Advertisement

ಕಲ್ಲಿದ್ದಲು ಹಗರಣ:ಮಾಜಿ ಕಾರ್ಯದರ್ಶಿ ಗುಪ್ತಾ ಅಪರಾಧಿ:ವಿಶೇಷ ಕೋರ್ಟ್‌

11:24 AM May 19, 2017 | Team Udayavani |

ಹೊಸದಿಲ್ಲಿ : ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿ ದಿಲ್ಲಿಯ ವಿಶೇಷ ಕೋರ್ಟ್‌ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್‌ ಸಿ ಗುಪ್ತಾ ಅವರನ್ನು ಅಪರಾಧಿ ಎಂದು ಘೋಷಿಸಿದೆ. 

Advertisement

ಇದೇ ವೇಳೆ ನ್ಯಾಯಾಲಯವು ಕಲ್ಲಿದ್ದಲು ಸಚಿವಾಲಯದ ಆಗಿನ ಜಂಟಿ ಕಾರ್ಯದರ್ಶಿ ಕೆ ಎಸ್‌ ಕ್ರೋಫಾ, ಆಗಿನ ನಿರ್ದೇಶಕ ಕೆ ಸಿ ಸಮಾರಿಯಾ ಮತ್ತು ಇತರ ಕೆಲವರನ್ನು ಅಪರಾಧಿಗಳೆಂದು ಪ್ರಕಟಿಸಿದೆ. 

ಆದರೆ ಈ ಪ್ರಕರಣದ ಓರ್ವ ಆರೋಪಿಯಾಗಿದ್ದ ಚಾರ್ಟರ್ಡ್‌ ಅಕೌಂಟೆಂಟ್‌ ಅಮಿತ್‌ ಗೋಯಲ್‌ ಅವರನ್ನು ಖುಲಾಸೆಗೊಳಿಸಿದೆ. 

ಗುಪ್ತಾ, ಕ್ರೋಫಾ ಮತ್ತು ಸಮಾರಿಯಾ ಅವರೊಂದಿಗೆ ನ್ಯಾಯಾಲಯವು ಕೆಎಸ್‌ಎಸ್‌ಪಿಎಲ್‌ ಕಂಪೆನಿ ಮತ್ತು ಅದರ ಆಡಳಿತ ನಿರ್ದೇಶಕ ಪವನ್‌ ಕುಮಾರ್‌ ಅಹ್ಲುವಾಲಿಯಾ ಅವರನ್ನು ಕೂಡ ಅಪರಾಧಿಗಳೆಂದು ಪ್ರಕಟಿಸಿದೆ. 

ಹಗರಣ ನಡೆದಿದ್ದ ವೇಳೆ ಕ್ರೋಫಾ ಅವರು ಕಲ್ಲಿದ್ದಲು ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದರು; ಸಮಾರಿಯಾ ಅವರು ಕಲ್ಲಿದ್ದಲು ನಿಕ್ಷೇಪ ಹಂಚಿಕೆಯ ನಿರ್ದೇಶಕರಾಗಿದ್ದರು. 

Advertisement

ಕಳೆದ ವರ್ಷ ನ್ಯಾಯಾಲಯವು ಆರೋಪಿಗಳ ವಿರುದ್ಧ  ದೋಷಾರೋಪ ಹೊರಿಸುವ ಸಂದರ್ಭದಲ್ಲಿ “ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ಗುಪ್ತಾ ಅವರು ಕತ್ತಲಲ್ಲಿ ಇಟ್ಟಿದ್ದರು; ಮೇಲ್ನೋಟಕ್ಕೇ ಅವರು ಕಾನೂನು ಉಲ್ಲಂಘನೆ ಮಾಡಿದ್ದರು ಮತ್ತು ಪ್ರಧಾನಿಯವರು ಆತನ ಮೇಲೆ (ಗುಪ್ತಾ) ಇರಿಸಿದ್ದ ವಿಶ್ವಾಸಕ್ಕೆ ಆತ ದ್ರೋಹ ಬಗೆದಿದ್ದ’ ಎಂದು ಹೇಳಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next