Advertisement
ದೇಶಾದ್ಯಂತ 1900ರ ವೇಳೆ ಬ್ರಿಟಿಷರ ವಿರುದ್ಧ ಹೋ ರಾಟಕ್ಕೆ ತಾರ್ಕಿಕ ಸ್ವರೂಪ ದೊರೆಯುತ್ತಿದ್ದಂತೆ ಇಲ್ಲಿ ಜನ ಜಾಗೃತಿಯಾಯಿತು. ಕರಾವಳಿಯ ಸ್ವಾತಂತ್ರ್ಯ ಹೋರಾ ಟಗಾರರ ತ್ಯಾಗಕ್ಕೆ ಇಲ್ಲಿ ನಿದರ್ಶನವಾಗಿ ದೇಶಭಕ್ತ ಕಾರ್ನಾಡು ಸದಾಶಿವ ರಾಯರನ್ನು ಸಾಂಕೇತಿಕವಾಗಿ ಉಲ್ಲೇಖೀಸಬಹುದು. ಗಾಂಧೀಜಿಯವರ ಕರೆಯಿಂದ ಪ್ರಭಾವಿತರಾಗಿ ಅಹಿಂಸಾತ್ಮಕ ಹೋರಾಟದಿಂದ ಪ್ರೇರೇಪಿತರಾಗಿ ಸದಾಶಿವ ರಾಯರು ಇಲ್ಲಿ ಅನೇಕ ಹೋರಾಟಗಾರರನ್ನು ಸಂಘಟಿಸಿದರು. ವಿವಿಧ ಪ್ರದೇ ಶಗಳ ಮನೆತನ ಕುಟುಂಬಗಳೂ ಕೂಡ ಹೋರಾಟದಲ್ಲಿ ಭಾಗವಹಿಸಲು ಈ ಮೂಲಕ ಸ್ಫೂರ್ತಿಯಾದರು. ಆಗರ್ಭ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಅವರು ಸರ್ವಸ್ವವನ್ನು ಸ್ವಾತಂತ್ರ್ಯ ಹೋರಾಟಕ್ಕೆ ತ್ಯಾಗ ಮಾಡಿದರು. ಅವರ ಈ ನಿಸ್ವಾರ್ಥ ತ್ಯಾಗಕ್ಕಾಗಿಯೇ ದೇಶಭಕ್ತ ಎಂಬ ಗೌರವವನ್ನು ಸಂಪಾದಿಸಿದವರು. ಇಂದಿಗೂ ಕೂಡ ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅವರಿಗೆ ಗೌರವದ ಸ್ಥಾನ ಪ್ರಾಪ್ತವಿದೆ.
Related Articles
Advertisement
ಜೈಲು ವಾಸ ಅನುಭವಿಸಿದವರು, ಪೊಲೀಸರ ಹಿಂಸೆಗೆ ಗುರಿಯಾದವರು, ಜಾತಿಮತ ಭೇದವಿಲ್ಲದೆ ಸಂಘ ಟಿತರಾಗಿ ಹೋರಾಡಿದವರು ಕರಾವಳಿಯಲ್ಲಿಸಹಸ್ರಾರು ಮಂದಿ. ನೋವಿನ ಸಂಗತಿ ಎಂದರೆ ಗಾಂಧೀಜಿಯವರ ಭೇಟಿ ಸಹಿತ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಯಾವುದೇ ಮ್ಯೂಸಿಯಂ ಸ್ಥಾಪನೆಯಾಗಿಲ್ಲ ಅನ್ನುವುದು. ಗಾಂಧೀಜಿ ಭೇಟಿ ನೀಡಿದ ವಿವಿಧ ಸಂಘ ಸಂಸ್ಥೆಗಳಲ್ಲಿ ಕೆಲವು ದಾಖಲೆಗಳಿವೆ. ಆದರೆ ಒಟ್ಟು ಹೋರಾಟಕ್ಕೆ ಸಂಬಂಧಿಸಿದ ಇತಿಹಾಸವನ್ನು ಪಡಿಮೂಡಿಸುವ ಯಾ ವುದೇ ಕಾರ್ಯ ಈ ಪ್ರದೇಶದ ಆಡಳಿತ ವ್ಯವಸ್ಥೆಯಿಂದ ನಡೆದಿಲ್ಲ. ಈ ಪವಿತ್ರ ಹೋರಾಟದ ಇತಿಹಾಸವನ್ನು ಮುಂದಿನ ಪೀಳಿಗೆಗೆ ದಾಖಲಿಸುವುದು ಈ ಮೂಲಕ ಅಸಾಧ್ಯವಾಗಿದೆ. ಕರಾವಳಿಯ ಜನತೆ ಉಪ್ಪಿನ ಸತ್ಯಾ ಗ್ರಹದಲ್ಲಿ ಪಾಲ್ಗೊಂಡರು. ಕ್ವಿಟ್ ಇಂಡಿಯಾ ಚಳ ವಳಿಯಲ್ಲಿ ಭಾಗವಹಿಸಿ ಪೊಲೀಸರ ಏಟಿಗೆ ಗುರಿಯಾದರು. ಜೈಲುವಾಸವನ್ನೂ ಜನತೆ ಲೆಕ್ಕಿಸದೆ ಗಾಂಧೀಜಿಯವರ ಮತ್ತು ಸ್ವಾತಂತ್ರ್ಯ ಹೋರಾಟದ ನಾಯಕರ ಕರೆಯನ್ನು ಅನುಸರಿಸಿದರು. ಆದ್ದರಿಂದಲೇ ಕರಾವಳಿಯ ಸ್ವಾತಂತ್ರ್ಯ ಹೋರಾಟದ ಹೆಜ್ಜೆ ಗುರುತು ಗಳನ್ನು ದಾಖಲಿಸಲು ಇದು ಸಕಾಲ ಎಂದೇ ಹೇಳ ಬಹುದು. ಇನ್ನೊಂದು ವಿಶೇಷವೆಂದರೆ ಭಾರತದ ರಾಷ್ಟ್ರ ಗೀತೆ ಜನಗಣ ಮನವನ್ನು ಬರೆದವರು ಕವಿ ರವೀಂ ದ್ರನಾಥ ಠಾಗೂರ್ ಅವರು. ಅವರು ಮೊದಲು ಬರೆದಿದ್ದ ಗೀತೆಯನ್ನು ಸ್ವಾತಂತ್ರ್ಯ ನಂತರ ರಾಷ್ಟ್ರಗೀ ತೆಯಾಗಿ ಅಂಗೀಕರಿಸಲಾಯಿತು. 1925ರಲ್ಲಿ ಅವರು ಮಂಗಳೂರಿಗೆ ಬಂದಿದ್ದರು. ಇಲ್ಲಿ 3 ದಿನ ತಂಗಿದ್ದರು. ಆಗಿನ ಸರಕಾರಿ- ಈಗಿನ ವಿವಿ ಕಾಲೇಜಿನಲ್ಲಿ ಕವಿತೆಗಳನ್ನು ಬರೆದಿದ್ದರು. ಅವರು ಭೇಟಿ ನೀಡಿ ಆಗ ಸಾಧ್ಯವಿದ್ದ ಸೂರ್ಯಾಸ್ತವನ್ನು ವೀಕ್ಷಿಸಿದ ಬಾವುಟಗುಡ್ಡೆ ಉದ್ಯಾನಕ್ಕೆ ಮುಂದೆ ಠಾಗೂರ್ ಪಾರ್ಕ್ ಎಂದು ಹೆಸರಿಸಲಾಯಿತು. ವಿಶೇಷವೆಂದರೆ ಭಾರತದ ರಾಷ್ಟ್ರಗೀತೆ ಜನ ಗಣ ಮನ ಮತ್ತು ಬಾಂಗ್ಲಾದೇಶದ ರಾಷ್ಟ್ರಗೀತೆ ಅಮರ್ ಸೋನಾರ್ ಬಾಂಗ್ಲಾಗಳನ್ನು ಬರೆದವರು ಠಾಗೂರ್ ಅವರೇ. ಎರಡು ದೇಶಗಳಿಗೆ ಓರ್ವರದ್ದೇ ರಾಷ್ಟ್ರಗೀತೆ ಎಂಬ ನಿದರ್ಶನ ಇದೊಂದೇ ಆಗಿದೆ. ಅವರ ಆಂಗ್ಲಗೀತೆಯ ಕನ್ನಡ ಅನುವಾದ “ಎಲ್ಲಿ ಮನಕಳುಕಿರದು’ ಬಳಿಕ ಕೆನರಾ ಸಮೂಹ ಸಂಸ್ಥೆಗಳ ಪ್ರಾರ್ಥನಾ ಗೀತೆಯಾಯಿತು. ಮಹಾತ್ಮಾ ಗಾಂಧೀಜಿಯವರು ಬಳಸುತ್ತಿದ್ದ ನಡಿಗೆ ಕೋಲನ್ನು ಅವರಿಗೆ ನೀಡಿದವರು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರು. ಉಪ್ಪಿನ ಸತ್ಯಾಗ್ರಹದ ದಿನದಿಂದ ಜೀವಿತಾಂತ್ಯದವರೆಗೂ ಗಾಂಧೀಜಿ ಇದೇ ನಡಿಗೆ ಕೋಲನ್ನು ಬಳಸಿದ್ದರು. ಬಹುಬಗೆಯ ಹೋರಾಟದಲ್ಲಿ ಸ್ವಯಂಸ್ಫೂರ್ತಿ ಯಿಂದ ಭಾಗವಹಿಸಿದ ಕರಾವಳಿಯ ಜನತೆ ಸಂಪೂರ್ಣ ಅಹಿಂಸಾತ್ಮಕ ಹೋರಾಟದಲ್ಲಿ ತಮ್ಮನ್ನು ತೊಡಗಿ ಸಿಕೊಂಡಿದ್ದರು.
1947ರ ಆ. 15ರಂದು ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ ಕರಾವಳಿಯ ನಗರಗಳಲ್ಲಿ ಮತ್ತು ತಾಲೂಕಿನ ಎಲ್ಲ ಪ್ರಮುಖ ಕೇಂದ್ರಗಳಲ್ಲಿ ಸ್ವಾತಂತ್ರೊತ್ಸವ ಸಂಭ್ರ ಮೋಲ್ಲಾಸದಿಂದ ನೆರವೇರಿತು. ಮಂಗಳೂರಿನ ಕೇಂದ್ರ ಮೈದಾನಿನಲ್ಲಿ ತಳಿರು ತೋರಣಗಳಿಂದ ಅಲಂಕೃತ ಚಪ್ಪರದಲ್ಲಿ ಈ ಉತ್ಸವ ಜರಗಿತೆಂದು ದಾಖಲೆಗಳು ತಿಳಿಸುತ್ತವೆ. ಅಂದಹಾಗೆ:
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನರ್ಕಳ ಮಾರಪ್ಪ ಶೆಟ್ಟಿ ಅವರ ತುಳು ಕವಿತೆಯೊಂದು ಸಾಮೂಹಿಕ ಗೀತೆಯಾಗಿತ್ತು. “ಗಂಗಸರೊ ಗಂಗಸರೊ ಪರಡೆ ಕಲಿ ಗಂಗಸರೊ, ಕೆಬಿತ ಮುರು ದೆತ್‌ದ್ ಕೊರು ಪರ್‌ಂಡ ಕಲಿ ಗಂಗಸರೊ, ಕಿದೆತ ಎರು ಗಿತ್‌ದ್ ಕೊರು ಪರ್‌ಂಡ ಕಲಿ ಗಂಗಸರೊ, ಅಟ್ಟದ ಬಿತ್ತ್ ದೆತ್ತ್ದ್ ಕೊರು ಪರ್‌ಂಡ ಕಲಿ ಗಂಗಸರೊ’ ಮನೋಹರ ಪ್ರಸಾದ್