Advertisement
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ, ಕುಡುಪು, ಮಂಜೇಶ್ವರದ ಅನಂತೇಶ್ವರ ದೇವಸ್ಥಾನ, ಉಡುಪಿಯ ಸಗ್ರಿ ಸುಬ್ರಹ್ಮಣ್ಯ ದೇವಸ್ಥಾನ, ಶ್ರೀಕೃಷ್ಣ ಮಠದ ಸುಬ್ರಹ್ಮಣ್ಯ ಗುಡಿ, ತಾಂಗೋಡು, ಮಾಂಗೋಡು ಮತ್ತು ಅರಿತೋಡು ಮೊದಲಾದ ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ಅಭಿಷೇಕ, ಪೂಜೆಗಳು ನೆರವೇರಲಿವೆ.
ಉಡುಪಿ ರಥಬೀದಿಗೆ ಶನಿವಾರವೇ ಕೇದಗೆ ಬಂದಿದೆ. ಹುಬ್ಬಳ್ಳಿಯ ವ್ಯಾಪಾರಿಗಳು ಮಹಾರಾಷ್ಟ್ರ ಸಮೀಪದ ರತ್ನಗಿರಿಯಿಂದ ತಂದಿರುವ ಸ್ವರ್ಣಕೇದಗೆ ಆಕರ್ಷಿಸುತ್ತಿದೆ. ಸೀಯಾಳದ ಬೃಹತ್ ರಾಶಿಗಳು ರಥಬೀದಿ ಸೇರಿದಂತೆ ನಗರ ಮತ್ತು ಗ್ರಾಮೀಣ ಭಾಗದ ಅಂಗಡಿಗಳ ಮುಂದೆ ಕಾಣಸಿಗುತ್ತಿವೆ.