Advertisement

ಕರಾವಳಿ ಶಾಸಕರು ಬೆಂಗಳೂರಿಗೆ ದೌಡು 

11:21 AM May 17, 2018 | Harsha Rao |

ಮಂಗಳೂರು: ಗೆದ್ದ ಬೆನ್ನಲ್ಲೇ ಕರಾವಳಿ ಭಾಗದ ಬಿಜೆಪಿ ಹಾಗೂ ಕಾಂಗ್ರೆಸ್‌ ಶಾಸಕರು ಬೆಂಗಳೂರಿಗೆ ತೆರಳಿದ್ದು, ಆಯಾ ಪಕ್ಷದವರಿಂದ ಸರಕಾರ ರಚನೆಗೆ ನಡೆಯುತ್ತಿರುವ ಕಸರತ್ತು ನಡುವೆ ಕ್ಷಣಕ್ಷಣಕ್ಕೂ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ನಡುವೆ ಬಿಝಿಯಾಗಿದ್ದಾರೆ. 

Advertisement

ಮಂಗಳವಾರ ಮತ ಎಣಿಕೆಯ ಫಲಿತಾಂಶ ಘೋಷಣೆಯಾದ ಬಳಿಕ ನೂತನ ಶಾಸಕರು ತಮ್ಮ ಕ್ಷೇತ್ರಗಳಿಗೆ ತೆರಳಿ ವಿಜಯೋತ್ಸಾಹದಲ್ಲಿ ಭಾಗಿಯಾಗಿದ್ದ‌ರು. ಆದರೆ ಸರಕಾರ ರಚಿಸುವಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಲಭಿಸದೆ ಅತಂತ್ರ ಸ್ಥಿತಿ ನಿರ್ಮಾಣವಾಗಿರುವುದರಿಂದ ಬೆಂಗಳೂರಿನಲ್ಲಿ ಈಗ ಆಯಾ ಪಕ್ಷಗಳಲ್ಲಿ ಎಲ್ಲಿಲ್ಲದ ಕಸರತ್ತು-ತಂತ್ರಗಾರಿಕೆ ರೂಪುಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ, ಉಮಾನಾಥ್‌ ಕೋಟ್ಯಾನ್‌, ಹರೀಶ್‌ ಪೂಂಜಾ, ರಾಜೇಶ್‌ ನಾೖಕ್‌, ಸಂಜೀವ ಮಠಂದೂರು, ಎಸ್‌. ಅಂಗಾರ ಹಾಗೂ ಕಾಂಗ್ರೆಸ್‌ ಶಾಸಕ ಯು.ಟಿ. ಖಾದರ್‌ ಸದ್ಯ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಉಡುಪಿ ಜಿಲ್ಲೆಯಿಂದ ಆಯ್ಕೆಯಾದ ಐವರು ಬಿಜೆಪಿ ಶಾಸಕರಾದ ರಘುಪತಿ ಭಟ್‌, ಸುನಿಲ್‌ ಕುಮಾರ್‌, ಲಾಲಾಜಿ ಮೆಂಡನ್‌, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಕುಮಾರ ಶೆಟ್ಟಿ ಕೂಡ ಬೆಂಗಳೂರಿಗೆ ಪಕ್ಷದ ವರಿಷ್ಠರ ಆಹ್ವಾನದ ಮೇರೆಗೆ ತೆರಳಿದ್ದಾರೆ. 

ಬಿಜೆಪಿ ಶಾಸಕರಲ್ಲಿ ಕೆಲವು ಮಂದಿ ಮಂಗಳವಾರ ರಾತ್ರಿ ಹಾಗೂ ಇನ್ನು ಕೆಲವರು ಬುಧವಾರ ಮುಂಜಾನೆ ಬೆಂಗಳೂರಿಗೆ ತೆರಳಿದ್ದಾರೆ. ಕಾಂಗ್ರೆಸ್‌ನ ಖಾದರ್‌ ಬುಧವಾರ ತೆರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next