ಮಂಗಳೂರು: ಕಾಫಿ ಡೇ ಮಾಲೀಕ, ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಅಳಿಯ ವಿಜಿ ಸಿದ್ದಾರ್ಥ ಗಾಗಿ ಕಲ್ಲಾಪುವಿನ ನೇತ್ರಾವತಿ ನದಿಯಲ್ಲಿ ಕರಾವಳಿ ಪಡೆ, ಮುಳುಗು ತಜ್ಞರು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಏತನ್ಮಧ್ಯೆ ಸಮುದ್ರದಲ್ಲಿ ಹೋವರ್ ಕ್ರಾಫ್ಟ್ ಶೋಧ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಿದೆ. ಸತತ ಹುಡುಕಾಟದ ನಡುವೆಯೂ ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಇದು ನಮ್ಮಲ್ಲೇ ಮೊದಲು! : ಸಿದ್ದಾರ್ಥ್ ನದಿಗೆ ಹಾರುವುದನ್ನು ನೋಡಿದ್ದ ಆ ವ್ಯಕ್ತಿ ಯಾರು!?
ಸಿದ್ದಾರ್ಥ ಸೋಮವಾರ ಸಂಜೆಯಿಂದ ಮಂಗಳೂರು-ಉಳ್ಳಾಲ ಸಮೀಪ ನಿಗೂಢವಾಗಿ ನಾಪತ್ತೆಯಾಗಿದ್ದರು. ಸಿದ್ದಾರ್ಥ ನಾಪತ್ತೆಯಾಗಿರುವ ನೇತ್ರಾವತಿ ನದಿ, ಅಳಿವೆ ಬಾಗಿಲು ಸೇರಿದಂತೆ ವಿವಿಧೆಡೆ ಎನ್ ಡಿಆರ್ ಎಫ್, ಅಗ್ನಿಶಾಮಕ ದಳ, ಗೃಹ ರಕ್ಷಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: ಎಸ್ ಎಂಕೆ ಅಳಿಯ ಸಿದ್ದಾರ್ಥ 24 ಬ್ಯಾಂಕ್ ಗಳಲ್ಲಿ ಪಡೆದಿರುವ ಸಾಲ ಎಷ್ಟು ಗೊತ್ತಾ?
ಅಲ್ಲದೇ ಕೋಸ್ಟ್ ಗಾರ್ಡ್ ಇದೀಗ ಹಳೆ ಮಂಗಳೂರು ಬಂದರಿನಿಂದ ಐಸಿಜಿಎಸ್ ರಾಜ್ ದೂತ್ ಹಡಗನ್ನು ಪ್ಯಾಟ್ರೋಲಿಂಗ್ ಗೆ ಬಳಸಿಕೊಂಡಿದೆ. ಬಂದರು ಅಳಿವೆ ಪ್ರದೇಶದಲ್ಲಿ ತೀವ್ರ ಕಣ್ಗಾವಲಿಗಾಗಿ ರಾಜ್ ದೂತ್ ನೌಕೆಯನ್ನು ಬಳಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ. ಅಲ್ಲದೇ ಐಸಿಜಿಎಸ್ ಸಾವಿತ್ರಿಬಾಯಿ ಫುಲೆ ಹಡಗನ್ನು ಹೆಚ್ಚುವರಿಯಾಗಿ ಬಳಸಲು ನಿಯೋಜಿಸಲಾಗಿದೆ ಎಂದು ಕೋಸ್ಟ್ ಗಾರ್ಡ್ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಎಸ್ ಎಂಕೆ ಅಳಿಯ ನಾಪತ್ತೆ ನಿಗೂಢ; ಸಿದ್ದಾರ್ಥ ಬರೆದಿಟ್ಟ ಪತ್ರದಲ್ಲಿ ಕಾರಣ ಬಹಿರಂಗ
ಎನ್ ಡಿಆರ್ ಎಫ್: ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ 27 ಮಂದಿಯ ತಂಡ 4 ಬೋಟ್ ಗಳು ಹಾಗೂ ಆಳ ಸಮುದ್ರ ಮುಳುಗು ತಜ್ಞರು ಕೂಡಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕರಾವಳಿ ಕಾವಲು ಪಡೆ: ಕರಾವಳಿ ಕಾವಲು ಪಡೆಯ 2 ಕೋಸ್ಟ್ ಗಾರ್ಡ್ ಹಡಗು ಮತ್ತು ಸಿಬ್ಬಂದಿ ಕೂಡಾ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.