳ್ಳುವ ಸಾಧ್ಯತೆಯಿದೆ. ಪ್ರಸ್ತುತ ಪರಿಸ್ಥಿತಿ ಎಲ್ಲರಲ್ಲೂ ಕುತೂಹಲ ಮೂಡಿದೆ.
ಇದನ್ನೂ ಓದಿ:ಮುಂದುವರಿಯಲಿದೆ ಬಿಗ್ ಬಾಸ್ ಕನ್ನಡ ಶೋ: ಆದರೆ ಎರಡನೇ ಇನ್ನಿಂಗ್ಸ್ ನಲ್ಲಿ 12 ಸ್ಪರ್ಧಿಗಳು
Related Articles
ಕ್ರಿಸ್ಟಿಯಾನೋ ರೊನಾಲ್ಡೊ ಈ ಕೆಲಸದಿಂದ ಕೊಕಾಕೊಲಾ ಕಂಪನಿಗೆ ಭಾರಿ ನಷ್ಟವಾಗಿದೆ. ಕೊಕಾಕೊಲಾ ಕಂಪನಿಯ ಶೇರು ಬೆಲೆಯಲ್ಲಿ ಭಾರಿ ಪ್ರಮಾಣದ ಇಳಿಕೆಯಾಗಿದೆ.