Advertisement
ಭಾರತೀಯ ಪರಂಪರೆಯಲ್ಲಿ ಕರ್ನಾಟಕ ಬಹುಬಗೆಯ ವೈಶಿಷ್ಟ್ಯಗಳಿಂದ ಅನನ್ಯವಾದ ಸ್ಥಾನ ಪಡೆದಿದೆ. ಸೃಷ್ಟಿ ಶೀಲತೆಯ ಎಲ್ಲ ಮಜಲುಗಳಲ್ಲೂ ಈ ವೈಶಿಷ್ಟéದ ವಿಸ್ತಾರವಿದೆ. ಈ ಪರಂಪರೆ ಯಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿ ರುವ ಕೀರ್ತಿ ಕರ್ನಾಟಕದ ಕರಾವಳಿಗಿದೆ. ತುಳುನಾಡು ಮತ್ತು ಪರಶುರಾಮ ಸೃಷ್ಟಿ ಎಂಬ ಪ್ರತೀತಿ ಜನಪದ, ಸಾಮಾಜಿಕ, ಸಾಂಸ್ಕೃತಿಕ ಮತ್ತಿತರ ಎಲ್ಲ ಪ್ರಕಾರಗಳಲ್ಲೂ ಉಲ್ಲೇಖವಿದೆ.
Related Articles
Advertisement
ಈ ನೆನಪು ಚಿತ್ರಗಳ ಉಲ್ಲೇಖದ ಉದ್ದೇಶ ಇಷ್ಟೇ. ಕಾಲಾನು ಕಾಲಕ್ಕೆ ಅನೇಕ ಪ್ರದೇಶಗಳ ವಿಲೀನ, ವಿಭಜನೆಗಳ ಹೊರತಾ ಗಿಯೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ತಮ್ಮ ತಮ್ಮ ಪರಂಪರೆಯನ್ನು ಅಂತೆಯೇ ಉಳಿಸಿಕೊಂಡ ಕಾರಣ ದಿಂದಾಗಿಯೇ ಇಲ್ಲಿನ ಜನರು ತಮ್ಮ ಆಯ್ದ ಕ್ಷೇತ್ರಗಳಲ್ಲಿ ರಾಷ್ಟ್ರ-ಅಂತಾರಾಷ್ಟ್ರೀಯ ಸಾಧಕರಾಗಲು ಸಾಧ್ಯವಾಗಿದೆ. ಯಾವುದೇ ಪ್ರದೇಶವಾದರೂ ತನ್ನ ಸಾಂಸ್ಕೃತಿಕ ಅಸ್ತಿತ್ವವನ್ನು ಉಳಿಸಿಕೊಂಡಾಗ ಮಾತ್ರ ಆಧುನಿಕತೆಯ ಪಾರ್ಶ್ವ ಪರಿಣಾಮ ಗಳಿಂದ ಪಾರಾಗಬಹುದು. ಮಾನವೀಯ ಮೌಲ್ಯಗಳ ಸಹಿತವಾದ ಜೀವನವನ್ನು ನಡೆಸಲು ಸಾಧ್ಯವಾಗುವುದು.
“ಜಿಲ್ಲೆ’ಯು ತಲಪಾಡಿಯಿಂದ ಬೈಂದೂರು ತನಕ ಸಮುದ್ರ ದಡವನ್ನು ಹೊಂದಿದೆ. ಪೂರ್ವ ದಿಕ್ಕಿನಲ್ಲಿ ಅತ್ಯಪರೂಪದ ಜೀವವೈವಿಧ್ಯ ಜಾಲದ ಸಹ್ಯಾದ್ರಿ ಪರ್ವತ ಶ್ರೇಣಿ ಇದೆ. ಇನ್ನೆರಡು ದಿಕ್ಕುಗಳಲ್ಲಿ ಮಹಾ ನಗರಗಳಾದ ಮುಂಬಯಿ ಮತ್ತು ಚೆನ್ನೈಯತ್ತ…
ಕರಾವಳಿಯ ಈ ಭಾಗದ ಸೌಂದರ್ಯವನ್ನು ಸಹಸ್ರ ಮಾನಗಳ ಹಿಂದೆಯೇ ಪಾಡªನಗಳಲ್ಲಿ ವರ್ಣಿಸಲಾಗಿದೆ. ಒಂದು ಉಲ್ಲೇಖ ಹೀಗಿದೆ:ಸತ್ತಿಗೆದಾತ್ ಮಲ್ಲೆ
ಹರಿವಾಣದಾತ್ ಉರುಟು
ಪಣವುದಾತ್ ಪೊರ್ಲು
ತಿರ್ತ್ ತುಳುರಾಜ್ಯ ತೋಜುಂಡು
(ಕೊಡೆಯಷ್ಟು ದೊಡ್ಡದು, ಹರಿವಾಣದಷ್ಟು ದುಂಡಗೆ, ನಾಣ್ಯದಷ್ಟು ಅಂದ, ಕೆಳಗೆ ತುಳುರಾಜ್ಯ ಕಾಣಿಸುತ್ತಿದೆ)
ಇಂತಹ ಅನೇಕಾನೇಕ ದೃಷ್ಟಾಂತಗಳು ಇಲ್ಲಿನ ಜನಪದೀಯ ಪರಂಪರೆಯಲ್ಲಿ ಉಲ್ಲೇಖಗೊಂಡಿವೆ, ಶಾಸನಗಳಲ್ಲಿ ದಾಖ ಲಾಗಿವೆ. ಬಾಯ್ದೆರೆಯಾಗಿ ಕೂಡ ತಲೆಮಾರುಗಳಿಂದ ತಲೆಮಾರುಗಳಿಗೆ ಹರಿದುಕೊಂಡು ಬಂದಿದೆ. ಈ ಪರಿಸರದ ಅನನ್ಯ ಸಾಂಸ್ಕೃತಿಕ ಸ್ವರೂಪಕ್ಕೆ ಮತ್ತಷ್ಟು ಮೆರುಗನ್ನು ತುಂಬಿದೆ. ಇಷ್ಟೆಲ್ಲ ವಾಸ್ತವಗಳ ನಡುವೆ ಜಿಲ್ಲೆಯ ಸಾಂಸ್ಕೃತಿಕ, ಜನಪದ ಕ್ಷೇತ್ರಗಳ ಬಗೆಗಿನ ಸಮಕಾಲೀನವಾದ ಚಿಂತನೆಗಳು ಹೇಗಿವೆ? ಈ ಕುರಿತಾದ ಜಿಜ್ಞಾಸೆಯೇ ಇಲ್ಲಿನ ಮೂಲ ಆಶಯ. ಯಾರೂ ಏನು ಮಾಡಬೇಕಾಗಿಲ್ಲ. ಸಹಸ್ರಾರು ವರ್ಷಗಳ ಈ ಪರಂಪರೆ ಶಾಶ್ವತವಾಗಿರುತ್ತದೆ ಎಂಬ ಮಾತು ಕೂಡ ಕೇಳಿರಬಹುದು. ಅದು ಕೂಡ ಹೌದು. ಈ ಮೌಲ್ಯಗಳು ಸುರಕ್ಷೆಯಾಗಬೇಕು. ಇಲ್ಲಿನ ಪ್ರಕೃತಿಯ ವೈಶಿಷ್ಟ್ಯವೇ ಇಲ್ಲಿನ ಅನನ್ಯ ಜೀವನಶೈಲಿಯನ್ನು ರೂಪಿಸಿದೆ. ಇದು ಆಚಾರ, ವಿಚಾರ, ಉಡುಗೆ, ತೊಡುಗೆ ಆಹಾರ ಪದ್ಧತಿ, ನಾಗರಿಕ ಸ್ಪಂದನೆಗಳಲ್ಲೆಲ್ಲ ಪ್ರಭಾವ ಬೀರುತ್ತಿದೆ. ಈ ಪ್ರಭಾವದ ಅನುಭಾವ ಇಂದಿನ ಅತ್ಯಗತ್ಯ. ಇದನ್ನು ರಕ್ಷಿಸಬೇಕಾದವರು ಯುವಜನತೆ. ಜಿಲ್ಲೆಯು ಇಂದಿಗೂ ಬಹುಹಳ್ಳಿಗಳನ್ನು ಹೊಂದಿರುವ ಪ್ರದೇಶ. ಕೃಷಿ, ತೋಟಗಾರಿಕೆ, ಮೀನುಗಾರಿಕೆ ಇತ್ಯಾದಿಗಳೆಲ್ಲವೂ ಆಧುನಿಕ ತಂತ್ರಜ್ಞಾನದ ಜತೆಜತೆಯೂ ಉಳಿದುಕೊಂಡಿದೆ ಮತ್ತು ಬಹುಜನತೆಯ ಜೀವನಾಧಾರವೂ ಆಗಿದೆ. ಈ ಎಲ್ಲ ವಾಸ್ತವಗಳ ಅರಿವನ್ನು ಮುಂದಿನ ಪೀಳಿಗೆಯವರು ಹೊಂದ ಬೇಕು ಅನ್ನುವುದು ಒಟ್ಟು ಚಿಂತನೆಯ ಸಾರಾಂಶ. ಅಂದಹಾಗೆ; ಯುವಜನತೆ ನಮ್ಮ ಮಾತು ಕೇಳುತ್ತಿಲ್ಲ ಅಂತ ಹಿರಿಯರ ದೂರು. ಹಿರಿಯರು ನಮ್ಮನ್ನು ಅರ್ಥ ಮಾಡಿ ಕೊಳ್ಳುತ್ತಿಲ್ಲ ಎಂಬುದು ಯುವಜನತೆಯ ಪ್ರತಿದೂರು! ಇದಕ್ಕೇನು ಪರಿಹಾರ? -ಮನೋಹರ ಪ್ರಸಾದ್