Advertisement
ಕರಾವಳಿಯಲ್ಲಿ ಒಟ್ಟು 1,816 ಶಾಲೆಗಳಿವೆ. ಅಂದಾಜು ಮಳೆ ಹಾನಿಯ ಬಗ್ಗೆ ವಲಯ ಶಿಕ್ಷಣಾಧಿಕಾರಿಗಳು ಆಯಾ ಶಾಲಾ ಮುಖ್ಯಸ್ಥರಿಂದ ವರದಿ ಪಡೆದು ಜಿಲ್ಲಾ ಶಿಕ್ಷಣಾ ಧಿಕಾರಿಗಳಿಗೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ರಾಜ್ಯ ಸರಕಾರಕ್ಕೆ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಹಾನಿಯಾಗಿದ್ದರೂ ಪಾಠ ಪ್ರವಚನ ನಡೆಸಲು ಅಡ್ಡಿಯಾಗಿಲ್ಲ. ಹೀಗಾಗಿ ಬೋಧನೆ ಎಂದಿನಂತೆ ಪಾಠಗಳು ನಡೆಯುತ್ತಿವೆ. ಕೊಠಡಿಗೆ ಹಾನಿಯಾಗಿರುವ ಕೆಲವೆಡೆ ಮಾತ್ರ ಅದೇ ಶಾಲೆಯ ಇನ್ನೊಂದು ಕೊಠಡಿಯಲ್ಲಿ ತರಗತಿ ನಡೆಸಲಾಗುತ್ತಿದೆ.
ಉಡುಪಿ ಜಿಲ್ಲೆಗೆ ಹೋಲಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಶಾಲೆಗಳಿಗೆ ಹಾನಿಯಾಗಿದೆ. ಜಿಲ್ಲೆಯ ಒಟ್ಟು 7 ವಲಯಗಳಲ್ಲಿ 221 ಶಾಲೆ ಗಳಿಗೆ ಹಾನಿಯಾಗಿದೆ. ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿ ರುವ ಅಂಕಿ ಅಂಶದ ಪ್ರಕಾರ ಬಂಟ್ವಾಳ ವಲಯದಲ್ಲಿ ಆಗಿರುವ ಹಾನಿ ಹೆಚ್ಚು. ಮಂಗಳೂರು ದಕ್ಷಿಣ ವಲಯದಲ್ಲಿ 19 ಪ್ರಾಥಮಿಕ, 6 ಪ್ರೌಢ ಸೇರಿ ಒಟ್ಟು 25 ಶಾಲೆ, ಮಂಗಳೂರು ಉತ್ತರದಲ್ಲಿ 16 ಪ್ರಾಥಮಿಕ ಮತ್ತು 3 ಪ್ರೌಢ ಸೇರಿ 19 ಶಾಲೆ, ಬೆಳ್ತಂಗಡಿ ವಲಯದಲ್ಲಿ ಒಟ್ಟು 31 ಶಾಲೆ, ಬಂಟ್ವಾಳದಲ್ಲಿ 68 ಪ್ರಾಥಮಿಕ, 13 ಪ್ರೌಢ ಸೇರಿ 81 ಶಾಲೆ, ಪುತ್ತೂರು ಮತ್ತು ಕಡಬಗಳಲ್ಲಿ 38 ಪ್ರಾಥಮಿಕ ಮತ್ತು 2 ಪ್ರೌಢ ಸೇರಿ 40 ಶಾಲೆ, ಸುಳ್ಯದಲ್ಲಿ 23 ಪ್ರಾಥಮಿಕ ಮತ್ತು 2 ಪ್ರೌಢ ಸೇರಿ 25 ಶಾಲೆಗಳಿಗೆ ಹಾನಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ 5 ವಲಯಗಳಿದ್ದು, 115 ಶಾಲೆಗಳಿಗೆ ಹಾನಿಯಾಗಿದೆ. ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿರುವ ಅಂಕಿ ಅಂಶದ ಪ್ರಕಾರ ಉಡುಪಿ ವಲಯದಲ್ಲಿ 9 ಪ್ರಾಥಮಿಕ, 3 ಪ್ರೌಢ ಸೇರಿ 12 ಶಾಲೆ, ಕುಂದಾಪುರ ಮತ್ತು ಬೈಂದೂರು ವಲಯದ ಅರ್ಧಭಾಗ ಸೇರಿ ಒಟ್ಟು 20 ಶಾಲೆ, ಬ್ರಹ್ಮಾವರದ 7 ಪ್ರಾಥಮಿಕ ಮತ್ತು 1 ಪ್ರೌಢ ಸೇರಿ 8 ಶಾಲೆ, ಕಾರ್ಕಳದಲ್ಲಿ 20 ಪ್ರಾಥಮಿಕ ಮತ್ತು 1 ಪ್ರೌಢ ಸೇರಿ 21 ಶಾಲೆಗಳು, ಬೈಂದೂರು (ಕುಂದಾಪುರ ವಲಯದ ಅರ್ಧಭಾಗ ಸೇರಿ)ನಲ್ಲಿ ಒಟ್ಟು 51 ಪ್ರಾಥಮಿಕ ಮತ್ತು 3 ಪ್ರೌಢ ಸೇರಿ ಒಟ್ಟು 54 ಶಾಲೆಗಳಿಗೆ ಹಾನಿಯಾಗಿದೆ.
Related Articles
ಮಳೆ – ನೆರೆಯಿಂದಾಗಿ ದ.ಕ. ಜಿಲ್ಲೆಯಲ್ಲಿ 220ಕ್ಕೂ ಹೆಚ್ಚಿನ ಶಾಲೆಗಳಿಗೆ ಹಾನಿಯುಂಟಾಗಿದೆ. ಆದರೆ ಎಲ್ಲ ಕಡೆ ಎಂದಿನಂತೆ ಪಾಠ ನಡೆಯುತ್ತಿದೆ. ಸದ್ಯ ಅಪಾಯದ ಸ್ಥಿತಿಯಲ್ಲಿ ಯಾವುದೇ ಶಾಲೆಗಳಿಲ್ಲ. ಹಾನಿ ಅಂದಾಜು ಲೆಕ್ಕಾಚಾರ ನಡೆಯುತ್ತಿದೆ.
– ವೈ. ಶಿವರಾಮಯ್ಯ ದ.ಕ. ಡಿಡಿಪಿಐ
Advertisement
ರಾಜ್ಯ ಸರಕಾರಕ್ಕೆ ವರದಿಭಾರೀ ಮಳೆ ಮತ್ತು ನೆರೆಯಿಂದಾಗಿ ದ.ಕ. ಜಿಲ್ಲೆಯಲ್ಲಿ ಹಾನಿಗೊಳಗಾದ ಶಾಲೆಗಳ ಬಗೆಗಿನ ವರದಿಯನ್ನು ಈಗಾಗಲೇ ಡಿಡಿಪಿಐ ನೀಡಿದ್ದಾರೆ. ಈ ವರದಿಯನ್ನು ರಾಜ್ಯ ಸರಕಾರಕ್ಕೆ ನೀಡಲಾಗಿದೆ.
– ಶಶಿಕಾಂತ್ ಸೆಂಥಿಲ್
ದ.ಕ. ಜಿಲ್ಲಾಧಿಕಾರಿ -ನವೀನ್ ಭಟ್ ಇಳಂತಿಲ