Advertisement

ಯಶ್‌ ಶೆಟ್ಟಿ ಕಣ್ಣಲ್ಲಿ ಸಲಗ ಕನಸು

10:05 AM Mar 14, 2020 | mahesh |

“ಜ್ವಲಂತಂ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ಕರಾವಳಿ ಹುಡುಗ ಯಶ್‌ ಶೆಟ್ಟಿ ಇದೀಗ ಸಾಲು ಸಾಲು ಚಿತ್ರಗಳಲ್ಲಿ ಬಿಝಿಯಾಗಿದ್ದಾರೆ. “ಸೂಜಿದಾರ’ ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದ ಅವರೀಗ ಮತ್ತೂಂದು ಸಿನಿಮಾ “ಕಾಲಾಂತಕ’ ಚಿತ್ರದಲ್ಲೂ ಲೀಡ್‌ ಪಾತ್ರ ಮಾಡಿದ್ದಾರೆ. ಅಂಬರೀಶ್‌ ನಿರ್ದೇಶನದ “ಕಾಲಾಂತಕ’ ವಿಶೇಷ ಕಥೆ ಹೊಂದಿದ್ದು, ಅದೊಂದು ವಿಭಿನ್ನ ಪಾತ್ರ ಇರುವಂತಹ ಚಿತ್ರ. ಇದೀಗ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿರುವ ಸಿನಿಮಾ ಮೇಲೆ ಯಶ್‌ ಶೆಟ್ಟಿಗೆ ಸಾಕಷ್ಟು ಭರವಸೆ ಇದೆ. ಇನ್ನು, “ದುನಿಯಾ’ ವಿಜಯ್‌ ನಿರ್ದೇಶನದ ಕೆ.ಪಿ.ಶ್ರೀಕಾಂತ್‌ ನಿರ್ಮಾಣದ “ಸಲಗ’ ಸಿನಿಮಾ ಕೂಡ ನನಗೊಂದು ಹೊಸ ಇಮೇಜ್‌ ತಂದುಕೊಡಲಿದೆ ಎಂಬ ನಂಬಿಕೆ ಅವರದು. ಆ ಬಗ್ಗೆ ಹೇಳುವ ಯಶ್‌ ಶೆಟ್ಟಿ, “ನಾನು “ದುನಿಯಾ’ ವಿಜಯ್‌ ಅವರ “ಕುಸ್ತಿ’ ಚಿತ್ರ ಮಾಡಬೇಕಿತ್ತು. ಕೆಲ ಕಾರಣಗಳಿಂದ ಅದು ಸೆಟ್ಟೇರಲಿಲ್ಲ. ಆ ನಂತರ “ಸಲಗ’ ಸಿನಿಮಾಗೆ ವಿಜಯ್‌ ಅವರು ಕರೆದು ಅವಕಾಶ ಕೊಟ್ಟರು. ನನ್ನ “ಅಥರ್ವ’ ಚಿತ್ರದ ಟ್ರೇಲರ್‌ ನೋಡಿ “ಸಲಗ’ದಲ್ಲಿ ಸ್ಟ್ರಾಂಗ್‌ ಪಾತ್ರ ಕೊಟ್ಟಿದ್ದಾರೆ. ಅದೊಂದು ನೆಗೆಟಿವ್‌ ರೋಲ್‌. ಸ್ಲಂ ಶೆಟ್ಟಿ ಎಂಬ ಪಾತ್ರ ಇಡೀ ಚಿತ್ರದ ಹೈಲೈಟ್‌ ಎನ್ನಬಹುದು. ಹೈಪರ್‌ ಎನಿಸುವ, ತುಂಬಾನೇ ರಗಡ್‌ ಆಗಿರುವ ನೈಜತೆ ತುಂಬಿರುವ ಪಾತ್ರ. ನಾನು ಈವರೆಗೆ ಮಾಡದಿರುವ ಹೊಸ ಡಿಸೈನ್‌ ಹೊಂದಿರುವ ಪಾತ್ರವದು. ಚಿತ್ರದಲ್ಲಿ ಸದಾ ಲುಂಗಿ, ಪೈಜಾಮ ಧರಿಸಿ, ವಿಶೇಷ ಮ್ಯಾನರಿಸಂ ತೋರಿಸುವ ಪಾತ್ರ. “ಸಲಗ’ದ ನಟನೆ ವಿಷಯದಲ್ಲಿ ಎಜುಕೇಷನ್‌ ಪಡೆದಂತಹ ಅನುಭವ ಆಗಿದೆ. ನನ್ನ ಕೆರಿಯರ್‌ಗೆ “ಸಲಗ’ ದೊಡ್ಡ ಮೆಟ್ಟಿಲು’ ಎಂಬುದು ಯಶ್‌ ಶೆಟ್ಟಿ ಮಾತು.

Advertisement

ಉಳಿದಂತೆ ಯಶ್‌ ಶೆಟ್ಟಿ, ಅನಂತ್‌ ಶೈನ್‌ ನಿರ್ದೇಶನದ “ವಿರಾಟ ಪರ್ವ’ದಲ್ಲಿ ನಟಿಸುತ್ತಿದ್ದು, ಎರಡು ಶೇಡ್‌ ಪಾತ್ರ ಮಾಡಿದ್ದಾರಂತೆ. ಅದೂ ಕೂಡ ಚಾಲೆಂಜಿಂಗ್‌ ಪಾತ್ರ ಎನ್ನುವ ಅವರು, “ಜೋಗಿ’ ಪ್ರೇಮ್‌ ನಿರ್ದೇಶನದ “ಏಕ್‌ ಲವ್‌ ಯಾ’ ಚಿತ್ರದಲ್ಲೂ ನೆಗೆಟಿವ್‌ ಲೀಡ್‌ ಪಾತ್ರ ಮಾಡಿದ್ದಾರೆ. ಉಳಿದಂತೆ “ಕೆಜಿಎಫ್-2′ ಚಿತ್ರದಲ್ಲಿ ಜರ್ನಲಿಸ್ಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ “ಕೃಷ್ಣ ಟಾಕೀಸ್‌’,”ಕಿರಾತಕ-2′, “ಧರಣಿ ಮಂಡಲ ಮಧ್ಯದೊಳಗೆ’, ದಿಗಂತ್‌ ಜೊತೆ “ಮಾರಿಗೋಲ್ಡ್‌’, “ಅಮರ ಪ್ರೇಮ ಕಥಾ’ ಸೇರಿದಂತೆ ಹೊಸಬರ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಬರೀ ನೆಗೆಟಿವ್‌ ಪಾತ್ರಗಳಲ್ಲೇ ಕಾಣಿಸಿಕೊಳ್ಳುವ ಅವರು, “ನಾನೊಬ್ಬ ಕಲಾವಿದ ಆಗಬೇಕು ಅಂತ ಬಂದವನು. ನೆಗೆಟಿವ್‌ ಪಾತ್ರ ನನಗಿಷ್ಟ. ಅದನ್ನು ಬಿಡೋದಿಲ್ಲ. ಎಂಜಾಯ್‌ ಮಾಡಿಕೊಂಡು ಮಾಡ್ತೀನಿ. ಹೀರೋ ಆದಾಗ, ಹೀರೋನೇ ಆಗಿರಬೇಕು. ವಿಲನ್‌ ಆಗಿಬಿಟ್ಟರೆ, ಎಲ್ಲರ ಜೊತೆಗೂ, ಎಲ್ಲಾ ಸಿನಿಮಾಗಳಲ್ಲೂ ನಟಿಸಬಹುದು’ ಎಂಬುದು ಅವರ ಮಾತು. ಈ ವರ್ಷ ದೊಡ್ಡ ಸ್ಟಾರ್ ಚಿತ್ರಗಳಲ್ಲೂ ಯಶ್‌ ಶೆಟ್ಟಿ ನಟಿಸುತ್ತಿರುವ ಅವರು, “ಸಲಗ’ ನನ್ನ ಲೈಫ್ಗೊಂದು ಹೊಸ ನಿರೀಕ್ಷೆ ಹುಟ್ಟಿಸಿರುವ ಚಿತ್ರ’ ಎನ್ನುತ್ತಾರೆ ಯಶ್‌ ಶೆಟ್ಟಿ.

ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next