Advertisement
ಅವರು ಬುಧವಾರ ಬಿ.ಸಿ.ರೋಡಿನ ಬಂಟವಾಳದ ಬಂಟರ ಭವನದಲ್ಲಿ ದ.ಕ. ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಮೀನುಗಾರಿಕೆ ಅಭಿವೃದ್ಧಿ ದೃಷ್ಟಿ ಯಿಂದ 8 ಮೀನುಗಾರಿಕಾ ಬಂದರು ಗಳ ಡ್ರೆಜ್ಜಿಂಗ್ ಅನ್ನು ಇದೇ ವರ್ಷ ಕೈಗೆತ್ತಿಕೊಳ್ಳಲಾಗುವುದು. ಆಳ ಸಮುದ್ರ ಮೀನುಗಾರಿಕೆಗೆ ಒತ್ತು ನೀಡಿ ಪ್ರಾಯೋಗಿಕವಾಗಿ ಹೈಸ್ಪೀಡ್ ಬೋಟ್‌ಗಳನ್ನು ಸಬ್ಸಿಡಿ ದರದಲ್ಲಿ ನೀಡಲಿದ್ದೇವೆ. ಟೆಂಪಲ್ ಟೂರಿಸಂ ಅಭಿವೃದ್ಧಿಗೂ ಒತ್ತು ನೀಡಲಿದ್ದೇವೆ ಎಂದರು.
Related Articles
ಜಿಲ್ಲೆಯ ಸಮಸ್ಯೆಯಾದ ಕಾನ- ಬಾಣೆ, ಕುಮ್ಕಿ, ಅಕ್ರಮ-ಸಕ್ರಮ, ಡೀಮ್ಡ್ ಫಾರೆಸ್ಟ್, ಸಿಂಗಲ್ ಪ್ಲಾಟ್ ಮೊದಲಾದವುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕರಾ ವಳಿಯ ಕಾರ್ಯಕರ್ತರು ರಾಜ್ಯಕ್ಕೆ ಸ್ಫೂರ್ತಿಯಾಗಿದ್ದು, ಎಲ್ಲಕ್ಕಿಂತ ಮೊದಲು ಪಕ್ಷವನ್ನು ಸಂಘಟಿಸಿ ಮಾದರಿ ಯಾಗಿದ್ದಾರೆ ಎಂದರು.
Advertisement
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮಾತನಾಡಿ, ಕಾರ್ಯಕರ್ತರ ವರ್ಚಸ್ಸು, ಮತದಾರರೊಂದಿಗಿನ ಸಂಬಂಧ ಗಟ್ಟಿಯಾಗಿದ್ದಾಗ ಆಡಳಿತ ಯಶಸ್ವಿಯಾಗಲು ಸಾಧ್ಯ ಎಂದರು.
ಕಾಂಗ್ರೆಸ್‌ಗೆ ನೈತಿಕತೆ ಇಲ್ಲಸಾರಿಗೆ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಕರಾವಳಿ ಜಿಲ್ಲೆಯು ಬಿಜೆಪಿಗೆ ದೇವಮೂಲೆಯಾಗಿದ್ದು, ಇಲ್ಲಿಂದ ಆರಂಭಿಸಿದ ಚುನಾವಣ ಸಿದ್ಧತೆ ಯಶಸ್ವಿಯಾಗಲಿದೆ. ಮುಂದಿನ ಚುನಾವಣೆ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲಲಿದೆ. ವಿಪಕ್ಷ ಕಾಂಗ್ರೆಸ್ ನಮ್ಮ ಪಕ್ಷ, ಸಿಎಂ ಕುರಿತು ಮಾತನಾಡುವ ನೈತಿಕತೆಯನ್ನೇ ಕಳೆದುಕೊಂಡಿದೆ ಎಂದರು. ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಮಾತನಾಡಿ, ಬೂತ್ ಮಟ್ಟದಲ್ಲಿ ಫಲಾನುಭವಿಗಳ ಪಟ್ಟಿ ತಯಾರಿ, ಮತದಾರರ ಪಟ್ಟಿಯ ಅಧ್ಯಯನ, ಗ್ರಾ.ಪಂ. ಸದಸ್ಯರನ್ನು ಸಕ್ರಿಯಗೊಳಿಸುವ ಕಾರ್ಯ ಈ ಮೂರು ಸೂತ್ರಗಳಲ್ಲಿ ಬಿಜೆಪಿ ಕಾರ್ಯಕರ್ತರು ಯಶಸ್ವಿಯಾದರೆ ಪಕ್ಷ ಹೆಚ್ಚಿನ ಮತಗಳಿಸಲು ಸಾಧ್ಯವಾಗಲಿದೆ ಎಂದರು. ರೈತರು, ಮೀನುಗಾರರ ಅಭಿವೃದ್ಧಿ
ಮೀನುಗಾರಿಕೆ, ಬಂದರು ಸಚಿವ ಎಸ್. ಅಂಗಾರ ಮಾತನಾಡಿ, ಕಾಂಗ್ರೆಸ್‌ನಿಂದ ಅವಗಣಿಸಲ್ಪಟ್ಟ ಕರಾವಳಿಯ ರೈತರು, ಮೀನು ಗಾರರ ಆರ್ಥಿಕ ಅಭಿವೃದ್ಧಿ, ಮೂಲ ಸೌಕರ್ಯಕ್ಕೆ ಮುಖ್ಯಮಂತ್ರಿ ಹೆಚ್ಚಿನ ಮುತುವರ್ಜಿ ವಹಿಸಿದ್ದು, ಆಳಸಮುದ್ರ ಮೀನುಗಾರಿಕೆಗೆ ನೆರವು, ಮೀನುಗಾರರಿಗೆ 5,000 ವಸತಿ, 24 ಯೋಜನೆಗಳಿಗೆ 1,870 ಕೋ.ರೂ.ಅನುದಾನ ನೀಡಿದ್ದಾರೆ ಎಂದರು. ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್. ಅಶ್ವತ್ಥನಾರಾಯಣ, ಸಮಾಜ ಕಲ್ಯಾಣ-ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಣ ಸವದಿ, ನಿರ್ಮಲ್‌ಕುಮಾರ್ ಸುರಾನ, ರಾಜ್ಯ ಕಾರ್ಯದರ್ಶಿಗಳಾದ ವಿನಯ್ ಬಿದಿರೆ, ನಯನಾ ಗಣೇಶ್, ಶಾಸಕರಾದ ಸಂಜೀವ ಮಠಂದೂರು, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಡಾ| ಭರತ್ ಶೆಟ್ಟಿ ವೈ., ಡಿ. ವೇದವ್ಯಾಸ ಕಾಮತ್, ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಜಿಲ್ಲಾ ಪ್ರಭಾರಿ ಭಾರತೀಶ್, ಸಹಪ್ರಭಾರಿ ರಾಜೇಶ್ ಕಾವೇರಿ ವೇದಿಕೆಯಲ್ಲಿದ್ದರು. ಸಮ್ಮಾನ
ಮುಖ್ಯ ಮಂತ್ರಿಗಳನ್ನು ಬಂಟ್ವಾಳ ಬಿಜೆಪಿಯ ವತಿಯಿಂದ ಸಮ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ. ಪ್ರಸ್ತಾವನೆಗೈದರು. ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಸ್ವಾಗತಿಸಿದರು. ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ವಂದಿಸಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು ನಿರ್ವಹಿಸಿದರು.