Advertisement

ಕಲ್ಲಿದ್ದಲು ಹಗರಣದ ಕೋಡಾಗೆ ಕಾರಾಗೃಹ

06:00 AM Dec 17, 2017 | |

ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಕಲ್ಲಿದ್ದಲು ನಿಕ್ಷೇಪ ಹಗರಣಕ್ಕೆ ಸಂಬಂಧಿಸಿ ಜಾರ್ಖಂಡ್‌ನ‌ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಹಾಗೂ ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಎಚ್‌.ಸಿ. ಗುಪ್ತಾ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೆ, ಕೋಡಾಗೆ 25 ಲಕ್ಷ ರೂ. ಹಾಗೂ ಗುಪ್ತಾಗೆ ಒಂದು ಲಕ್ಷ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.

Advertisement

ಉತ್ತರ ಜಾರ್ಖಂಡ್‌ನ‌ ರಾಜ್‌ಹರ ಕಲ್ಲಿದ್ದಲು ನಿಕ್ಷೇಪವನ್ನು ಕೋಲ್ಕತಾ ಮೂಲದ ಖಾಸಗಿ ಕಂಪನಿಗಳಾದ ವಿನಿ ಐರನ್‌ ಮತ್ತು ಸ್ಟೀಲ್‌ ಉದ್ಯೋಗ್‌ ಲಿಮಿಟೆಡ್‌(ವಿಸೂಲ್‌)ಗೆ ನೀಡುವ ಪ್ರಕ್ರಿಯೆಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣ ಇದಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಅಂತಿಮ ವಿಚಾರಣೆ ನಡೆಸಿದ್ದ ಸಿಬಿಐ ವಿಶೇಷ ನ್ಯಾಯಾಲಯ ಕೋಡಾ ಹಾಗೂ ಗುಪ್ತಾ ಅಪರಾಧಿ ಎಂದು ಹೇಳಿ ತೀರ್ಪು ಕಾಯ್ದಿರಿಸಿತ್ತು.

ವಿಶೇಷ ನ್ಯಾಯಮೂರ್ತಿ ಭರತ್‌ ಪರಾಶರ್‌ ಅವರು ಪ್ರಕರಣದಲ್ಲಿ ಭಾಗಿಯಾಗಿರುವ ಖಾಸಗಿ ಸಂಸ್ಥೆಯನ್ನೂ ದೋಷಿ ಎಂದು ಪ್ರಕಟಿಸಿದ್ದು, 50 ಲಕ್ಷ ರೂ. ದಂಡ ವಿಧಿಸಿದ್ದಾರೆ. ಇನ್ನು ಪ್ರಕರಣದಲ್ಲಿ ಭಾಗಿಯಾಗಿದ್ದ ಮಾಜಿ ಮುಖ್ಯ ಕಾರ್ಯದರ್ಶಿ ಅಶೋಕ್‌ ಕುಮಾರ್‌ ಬಸು ಹಾಗೂ ವಿಜಯ್‌ ಜೋಶಿ ಅವರಿಗೂ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಕ್ರಿಮಿನಲ್‌ ಚಟುವಟಿಕೆ ನಡೆಸಿದ ಆರೋಪದ ಮೆಲೆ ಸೆಕ್ಷನ್‌ 120-ಬಿ, ವಂಚನೆ ಆರೋಪದ ಮೇಲೆ 420, ಸಾರ್ವಜನಿಕರಲ್ಲಿ ಇರುವ ವಿಶ್ವಾಸಾರ್ಹತೆಗೆ ಧಕ್ಕೆ ತಂದಿರುವ ಆರೋಪದ ಮೇಲೆ ಸೆಕ್ಷನ್‌ 409 ಹಾಗೂ ಭ್ರಷ್ಟಾಚಾರ ಕಾಯ್ದೆ ಅಡಿಯಲ್ಲಿ ಇವರೆಲ್ಲರ ಮೇಲೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next