ಲಕ್ನೋ: ಮುಂಬೈ ಕ್ರಿಕೆಟಿಗರು ಮತ್ತೆ ಮತ್ತೆ ಅದೇ ತಪ್ಪನ್ನು ಪುನರಾವರ್ತಿಸಿ ಸೋಲನ್ನು ಹೊತ್ತುಕೊಳ್ಳುತ್ತಿದ್ದಾರೆ ಎಂದು ಕೋಚ್ ಶೇನ್ ಬಾಂಡ್ ಕಿಡಿಕಾರಿದ್ದಾರೆ.
“ಪಂದ್ಯಕ್ಕೂ ಮುನ್ನ ನಾವೊಂದು ಯೋಜನೆಯನ್ನು ರೂಪಿಸುತ್ತೇವೆ. ಆದರೆ ಇದನ್ನು ಕಾರ್ಯಗತಗೊಳಿಸಲು ವಿಫಲರಾಗುತ್ತೇವೆ. ಮಾರ್ಕಸ್ ಸ್ಟೋಯಿನಿಸ್ ಆಡುತ್ತಿರುವಾಗ ಅವರಿಗೆ ಈ ಪಿಚ್‌ನಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಸ್ಪಷ್ಟವಾದ ಯೋಜನೆ ಹೊಂದಿದ್ದೆವು. ಆದರೆ ಇದರಲ್ಲಿ ಯಶಸ್ಸು ಕಾಣಲಿಲ್ಲ,’ ಎಂದು ಹೇಳಿದ್ದಾರೆ.
“ಮೊದಲ 15 ಓವರ್‌ಗಳಲ್ಲಿ ಮುಂಬೈ ಬೌಲಿಂಗ್ ಅಮೋಘ ಮಟ್ಟದಲ್ಲಿತ್ತು. ಆದರೆ ಡೆತ್ ಓವರ್‌ಗಳಲ್ಲಿ ಒಬ್ಬ ಆಟಗಾರನಿಂದಾಗಿ ನಾವು ಅಪಾಯಕ್ಕೆ ಸಿಲುಕಿದೆವು. ಕಳೆದ ಪಂದ್ಯದಲ್ಲಿ ರಶೀದ್ ಖಾನ್ ಕೂಡ ಹೀಗೇ ಮಾಡಿದ್ದರು. ಆದರೂ ನಾವು ತಪ್ಪುಗಳನ್ನು ತಿದ್ದಿಕೊಳ್ಳಲಿಲ್ಲ. ರಶೀದ್ ಅವರಿಂದ ನಮಗೇನೂ ಹಾನಿ ಆಗಲಿಲ್ಲ. ಆದರೆ ಸ್ಟೋಯಿನಿಸ್ ಆಟ ನಮಗೆ ಭಾರೀ ನಷ್ಟ ಉಂಟುಮಾಡಿತು…’ ಎಂದರು.
ಇದನ್ನೂ ಓದಿ:“ಪಕ್ಷಕ್ಕಾಗಿ ಒಪ್ಪಿಕೊಂಡೆ…”: DCM ಹುದ್ದೆಯ ಬಗ್ಗೆ ಡಿಕೆ ಶಿವಕುಮಾರ್ ಮಾತು
“ಬಿಗ್ ಹಿಟ್ಟರ್‌ಗಳನ್ನು ತಡೆಯುವುದು ಸುಲಭವಲ್ಲ. ಆದರೆ ಸ್ಟೋಯಿನಿಸ್ 47 ಎಸೆತಗಳಿಂದ 89 ರನ್ ಬಾರಿಸಿದರು. ಅವರ ಮೊತ್ತವನ್ನು 70ಕ್ಕೆ ನಿಯಂತ್ರಿಸಬೇಕಿತ್ತು. ಆಗ ಈ 18-19 ರನ್ನುಗಳಿಂದ ಫಲಿತಾಂಶದ ಮೇಲೆ ದೊಡ್ಡ ವ್ಯತ್ಯಾಸ ಆಗುತ್ತಿತ್ತು’ ಎಂಬುದು ಶೇನ್ ಬಾಂಡ್ ಅಭಿಪ್ರಾಯ.