Advertisement

ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ ಪತನದ ಗಾಯಾಳು ಮಹಿಳಾ ಪೈಲಟ್‌ ಸಾವು

05:16 PM Mar 28, 2018 | Team Udayavani |

ಮುಂಬಯಿ : ಕಳೆದ ಮಾರ್ಚ್‌ 10ರಂದು ರಾಯಗಢದ ಮುರೂದ್‌ ಸಮೀಪ ಪತನಗೊಂಡಿದ್ದ ಕೋಸ್ಟ್‌ ಗಾರ್ಡ್‌ ಚೇತಕ್‌ ಹೆಲಿಕಾಪ್ಟರ್‌ನ ಮಹಿಳಾ ಸಹ ಪೈಲಟ್‌ ಆಸ್ಪತ್ರೆಯಲ್ಲಿ  17 ದಿನಗಳ ಜೀವನ್ಮರಣ ಹೋರಾಟದ ಬಳಿಕ ಕೊನೆಯುಸಿರೆಳೆದಿರುವುದಾಗಿ ವರದಿಯಾಗಿದೆ.

Advertisement

ಕೋಸ್ಟ್‌ ಗಾರ್ಡ್‌ ಚೇತಕ್‌ ಹೆಲಿಕಾಪ್ಟರ್‌ನ ಸಹ ಪೈಲಟ್‌, ಅಸಿಸ್ಟೆಂಟ್‌ ಕಮಾಂಡೆಂಟ್‌ ಕ್ಯಾಪ್ಟನ್‌ ಪೆನ್ನೀ ಚೌಧರಿ ಅವರಿಗೆ ಹೆಲಿಕಾಪ್ಟರ್‌ ಪತನದ ವೇಳೆ ರೋಟರ್‌ ತಲೆಗೆ ಬಡಿದು ಗಂಭೀರ ಗಾಯವಾಗಿತ್ತು. ಅವರನ್ನು ದಕ್ಷಿಣ ಮುಂಬಯಿಯ ಕೊಲಾಬಾದಲ್ಲಿನ ಐಎನ್‌ಎಚ್‌ಎಸ್‌ ಅಶ್ವಿ‌ನಿ ನೇವಲ್‌ ಆಸ್ಪತ್ರೆಗೆ ಸೇರಿಸಲಾಗಿತ್ತು. 

ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದ  ಪೆನ್ನಿ ಚೌಧರಿ ಕಳೆದ 17 ದಿನಗಳಿಂದಲೂ ವೆಂಟಿಲೇಟರ್‌ನಲ್ಲಿದ್ದರು. ನಿನ್ನೆ ರಾತ್ರಿ ಆಕೆ ಕೊನೆಯುಸಿರೆಳೆದರೆಂದು ಕೋಸ್ಟ್‌ ಗಾರ್ಡ್‌ ಪಿಆರ್‌ಓ (ಪಶ್ಚಿಮ) ಕಮಾಂಡೆಂಟ್‌ ಅವಿನಂದನ್‌ ಮಿತ್ರಾ ತಿಳಿದರು. 

Advertisement

Udayavani is now on Telegram. Click here to join our channel and stay updated with the latest news.

Next