Advertisement

2024ರ ವೇಳೆಗೆ ಭಾರತ ಕಲ್ಲಿದ್ದಲು ಆಮದು ಸ್ಥಗಿತ: ಪ್ರಹ್ಲಾದ್‌ ಜೋಷಿ

08:34 PM Oct 20, 2022 | Team Udayavani |

ನವದೆಹಲಿ: 2024ರ ವೇಳೆಗೆ ಭಾರತ ಕಲ್ಲಿದ್ದಲು ಆಮದನ್ನು ಸ್ಥಗಿತಗೊಳಿಸಲಿದೆ ಎಂದು ಕಲ್ಲಿದ್ದಲು ಸಚಿವ ಪ್ರಹ್ಲಾದ್‌ ಜೋಷಿ ಗುರುವಾರ ಹೇಳಿದರು.

Advertisement

ದೆಹಲಿಯ ಮಹಾಲೇಖಪಾಲರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ “ಖನಿಜ ಮತ್ತು ಇಂಧನ ಸಂಪನ್ಮೂಲಗಳ ಆಸ್ತಿ ಖಾತೆಗಳ ಸಂಕಲನ’ ಬಿಡುಗಡೆ ಮಾಡಿ ಮಾತನಾಡಿದ ಸಚಿವರು, “ಗಣನೀಯವಾಗಿ ಕುಸಿದಿರುವ ಒಣ ಇಂಧನದ(ಕಲ್ಲಿದ್ದಲು) ಆಮದನ್ನು 2024ರ ವೇಳೆಗೆ ಸ್ಥಗಿತಗೊಳಿಸಲಾಗುವುದು,’ ಎಂದರು.

“ಪ್ರಸ್ತುತ ಸರ್ಕಾರವು ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜನ್ನು ಸಾಂಸ್ಥಿಕಗೊಳಿಸಿದ್ದು, ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸಿದೆ,’ ಎಂದು ಹೇಳಿದರು.

ಇನ್ನೊಂದೆಡೆ, ರಾಜ್ಯದ ಆಸ್ತಿ ಖಾತೆಗಳ ಮಾಹಿತಿಯನ್ನು ಒಟ್ಟುಗೂಡಿಸಿ, ಸರ್ಕಾರಿ ಲೆಕ್ಕಪತ್ರ ಮಾನದಂಡಗಳ ಸಲಹಾ ಮಂಡಳಿಯು ರಾಜ್ಯಗಳಲ್ಲಿನ ಖನಿಜ ಮತ್ತು ಇಂಧನ ಸಂಪನ್ಮೂಲಗಳ ಆಸ್ತಿ ಖಾತೆಗಳ ಸಂಕಲನವನ್ನು ಸಿದ್ಧಪಡಿಸಿದ್ದು, 28 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿನ ಎÇÉಾ ನಾಲ್ಕು ಪಳೆಯುಳಿಕೆ ಇಂಧನ, 40 ಪ್ರಮುಖ ಖನಿಜಗಳು ಮತ್ತು 63 ಸಣ್ಣ ಖನಿಜಗಳ ವಿವರಗಳನ್ನು ಪ್ರಸ್ತುತ ಬಿಡುಗಡೆಯಾದ ಸಂಕಲನ ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next