ಕಡಬ: ನೂಜಿಬಾಳ್ತಿಲ ಗ್ರಾಮದ ಕಟ್ಟತ್ತಡ್ಕ ನಿವಾಸಿ ಕೃಷಿಕ ಸೋಮರಾಜನ್ ಅವರ ಪುತ್ರ ಜಯಪ್ರಕಾಶ್ ಯಾನೆ ಅಣ್ಣಾ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳ ಪಟ್ಟಿಯಲ್ಲಿ ಆತನ ಹೆಸರನ್ನು ಸೇರ್ಪಡೆಗೊಳಿಸಿ ಆತನ ಬಂಧನಕ್ಕಾಗಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ.
Advertisement
ಹದಿನಾಲ್ಕು ವರ್ಷಗಳಿಂದ ಮನೆಯವರ ಸಂಪರ್ಕ ಕಡಿದುಕೊಂಡಿರುವ ಜಯಪ್ರಕಾಶ್ ಸನಾತನ ಸಂಸ್ಥೆಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ. ಮಾಲೆಂಗಾವ್ ಸ್ಫೋಟದ ತನಿಖೆಯ ವೇಳೆ ಕೆಲವು ವರ್ಷಗಳ ಹಿಂದೆ ಎನ್‌ಐಎ ಅಧಿಕಾರಿಗಳು ಕಡಬಕ್ಕೆ ಆಗಮಿಸಿ ಆತನ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು. ಬಳಿಕ ಆತನ ಫೋಟೋ ಇರುವ ಪೋಸ್ಟರ್‌ಗಳನ್ನು ಗ್ರಾಮ ಪಂಚಾಯತ್ ಹಾಗೂ ಕಂದಾಯ ಕಚೇರಿಗಳ ಬಳಿ ಹಚ್ಚಿ ಆತನ ಬಗ್ಗೆ ಸುಳಿವು ನೀಡಿದವರಿಗೆ ನಗದು ಬಹುಮಾನ ನೀಡಲಾಗುವುದು ಎಂದು ಎನ್‌ಐಎ ಪ್ರಕಟಿಸಿತ್ತು. ಜಯಪ್ರಕಾಶ್ ವಿರುದ್ಧ ಅಜೆ¾àರ್ ದರ್ಗಾ ಸ್ಫೋಟ, ಸಂಝೋತಾ ಎಕ್ಸ್‌ಪ್ರೆಸ್ ಬಾಂಬ್ ಸ್ಫೋಟ, ಗೋವಾ ಮತ್ತು ಹೈದರಾಬಾದ್ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿವೆ. ಲೇಖಕಿ ಗೌರಿ ಲಂಕೇಶ್ ಹತ್ಯೆಯ ತನಿಖೆಯ ವೇಳೆಯಲ್ಲಿಯೂ ತನಿಖಾಧಿಕಾರಿಗಳು ಜಯಪ್ರಕಾಶ್‌ನ ಕೈವಾಡದ ಸಾಧ್ಯತೆಯ ಕುರಿತು ಮಾಹಿತಿ ಕಲೆಹಾಕಿದ್ದರು.
ಉಡುಪಿ/ಪಡುಬಿದ್ರಿ: ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಿಡುಗಡೆಗೊಳಿಸಿರುವ ಘಾತಕ ಉಗ್ರರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಉಡುಪಿ ಜಿಲ್ಲೆ ಮೂಳೂರಿನ ಮೊದಿನ್ ಉಮ್ಮರ್ ಬ್ಯಾರಿಯು ಖೋಟಾ ನೋಟು ಚಲಾ ವಣೆಯಲ್ಲಿ ಕುಖ್ಯಾತಿ ಪಡೆದವನಾಗಿದ್ದಾನೆ. ಕೇರಳ ಪೊಲೀಸರು ಈತನನ್ನು ಅರಸಿ ಬಂದಾಗಲೂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಈತ ಖೋಟಾ ನೋಟಿನಿಂದಲೇ ತನ್ನ ಸಾಮ್ರಾಜ್ಯ ಕಟ್ಟಿಕೊಂಡಿದ್ದ.
ಮೂಳೂರಿನಲ್ಲಿ ಹೆದ್ದಾರಿ ಸಮೀಪವೇ ಬೃಹತ್ ಬಂಗಲೆಯೊಂದನ್ನು ನಿರ್ಮಿಸಿಕೊಂಡಿದ್ದ ಈತ ಕೇರಳ ಪೊಲೀಸರ ಹುಡುಕಾಟದ ಬಳಿಕ ಈ ಮನೆಯನ್ನು ಮಾರಿದ್ದ. ಮೂಳೂರು ಸುನ್ನಿ ಸೆಂಟರ್ ಬಳಿಯಲ್ಲಿನ ಜಾಗ ವೊಂದನ್ನೂ ಮಾರಾಟ ಮಾಡಿ ಬಳಿಕ ದುಬಾೖಗೆ ತೆರಳಿದ್ದ. ಸುನ್ನಿ ಸೆಂಟರ್ ಬಳಿಯಲ್ಲಿನ ಜಾಗದಲ್ಲಿ ಫ್ಲಾಟ್‌ಗಳನ್ನು ನಿರ್ಮಿಸುವುದಾಗಿ ಜನರನ್ನು ನಂಬಿಸಿ ಅನೇಕರಿಂದ ಹಣವನ್ನೂ ಪಡೆದುಕೊಂಡಿದ್ದ ಈತನ ವಿರುದ್ಧ ಹಲವಾರು ಚೆಕ್ ಬೌನ್ಸ್ ಕೇಸುಗಳೂ ಇದ್ದವು. ದುಬಾೖನಲ್ಲಿ ಜೈಲುವಾಸಿಯಾಗಿದ್ದ ಈತ ಮುಂದೆ ಬಿಡುಗಡೆಗೊಂಡಿದ್ದು, ಈತನ ಪಾಸ್‌ಪೋರ್ಟನ್ನು ಅಲ್ಲಿನ ಸರಕಾರವು ಹಿಡಿದಿಟ್ಟುಕೊಂಡಿದೆ ಎಂದು ಉಡುಪಿಯ ಪೊಲೀಸ್ ಮೂಲಗಳು ತಿಳಿಸಿವೆ. ಖೋಟಾ ನೋಟು ವ್ಯವಹಾರದಿಂದಲೇ ಈತ ಉಡುಪಿ ಜಿಲ್ಲೆ, ಬೆಂಗಳೂರು, ಹೈದರಾಬಾದ್‌ಗಳಲ್ಲಿ ಅಕ್ರಮ ಆಸ್ತಿಗಳನ್ನು ಖರೀದಿಸಿದ್ದನೆಂಬ ಮಾಹಿತಿ ಲಭ್ಯವಾಗಿದೆ.