Advertisement

ಕರಾವಳಿ: ನಾಮಪತ್ರಗಳ ಪ್ರವಾಹ

01:10 PM Apr 24, 2018 | Team Udayavani |

ಮಂಗಳೂರು/ಉಡುಪಿ: ಸೋಮವಾರ ಒಳ್ಳೆಯ ತಿಥಿ ಅಷ್ಟಮಿಯಾಗಿದ್ದು, ವಿಧಾನಸಭಾ ಚುನಾವಣೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಾಮಪತ್ರಗಳ ಪ್ರವಾಹ ಹರಿದಿದೆ. ದ.ಕ.ದಲ್ಲಿ 27 ಮತ್ತು ಉಡುಪಿ ಜಿಲ್ಲೆಯಿಂದ 16 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. 

Advertisement

ವಿವಿಧ ಕ್ಷೇತ್ರಗಳಲ್ಲಿ ಪ್ರಮುಖರ ಹೊರತಾಗಿ ಮೂಡಬಿದಿರೆ ಕ್ಷೇತ್ರದಿಂದ ಜೀವನ್‌ ಕುಮಾರ್‌ ಶೆಟ್ಟಿ (ಜೆಡಿಎಸ್‌), ಕೆ. ಯಾದವ ಶೆಟ್ಟಿ (ಸಿಪಿಐಎಂ), ಮಂಗಳೂರು ಉತ್ತರ ಕ್ಷೇತ್ರದಿಂದ ಡಿ.ಪಿ. ಹಮ್ಮಬ್ಬ (ಜೆಡಿಎಸ್‌), ಮಂಗಳೂರು ದಕ್ಷಿಣ ಕ್ಷೇತ್ರದಿಂದ  ಸುನೀಲ್‌ ಕುಮಾರ್‌ ಬಜಾಲ್‌ (ಸಿಪಿಐಎಂ), ಮ್ಯಾಕ್ಸಿಮ್‌ ಪಿಂಟೋ (ಪಕ್ಷೇತರ), ರೀನಾ ಪಿಂಟೋ (ಪಕ್ಷೇತರ), ಮದನ್‌ ಎಂ.ಸಿ (ಪಕ್ಷೇತರ), ಆರ್‌. ಶ್ರೀಕರ ಪ್ರಭು (ಪಕ್ಷೇತರ), ಸುಪ್ರೀತ್‌ ಕುಮಾರ್‌ ಪೂಜಾರಿ (ಹಿಂದುಸ್ಥಾನ್‌ ಜನತಾ ಪಾರ್ಟಿ), ಬಂಟ್ವಾಳ ಕ್ಷೇತ್ರದಿಂದ  ಮೊಹಮ್ಮದ್‌ ರಿಯಾಝ್ (ಎಸ್‌ಡಿಪಿಐ), ಇಬ್ರಾಹಿಂ (ಜೆಡಿಎಸ್‌), ಇಬ್ರಾಹಿಂ (ಪಕ್ಷೇತರ), ಪುತ್ತೂರು ಕ್ಷೇತ್ರದಿಂದ ವಿದ್ಯಾಶ್ರೀ (ಪಕ್ಷೇತರ), ಅಮರನಾಥ ಬಿ.ಕೆ. (ಪಕ್ಷೇತರ), ಶೇಖರ ಬಿ. (ಪ್ರಜಾ ಪರಿವರ್ತನ ಪಾರ್ಟಿ), ಸುಳ್ಯದಿಂದ ರಘು (ಬಿಎಸ್‌ಪಿ), ಚಂದ್ರಶೇಖರ ಕೆ. (ಪಕ್ಷೇತರ), ಬೈಂದೂರು ಕ್ಷೇತ್ರದಿಂದ ಸಿ. ರವೀಂದ್ರ (ಜೆಡಿಎಸ್‌), ಮಂಜುನಾಥ ಕೆ. (ಜೆಡಿಯು), ಅಬ್ದುಲ್‌ ಅಜೀದ್‌ (ಆಲ್‌ ಇಂಡಿಯಾ ಮಹಿಳಾ ಎಂಪವರ್‌ವೆುಂಟ್‌ ಪಾರ್ಟಿ), ಕುಂದಾಪುರದಿಂದ ಕಿರಣ್‌ ಕುಮಾರ್‌ ಕೊಡ್ಗಿ (ಬಿಜೆಪಿ), ಎಸ್‌. ಪ್ರಕಾಶ್‌ ಶೆಟ್ಟಿ (ಜೆಡಿಎಸ್‌), ಸುಧಾಕರ (ಆರ್‌ಪಿಐ), ಉಡುಪಿಯಿಂದ ಶೇಖರ್‌ ಹಾವಂಜೆ (ಭಾರತೀಯ ರಿಪಬ್ಲಿಕನ್‌ ಪಾರ್ಟಿ), ಕಾರ್ಕಳದಿಂದ ಅಶ್ರಫ್ ಅಲಿ (ಪಕ್ಷೇತರ), ಸುಮಂತ ಕೆ. ಪೂಜಾರಿ (ಪಕ್ಷೇತರ), ಉದಯ ಕುಮಾರ್‌ (ಬಿಎಸ್‌ಪಿ) ನಾಮಪತ್ರ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next