Advertisement

ಕರಾವಳಿ ಅಪರಾಧ ಸುದ್ದಿಗಳು (ಎಪ್ರಿಲ್‌ 05)

10:49 AM Apr 05, 2019 | Vishnu Das |

ನಂಚಾರು: ಮರಳು ದಕ್ಕೆಗೆ ದಾಳಿ; 3 ಸೆರೆ
ಕೋಟ: ನಂಚಾರು ಗ್ರಾಮದ ಬಾಗಳಕಟ್ಟೆಯಲ್ಲಿ ಅಕ್ರಮ ಮರಳು ದಕ್ಕೆಗೆ ಎ.3ರಂದು ದಾಳಿ ನಡೆಸಿ ಮೂವರನ್ನು ಬಂಧಿಸಲಾ ಗಿದ್ದು, ಮರಳು ಹಾಗೂ ವಾಹನ ವನ್ನು ವಶಪಡಿಸಿಕೊಳ್ಳಲಾ ಗಿ ದೆ.

Advertisement

ಸ್ಥಳೀಯ ನಿವಾಸಿಗಳಾ ಗ ದ ರಾಮ ನಾಯ್ಕ (28), ಉದಯ ನಾಯ್ಕ (35) ಹಾಗೂ ಕೃಷ್ಣ ನಾಯ್ಕ (46) ಬಂಧಿತರು.

ಸ್ಥಳೀಯರ ದೂರಿನ ಮೇರೆಗೆ ಕೋಟ ಎ.ಎಸ್‌.ಐ. ಆನಂದ ವೆಂಕಟ್‌ ಅವರು ಸಿಬಂದಿ ಜತೆ ಯ ಲ್ಲಿ ದಾಳಿ ನಡೆಸಿದಾಗ ಅಕ್ರಮ ಬಯಲಾಗಿದೆ. ದಕ್ಕೆಯಲ್ಲಿದ್ದ 1 ಟನ್‌ ಮರಳು ಹಾಗೂ ಟೆಂಪೋ ಮತ್ತು ಮರಳುಗಾರಿಕೆಗೆ ಬಳಸಿದ್ದ ಪರಿಕರಗಳನ್ನು ವಶಕ್ಕೆ ಪಡೆದು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.

ಹಲ್ಲೆ: ಶಿಕ್ಷೆ ಪ್ರಕಟ
ಉಡುಪಿ: ಮಹಿಳೆಗೆ ಕಲ್ಲಿನಿಂದ ಗಂಭೀರ ಹಲ್ಲೆ ನಡೆಸಿದ್ದ ವ್ಯಕ್ತಿಗೆ ಉಡುಪಿಯ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಹಿರಿಯಡಕದ ಅಂಜಾರು ಗ್ರಾಮದ ಓಂತಿಬೆಟ್ಟು ಶಾಲೆಯ ಸಮೀ ಪದ ನಿವಾಸಿ ಸುರೇಶ್‌ 2012ರ ಆ.26ರಂದು ರಾತ್ರಿ ಓಂತಿಬೆಟ್ಟು ಶಾಲೆಯ ಸಮೀಪದ ನಿವಾಸಿ ಸುಶೀಲಾ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಜಲ್ಲಿ ಕಲ್ಲಿನಿಂದ ಮುಖಕ್ಕೆ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಹಿರಿಯಡಕ ಠಾಣೆಯ ಉಪ ನಿರೀಕ್ಷಕ ಬಿ.ಲಕ್ಷ್ಮಣ್‌ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

Advertisement

ವಿಚಾರಣೆ ನಡೆಸಿದ ಉಡುಪಿ ಪ್ರಧಾನ ಸಿ.ಜೆ. ಮತ್ತು ಜೆ.ಎಂ.ಎಫ್. ಸಿ. ನ್ಯಾಯಾಲಯದ ನ್ಯಾಯಾಧೀಶ ಇರ್ಫಾನ್‌ ಅವರು ತಪ್ಪಿ ತ ಸ್ಥ ನಿಗೆ 3 ವರ್ಷ ಶಿಕ್ಷೆ ಮತ್ತು 3,000 ರೂ. ದಂಡ ವಿಧಿಸಿ ಎ.4ರಂದು ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ ಕೆ. ವಿಚಾರಣೆ ನಡೆಸಿ ವಾದಿಸಿದ್ದರು.

ಯುವಕ ಸಾವು: ಸೂಚನೆ
ಉಡುಪಿ: ಉಡುಪಿ ಜಾಮಿಯಾ ಮಸೀದಿ ಸಮೀಪದ ಅಂಗಡಿ ಮುಂಭಾಗದಲ್ಲಿ ಮನೋಜ್‌ (30) ಎಂಬಾತ ನ‌ ಮೃತ ದೇಹ ಎ.3ರಂದು ಪತ್ತೆಯಾಗಿದೆ.

ಈತ ಮಾ.25ರಂದು ಅಜ್ಜರಕಾಡು ಜಿಲ್ಲಾಸ್ಪತ್ರೆಯಿಂದ ಚಿಕಿತ್ಸೆ ಪಡೆದಿರುವ ಬಗ್ಗೆ ಈತನ ಕಿಸೆಯಲ್ಲಿ ಚೀಟಿ ಪತ್ತೆಯಾಗಿತ್ತು. ಅದರಲ್ಲಿ ಮನೋಜ್‌, ತಂದೆ ಈರಣ್ಣ ಎಂದಷ್ಟೇ ಇತ್ತು. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸುಮಾರು 5.3 ಅಡಿ ಎತ್ತರವಿದ್ದು ಕಪ್ಪು ಪ್ಯಾಂಟ್‌, ಹಸಿರು ಮತ್ತು ನೀಲಿ ಮಿಶ್ರಿತ ಶರ್ಟ್‌ ಧರಿಸಿದ್ದಾನೆ. ಶವವನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿಡಲಾಗಿದ್ದು ಸಂಬಂಧಿಕರಿದ್ದರೆ ನಗರ ಠಾಣೆ ಅಥವಾ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಬೇಕು ಎಂದು ನಗರ ಪೊಲೀಸರು ತಿಳಿಸಿದ್ದಾರೆ.

ಕಟಪಾಡಿ: ಮಾನಸಿಕ ಅಸ್ವಸ್ಥನಿಂದ ಮನೆಗೆ ನುಗ್ಗಿ ದಾಂಧಲೆ
ಕಾಪು : ಕಟಪಾಡಿ – ಏಣಗುಡ್ಡೆ ಗ್ರಾಮದ ಅಗ್ರಹಾರ ಬಳಿಯ ಮನೆಗೆ ಅಪರಿಚಿತ ವ್ಯಕ್ತಿಯೋರ್ವ ನುಗ್ಗಿ ದಾಂಧ‌ಲೆ ನಡೆಸಿದ್ದು, ತಡೆಯಲು ಬಂದವರಿಗೆ ಹಲ್ಲೆ ನಡೆಸಿರುವ ಘಟನೆ ಗುರುವಾರ ನಡೆದಿದೆ.

ಮನೆಯಲ್ಲಿ ಮಹಿಳೆಯೊಬ್ಬರೇ ಇದ್ದಾಗ ನುಗ್ಗಿದ ಬಳ್ಳಾರಿ ಮೂಲದ ದೇವು ಎಂಬಾ ತನು ಕಿಟಕಿಯ ಗಾಜನ್ನು ಒಡೆದಿದ್ದಾನೆ. ಆ ವೇಳೆಗೆ ಅಲ್ಲಿಗೆ ಬಂದ ರಿಕ್ಷಾಕ್ಕೂ ಕಲ್ಲೆಸೆದು ಗಾಜು ಪುಡಿ ಮಾಡಿದ್ದು, ಚಾಲಕನಿಗೆ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ.

ತಡೆಯಲು ಬಂದ ಮತ್ತೋರ್ವನಿಗೂ ಹಲ್ಲೆ ನಡೆಸಿದಾಗ ಸ್ಥಳೀ ಯರು ಜಮಾ ಯಿಸಿ ಆತನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿ ಸಿದ್ದಾರೆ. ಆತ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದು, ಪೊಲೀಸರು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಮನೆಯೊಡತಿ ಲೀಲಾ ಹೆಗ್ಡೆ ನೀಡಿರುವ ದೂರಿನಂತೆ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉದ್ಯಾವರದಲ್ಲಿ ಐಟಿ ಪರಿಶೀಲನೆ
ಉಡುಪಿ: ಉದ್ಯಾವರ ಪಿತ್ರೋಡಿ ಕಟೆ³ಗುಡ್ಡೆ ಪರಿಸರದ ಇಬ್ಬರು ರಾಜಕೀಯ ಮುಖಂಡರ ಮನೆಯಲ್ಲಿ ಗುರುವಾರ ಐಟಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಪೈಕಿ ಒಬ್ಬರನ್ನು ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದಾರೆನ್ನಲಾಗಿದೆ.

ಫೈನಾನ್ಸ್‌ ಮಾಲಕ ಮತ್ತು ಲ್ಯಾಂಡ್‌ ಲಿಂಕ್ಸ್‌ ವಹಿವಾಟು ನಡೆಸು ತ್ತಿರುವ ಇಬ್ಬರು ಅಧಿಕಾರಿಗಳಿಂದ ಪರಿಶೀಲನೆಗೆ ಒಳಗಾದವರು. ಮಧ್ಯಾಹ್ನ 2 ಗಂಟೆಯ ವೇಳೆಗೆ ತಪಾಸಣೆ ನಡೆದಿದೆ ಎಂದು ತಿಳಿದು ಬಂದಿದೆ.

ನಕಲಿ ನಂಬರ್‌ ಪ್ಲೇಟ್‌: ಟ್ರೈಲರ್‌ ವಶಕ್ಕೆ
ಕಾಸರಗೋಡು: ಪಂಜಾಬ್‌ನಲ್ಲಿ ಸಂಚಾರ ನಡೆಸುವ ಲಾರಿಯ ನಂಬರ್‌ ಪ್ಲೇಟ್‌ ಲಗತ್ತಿಸಿ ಆ ವಾಹನದ ದಾಖಲೆ ಗಳ ಸಹಿತ ಕೇರಳಕ್ಕೆ ಸರಕು ಸಾಗಿಸಲಾತ್ನಿಸಿದ ಟ್ರೈಲರ್‌ ಲಾರಿಯನ್ನು ಮಂಜೇಶ್ವರ ಆರ್‌ಟಿಒ ಚೆಕ್‌ಪೋಸ್ಟ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಮುಟ್ಲುಪಾಡಿ: ಬ್ಯಾಂಕ್‌ ಸಿಬಂದಿ ಸೋಗಿನಲ್ಲಿ ಕರೆ ಮಾಡಿ 20 ಸಾ.ರೂ. ಲಪಟಾವಣೆ
ಅಜೆಕಾರು: ಮುಟ್ಲುಪಾಡಿ ಬೊಮ್ಮರಬೆಟ್ಟಿನ ನಿವಾಸಿ ಉಷಾ ಶೆಟ್ಟಿ ಅವರು ನಕಲಿ ಫೋನ್‌ ಕರೆಗೆ ಸ್ಪಂದಿಸಿ 20 ಸಾ.ರೂ. ಕಳೆದುಕೊಂಡಿದ್ದಾ ರೆ.
ಅವರು ಮುನಿಯಾಲಿನ ಸಿಂಡಿ ಕೇಟ್‌ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು, ಇವರ ಮೊಬೈಲ್‌ ಸಂಖ್ಯೆಗೆ ಎ. 2ರಂದು ಬ್ಯಾಂಕ್‌ ಸಿಬಂದಿ ಸೋಗಿ ನಲ್ಲಿ ಕರೆ ಮಾಡಿ ಎಟಿಎಂ ಕಾರ್ಡ್‌ನ ಪಿನ್‌ ನಂಬರ್‌ ಪಡೆದು 20 ಸಾ. ರೂ. ವಂಚಿಸಲಾಗಿದೆ.

ತನ್ನ ಖಾತೆಯಿಂದ ಹಣ ಕಡಿತ ಗೊಂಡ ಬಗ್ಗೆ ಮೊಬೈಲ್‌ ಸಂದೇಶ ಬಂದ ಕೂಡಲೇ ಉಷಾ ಬ್ಯಾಂಕ ನ್ನು ಸಂಪರ್ಕಿಸಿದ್ದು, ಆಗ ಬ್ಯಾಂಕಿನ ಸಿಬಂದಿ ಕರೆ ಮಾಡಿಲ್ಲ ಎಂಬುದು ತಿಳಿಯಿತು. ತಾನು ಮೋಸ ಹೋಗಿರುವ ಬಗ್ಗೆ ತಿಳಿದ ಬಳಿಕ ಎಟಿಎಂ ಕಾರ್ಡನ್ನು ನಿಷ್ಕ್ರಿಯಗೊಳಿಸಿದ್ದಾರೆ.

ಬಳಿಕವೂ ನಿರಂತರ ಕರೆ
ಉಷಾ ಶೆಟ್ಟಿ ತನ್ನ ಕಾರ್ಡನ್ನು ನಿಷ್ಕ್ರಿಯ ಗೊಳಿಸಿದ ಬಳಿ ಕವೂ 7319765822 ನಂಬರ್‌ನಿಂದ ನಿರಂತರವಾಗಿ ಎ. 4ರ ವರೆಗೂ ಕರೆ ಬರು ತ್ತಿದೆ ಹಾಗೂ ನಿಷ್ಕ್ರಿಯಗೊಳಿಸಿರುವ ಎಟಿಎಂ ಅನ್ನು ಸರಿಪಡಿಸುವಂತೆ ಬೆದರಿಸಲಾ ಗುತ್ತಿರು ವುದಾಗಿ ಉಷಾ ಶೆಟ್ಟಿ ತಿಳಿ ಸಿದ್ದಾರೆ. ಇದೇ ನಂಬರ್‌ನಿಂದ ಮುಟ್ಲುಪಾಡಿ, ಮುನಿಯಾಲು ಪರಿಸರದ ಮಹಿಳೆ ಯರಿಗೂ ಕರೆ ಬರುತ್ತಿದೆ ಹಾಗೂ ಕರೆ ಮಾಡುವ ವ್ಯಕ್ತಿಯು ಕನ್ನಡ ಹಾಗೂ ಹಿಂದಿಯಲ್ಲಿ ಮಾತನಾಡುತ್ತಿದ್ದಾನೆಂದು ಹೇಳಲಾ ಗು ತ್ತಿ ದೆ.

ರಿಕ್ಷಾದಲ್ಲಿ ಬಂದು ನದಿಗೆ ಹಾರಿದ ವೃದ್ಧ!
ಹಳೆಯಂಗಡಿ: ಪಾವಂಜೆ ಸೇತುವೆಯಿಂದ ವ್ಯಕ್ತಿ ಯೋರ್ವ ನಂದಿನಿ ನದಿಗೆ ಹಾರಿದ್ದು, ಆತನಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.
ನದಿಗೆ ಹಾರಿದಾತ ನನ್ನು ಹೊಸ ಬೆಟ್ಟು ನಿವಾಸಿ ಹರೀಶ್‌ ಪೂಜಾರಿ (70) ಎಂದು ಗುರುತಿಸಲಾಗಿದೆ. ಇವರು ಮೂಲತಃ ಕದ್ರಿ ಮಲ್ಲಿಕಟ್ಟೆ ನಿವಾಸಿಯಾಗಿದ್ದು, ತನ್ನೊಂದಿಗೆ ಹೊಸ ಬೆಟ್ಟಿನ ಬಾಡಿಗೆ ಮನೆಯಲ್ಲಿ ವಾಸ ವಿದ್ದರೆಂದು ಹಿರಿಯ ಪುತ್ರ ರಾಕೇಶ್‌ ಪೊಲೀಸರಿಗೆ ತಿಳಿಸಿದ್ದಾರೆ.

ತೀವ್ರ ಅನಾರೋಗ್ಯದಿಂದ ಬಳಲು ತ್ತಿರುವ ಹರೀಶ್‌ ಪೂಜಾರಿಯನ್ನು ವೆನಾÉಕ್‌ ಆಸ್ಪತ್ರೆಗೆ ದಾಖಲಿಸಿದರೂ ಗುಣವಾಗದ ಕಾರ ಣ ಮನೆಗೆ ಕರೆತರಲಾ ಗಿತ್ತು. ಅವ ರು ವಿಪ ರೀತ ನೋವಿನಿಂದ ಬಳಲುತ್ತಿದ್ದರು. ತನ್ನ ಮೇಲೆ ಹಲ್ಲೆಯನ್ನೂ ನಡೆಸುತ್ತಿದ್ದರು. ತಾನು ಕೆಲಸಕ್ಕೆ ಹೋಗಿದ್ದಾಗ ಗುರುವಾರ ಸಂಜೆ ಹೊಸಬೆಟ್ಟಿನಿಂದ ರಿಕ್ಷಾದಲ್ಲಿ ಪಾವಂಜೆ ಸೇತುವೆ ಬಳಿ ಬಂದು ಈ ಕೃತ್ಯವೆಸಗಿದ್ದಾರೆ ಎಂದು ಸುರತ್ಕಲ್‌ ಠಾಣೆಗೆ ನೀಡಿದ್ದ ದೂರಿ ನಲ್ಲಿ ರಾಕೇಶ್‌ ತಿಳಿಸಿದ್ದಾರೆ.

ೊಲೀಸರು, ಅಗ್ನಿಶಾಮಕ ದಳದ ಸಿಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ನದಿಯಲ್ಲಿ ಸುಮಾರು ನಾಲ್ಕು ತಾಸು ಹುಡಕಾಟ ನಡೆಸಿದರೂ ಪ್ರಯೋಜನವಾಗಿಲ್ಲ.

ಕ್ರಿಕೆಟ್‌ ಬೆಟ್ಟಿಂಗ್‌: ಮೂವರ ಬಂಧನ
ಮಂಗಳೂರು: ಮೂಡುಶೆಡ್ಡೆ ಗಾಲ್ಫ್ ಕ್ಲಬ್‌ ಬಳಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಯಲ್ಲಿ ತೊಡಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಬೆಟ್ಟಿಂಗ್‌ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 13ಕ್ಕೆ ಏರಿದೆ.

ಉಳಾಯಿಬೆಟ್ಟಿನ ಬಾಡಿಗೆ ಮನೆಯಲ್ಲಿರುವ ಮಯ್ಯದ್ದಿ (37), ಗುರುಪುರ ಸತ್ಯ ದೇವತಾ ಮಂದಿರ ಬಳಿಯ ನಿವಾಸಿ ಕುಮಾರ್‌ (39), ಮೂಡುಶೆಡ್ಡೆ ಜಾರದಬೆಟ್ಟು ನಿವಾಸಿ ಉಮೇಶ್‌ (47) ಬಂಧಿತರು. ಇವ ರಿಂದ 26 ಸಾ. ರೂ., ಸಹಿತ ಒಟ್ಟು 66 ಸಾ.ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರ್‌ಸಿಬಿ ಮತ್ತು ರಾಜಸ್ಥಾನ್‌ ರಾಯಲ್ಸ್‌ ತಂಡಗಳ ನಡುವಿನ ಏಕದಿನ ಕ್ರಿಕೆಟ್‌ ಪಂದ್ಯಕ್ಕೆ ಮೊಬೈಲ್‌ ಅಪ್ಲಿಕೇಶನ್‌ ಮೂಲಕ ಬೆಟ್ಟಿಂಗ್‌ ನಡೆ ಸು ತ್ತಿದ್ದರೆನ್ನಲಾಗಿದೆ.

ಅಕ್ರಮ ಮರಳು ಸಾಗಾಟ: ಲಾರಿ ವಶ
ಮಂಗಳೂರು: ಅಡ್ಯಾರ್‌ನಿಂದ ಪಡೀಲ್‌ ಮಾರ್ಗವಾಗಿ ಅಕ್ರಮ ವಾಗಿ ಮರಳು ಸಾಗಿ ಸುತ್ತಿದ್ದ ಆರೋಪದಲ್ಲಿ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿದ ಮರಳು ಮತ್ತು ಲಾರಿಯ ಅಂದಾಜು ಮೌಲ್ಯ 31,00,000 ರೂ. ಆಗಿದೆ.

ಗುರುವಾರ ಸಂಜೆ 4 ಗಂಟೆ ವೇಳೆಗೆ ಮರಳು ಸಾಗಾಟ ಪತ್ತೆ ಯಾ ಗಿ ದ್ದು, ಲಾರಿ ಸಹಿತ ವಶಪಡಿಸಿದ ಸೊತ್ತುಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

ಕಾಪು: ಗೆಳೆಯನಿಂದಲೇ ಕಲ್ಲಿನಿಂದ ಹಲ್ಲೆ
ಕಾಪು: ಹಣ ಕೊಡಲು ನಿರಾಕರಿಸಿದವನಿಗೆ ಮಜೂರು ದ್ವಾರದ ಬಳಿ ಸ್ನೇಹಿತನೇ ಕಲ್ಲಿ ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾ ನೆ. ಉಳಿಯಾರಗೋಳಿ ಗ್ರಾಮದ ಕೋತಲಕಟ್ಟೆಯ ರಾಜೇಶ್‌ ಪೂಜಾರಿ ಹಲ್ಲೆ ಗೊಳಗಾಗಿದ್ದು, ಮಲ್ಲಾರು ಗ್ರಾಮದ ಸುಲೈಮಾನ್‌ ಆರೋಪಿ. ಗಾಯಾ ಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು – ರಿಕ್ಷಾ ಢಿಕ್ಕಿ: ವೃದ್ಧೆ ಸಾವು, ಐವರಿಗೆ ಗಾಯ
ಕಾಸರಗೋಡು: ಬಾಲನಡ್ಕದಲ್ಲಿ ಕಾರು-ರಿಕ್ಷಾ ಢಿಕ್ಕಿ ಹೊಡೆದು ಕಾರಿನಲ್ಲಿದ್ದ ವೃದ್ಧೆ ಸಾವಿಗೀಡಾಗಿ, ಐವರು ಗಾಯಗೊಂಡಿದ್ದಾರೆ.

ಕುತ್ತಿಕ್ಕೋಲ್‌ ಕಾವುಂಚಿರದ ಕೆ. ನಾರಾಯಣಿ ಅಮ್ಮ (91) ಅವರು ಸಾವಿಗೀಡಾದರು. ಕಾರಿನಲ್ಲಿದ್ದ ತೇಜಾ ಮೋಳ್‌ (8), ಜಯ ಮೋಹನನ್‌ (40), ನಾರಾಯಣನ್‌ (65), ರಿಕ್ಷಾ ಪ್ರಯಾಣಿಕರಾದ ಅಬ್ದುಲ್ಲ (65) ಮತ್ತು ಖದೀಜತ್‌ ತಬ್‌ಸೀರಾ (16) ಗಂಭೀರ ಗಾಯಗೊಂಡಿದ್ದು, ಅವ ರ ನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next