Advertisement

Coastal Karnataka: ಉಭಯ ಜಿಲ್ಲೆಯ 31 ಕೇಂದ್ರಗಳಲ್ಲಿ ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ

03:07 AM Oct 28, 2024 | Team Udayavani |

ಮಂಗಳೂರು/ಉಡುಪಿ: ಗ್ರಾಮ ಆಡಳಿತ ಅಧಿಕಾರಿ (ವಿಎಒ)ಯ ಒಂದು ಸಾವಿರ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮುಖ್ಯ ಪರೀಕ್ಷೆ ದಕ್ಷಿಣ ಕನ್ನಡ ಜಿಲ್ಲೆಯ 18 ಮತ್ತು ಉಡುಪಿ ಜಿಲ್ಲೆಯ 13 ಪರೀಕ್ಷಾ ಕೇಂದ್ರಗಳಲ್ಲಿ ರವಿವಾರ ಸಾಂಗವಾಗಿ ನೆರವೇರಿತು.

Advertisement

ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ 8,177 ಮಂದಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಉಡುಪಿ ಜಿಲ್ಲೆಯಲ್ಲಿ 6004 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು ಅದರಲ್ಲಿ 5390 ಅಭ್ಯರ್ಥಿಗಳು ಪರೀಕ್ಷೆ-1 ಹಾಗೂ 5372 ಅಭ್ಯರ್ಥಿಗಳು ಪರೀಕ್ಷೆ-2ರಲ್ಲಿ ಹಾಜರಾಗಿದ್ದರು. ಕಾಲೇಜುಗಳ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಪರೀಕ್ಷೆ ನೆರವೇರಿಸಲು ಸಹಕರಿಸಿದ್ದು, ಯಾವುದೇ ರೀತಿಯ ಗೊಂದಲಗಳಾಗದಂತೆ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಲಾಗಿತ್ತು.

ಅಭ್ಯರ್ಥಿಯೊಬ್ಬರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, ಬೆಳಗ್ಗೆ ಮತ್ತು ಮಧ್ಯಾಹ್ನ ಬಳಿಕ ಒಟ್ಟು ಎರಡು ಪರೀಕ್ಷೆಗಳು ನಡೆದಿತ್ತು. ಪ್ರಶ್ನೆ ಪತ್ರಿಕೆ ತುಸು ಕಠಿನವಾಗಿತ್ತು. ಪರೀಕ್ಷಾ ಕೇಂದ್ರದೊಳಗೆ ಮೂರು ಹಂತದಲ್ಲಿ ತಪಾಸಣೆ ನಡೆಸಿ ಪರೀಕ್ಷಾ ಕೊಠಡಿಯೊಳಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ವಾಚ್‌, ದಾರ, ಮೂಗುತಿ, ಸರ, ಉಂಗುರ ಮೊದಲಾದವುಗಳಿಗೆ ಅವಕಾಶ ಇರಲಿಲ್ಲ. ಇದರ ಹೊರತಾಗಿಯೂ ಕೆಲವರು ಧರಿಸಿಕೊಂಡು ಬಂದಿದ್ದು, ಪರೀಕ್ಷಾ ಕೊಠಡಿಯೊಳಗೆ ತೆರಳುವಾಗ ತೆಗೆಸಿದ್ದರು. ಕರಿಮಣಿ ಸರಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಈ ಕುರಿತು ಹಾಲ್‌ ನೀಡುವ ಸಮಯದಲ್ಲಿಯೇ ಅಭ್ಯರ್ಥಿಗಳಿಗೆ ತಿಳಿಸಲಾಗಿತ್ತು’ ಎಂದು ತಿಳಿಸಿದ್ದಾರೆ.

ಸಂತ ಅಲೋಶಿಯಸ್‌, ಆಗ್ನೇಸ್‌, ಬಲ್ಮಠ ಸರಕಾರಿ ಪಿಯು ಕಾಲೇಜು, ಕೆನರಾ ಪಿಯು ಕಾಲೇಜು, ರಥಬೀದಿ ಸರಕಾರಿ ಪಿಯು ಕಾಲೇಜು, ಸಂತ ಆ್ಯನ್ಸ್‌ ಕಾಲೇಜು, ವಿಕಾಸ್‌ ಪಿಯು ಕಾಲೇಜು ಸಹಿತ ಜಿಲ್ಲೆಯ 18 ಕೇಂದ್ರಗಳಲ್ಲಿ ಪರೀಕ್ಷೆಗಳು ಸುಸೂತ್ರವಾಗಿ ನಡೆಯಿತು.

ನಿಷೇಧಾಜ್ಞೆ
ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಹಾಗೂ ಅಹಿತಕರ ಘಟನೆ ನಡೆಯದಂತೆ ತಡೆಯಲು ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತ ಸೆಕ್ಷನ್‌ 163ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

Advertisement

“ದಕ್ಷಿಣ ಕನ್ನಡ ಜಿಲ್ಲೆಯ 18 ಪರೀಕ್ಷಾ ಕೇಂದ್ರಗಳಲ್ಲಿ ರವಿವಾರ ಗ್ರಾಮ ಆಡಳಿತ ಅಧಿಕಾರಿ (ವಿಎಒ) ಪರೀಕ್ಷೆ ಸಾಂಗವಾಗಿ ನಡೆದಿದೆ. 8,177 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ. ಉಡುಪಿ ಜಿಲ್ಲೆಯ 13 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ಯಾವುದೇ ಗೊಂದಲ ಇಲ್ಲದೇ ಎಲ್ಲ ಕೇಂದ್ರಗಳಲ್ಲೂ ವ್ಯವಸ್ಥಿತವಾಗಿ ಪರೀಕ್ಷೆ ನಡೆದಿದೆ. ದು ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್‌. ತಿಳಿಸಿದ್ದಾರೆ.”
– ಡಾ| ಸಂತೋಷ್‌ ಕುಮಾರ್‌ – ಮಮತಾ ದೇವಿ ಜಿ.ಎಸ್‌. ಅಪರ ಜಿಲ್ಲಾಧಿಕಾರಿ- ದ.ಕ. ಮತ್ತು ಉಡುಪಿ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next