Advertisement

Karkala ವಿದ್ಯಾದಾನದಲ್ಲಿ ಕರಾವಳಿ ಮುಂದು: ಸಚಿವ ಮಧು ಬಂಗಾರಪ್ಪ

12:17 AM Dec 24, 2023 | Team Udayavani |

ಕಾರ್ಕಳ: ಕರಾವಳಿ ಮಂದಿ ಶಿಕ್ಷಣ ಹೊಂದುವುದರಲ್ಲಷ್ಟೆ ಅಲ್ಲ ಶಿಕ್ಷಣ ನೀಡುವುದರಲ್ಲಿ ಮುಂದಿದೆ. ರಾಜ್ಯದ ಶೇ. 90ರಷ್ಟು ಮಂದಿ ಕರಾವಳಿ ಭಾಗದಲ್ಲೆ ಶಿಕ್ಷಣ ಪಡೆಯುತ್ತಿದ್ದು ವಿದ್ಯಾದಾನದಲ್ಲಿ ಕರಾವಳಿ ಮುಂಚೂಣಿಯಲ್ಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

Advertisement

ಕಾರ್ಕಳದ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಅಜೆಕಾರ್‌ ಪದ್ಮ ಗೋಪಾಲ್‌ ಎಜುಕೇಶನ್‌ ಟ್ರಸ್ಟ್ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ ಹಾಗೂ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ್‌ ರಾಮಾನುಜನ್‌ರವರ ಜನ್ಮದಿನದಂಗವಾಗಿ ಶನಿವಾರ ನಡೆದ ರಾಷ್ಟ್ರೀಯ ಗಣಿತ ದಿನಾಚರಣೆ ಮತ್ತು ಸಾಧಕ ವಿದ್ಯಾರ್ಥಿಗಳ ಸಮ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ 76 ಸಾವಿರ ಶಾಲೆಗಳ ಪೈಕಿ 1 ಕೋಟಿ 20 ಲಕ್ಷ ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಣ ಇಲಾಖೆಯ ಜವಾಬ್ದಾರಿಯನ್ನು ಹೊತ್ತಿದ್ದೇನೆ. ಇಲಾಖೆಯಲ್ಲಿ ಬಹಳಷ್ಟು ಸಮಸ್ಯೆಯಿದೆ. ಅವೆಲ್ಲದಕ್ಕೂ ಪರಿಹಾರ ನೀಡಬೇಕೆನ್ನುವ ಹುಮ್ಮಸ್ಸು ಇದೆ. ಅದನ್ನು ಪ್ರಾಮಾಣಿಕವಾಗಿ ಮಾಡುವೆ ಎಂದರು.

ಜ್ಞಾನ, ಸಂಸ್ಕಾರ
ಎರಡು ನೀಡುತ್ತಿದೆ
ಶಾಸಕ, ಮಾಜಿ ಸಚಿವ ವಿ.ಸುನಿಲ್‌ ಕುಮಾರ್‌ಅಧ್ಯಕ್ಷತೆ ವಹಿಸಿ ಮಾತನಾಡಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆ ಸಂಸ್ಕಾರ ಮತ್ತು ಜ್ಞಾನ ಎರಡನ್ನು ಜತೆಯಾಗಿ ನೀಡುತ್ತಿರುವುದು ಸಣ್ಣ ವಿಷಯವಲ್ಲ . ಹೆತ್ತವರನ್ನು ಗೌರವಿಸುವ ಸಂದೇಶವನ್ನು ಸಂಸ್ಥೆ ಮಾಡುತ್ತಿದೆ ಎಂದರು.

ಶಾಸಕ ಯಶ್‌ಪಾಲ್‌ ಎ. ಸುವರ್ಣ ಮಾತನಾಡಿ ಶಿಸ್ತು, ಗುಣಮಟ್ಟ, ಸಂಸ್ಕಾರವನ್ನು ಈ ಶಿಕ್ಷಣ ಸಂಸ್ಥೆ ನೀಡುತ್ತಿದೆ. ಸಂಸ್ಥೆಯ ಮುಖ್ಯಸ್ಥ ಸುಧಾಕರ ಶೆಟ್ಟಿ ಕಲ್ಪನೆ ಮೋದಿ ಕನಸಿಗೆ ಪೂರಕವಾಗಿದೆ ಎಂದರು.

Advertisement

ಕಾರ್ಕಳದ ಮಾಜಿ ಶಾಸಕ ಎಚ್‌. ಗೋಪಾಲ ಭಂಡಾರಿಯವರ ಪತ್ನಿ ಪ್ರಕಾಶಿನಿ. ಜಿ.ಭಂಡಾರಿ ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಪುಷ್ಪ ನೀಡಿ ಸ್ಟೆತೊಸ್ಕೋಪ್‌ ತೊಡಿಸಿದರು. ಪಿಆರ್‌ಒ ಜ್ಯೋತಿಪದ್ಮನಾಭ ಭಂಡಿ ಉಪಸ್ಥಿತರಿದ್ದರು. ಎಪಿಜಿಇಟಿಯ ಅಧ್ಯಕ್ಷ ಡಾ| ಸುಧಾಕರ ಶೆಟ್ಟಿ ಪ್ರಸ್ತಾವನೆಗೈದರು. ಸಂಗೀತ ಕುಲಾಲ್‌ ನಿರೂಪಿಸಿದರು. ಟ್ರಸ್ಟಿ ಅನಿಲ್‌ ಕುಮಾರ್‌ ವಂದಿಸಿದರು.

ಸಾಧಕ ವಿದ್ಯಾರ್ಥಿಗಳ ಸಮ್ಮಾನ
ಜೆಇಇ ಅಡ್ವಾನ್ಸ್ಡ್ ಮೂಲಕ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಪ್ರವೇಶ ಗಳಿಸಿದ ಇಬ್ಬರು, ಜೆಇಇ ಮೈನ್‌ ಮೂಲಕ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಪ್ರವೇಶಿಸಿದ ನಾಲ್ವರು, ನೀಟ್‌ ಮೂಲಕ ಎಂಬಿಬಿಎಸ್‌ ಪ್ರವೇಶ ಗಳಿಸಿದ 108, ಕೆಸಿಇಟಿ ಎಂಜಿನಿಯರಿಂಗ್‌ನಲ್ಲಿ ಒಂದು ಸಾವಿರದೊಳಗಿನ ರ್‍ಯಾಂಕ್‌ ಗಳಿಸಿದ 24 ವಿದ್ಯಾರ್ಥಿಗಳನ್ನು, ಸಿ.ಎ. ಫೌಂಡೇಶನ್‌ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸಾಧಕರನ್ನು ಹಾಗೂ ಕ್ರೀಡಾ ಸಾಧಕರನ್ನು ಸಮ್ಮಾ ನಿಸಲಾಯಿತು.

ಸೇನೆಗೆ ದೇಣಿಗೆ
ಎಂಬಿಬಿಎಸ್‌ಗೆ ಪ್ರವೇಶ ಪಡೆದ 108 ವಿದ್ಯಾರ್ಥಿಗಳ ಪರವಾಗಿ ತಲಾ 2 ಸಾವಿರದಂತೆ 20 ಲಕ್ಷದ 16 ಸಾವಿರ ರೂ. ಮೊತ್ತದ ಚೆಕ್‌ ಅನ್ನು ಭೂಸೇನೆಗೆ ದೇಣಿಗೆಯಾಗಿ ನೀಡಲಾಯಿತು. ಕಾಲೇಜಿನ ಪತ್ರಿಕೆಯ 36ನೇ ಆವೃತ್ತಿಯನ್ನು ಬಿಡುಗಡೆಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next