Advertisement

ರೋಹಿತ್ ಈಗ ಮೈದಾನಕ್ಕಿಳಿದರೆ ಅಪಾಯ ಖಚಿತ: ಕೋಚ್ ರವಿ ಶಾಸ್ತ್ರಿ

02:58 PM Nov 02, 2020 | keerthan |

ದುಬೈ: ಇತ್ತೀಚೆಗೆ ಆಸ್ಟ್ರೇಲಿಯ ಪ್ರವಾಸಕ್ಕೆ ಭಾರತ ಕ್ರಿಕೆಟ್‌ ತಂಡ ಪ್ರಕಟವಾಗಿತ್ತು. ಟಿ20, ಏಕದಿನ, ಟೆಸ್ಟ್‌ ಮೂರೂ ತಂಡಗಳಲ್ಲಿ ಉಪನಾಯಕ ರೋಹಿತ್‌ ಶರ್ಮಗೆ ಸಿಕ್ಕಿಲ್ಲ. ಇದಕ್ಕೆ ಬಿಸಿಸಿಐ ಗಾಯದ ಕಾರಣ ನೀಡಿದೆ. ಅದಾದ ಕೆಲವೇ ಗಂಟೆಗಳಲ್ಲಿ ರೋಹಿತ್‌ ಅಭ್ಯಾಸ ನಡೆಸುತ್ತಿರುವ ವಿಡಿಯೊವನ್ನು ಮುಂಬೈ ಇಂಡಿಯನ್ಸ್‌ ತಂಡ ಪ್ರಕಟಿಸಿತ್ತು. ಇದು ಭಾರೀ ವಿವಾದ ಸೃಷ್ಟಿಸಿತ್ತು.

Advertisement

ರೋಹಿತ್‌ರನ್ನು ಉದ್ದೇಶಪೂರ್ವಕವಾಗಿ ತಂಡದಿಂದ ಕೈಬಿಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು! ಮಾಯಾಂಕ್‌ ಅಗ ರ್ವಾಲ್‌, ನವದೀಪ್‌ ಸೈನಿಗೂ ಗಾಯವಾಗಿದೆ. ಅವರನ್ನು ಮಾತ್ರ ತಂಡಕ್ಕೆ ಸೇರಿಸಿಕೊಂಡಿದ್ದು ಹೇಗೆ ಎಂದು ಕೆಲವರು ಪ್ರಶ್ನಿಸಿದ್ದರು.

ಸದ್ಯ ಈ ಪ್ರಶ್ನೆಗೆ ಉತ್ತರಿಸಿರುವ ಭಾರತ ಕ್ರಿಕೆಟ್‌ ತರಬೇತುದಾರ ರವಿಶಾಸ್ತ್ರಿ, ರೋಹಿತ್‌ ಶರ್ಮರ ಗಾಯದ ಪ್ರಮಾಣ ತೀವ್ರವಾಗಿದೆ. ಅದು ವಾಸಿಯಾಗದೇ ಮತ್ತೆ ಮೈದಾನಕ್ಕಿಳಿದರೆ ಅವರು ತೀರಾ ಹಾನಿಗೀಡಾಗಲಿದ್ದಾರೆ ಎಂದು ವೈದ್ಯರು ವರದಿ ನೀಡಿದ್ದಾರೆ. ಅದನ್ನು ಆಧರಿಸಿಯೇ ಬಿಸಿಸಿಐ ಆಯ್ಕೆಸಮಿತಿ ಈ ನಿರ್ಧಾರ ಮಾಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ರಾಷ್ಟ್ರೀಯ ದಾಖಲೆ ಬರೆದ ಸವಣೂರು ನಡುಬೈಲಿನ ಅಭಿಷೇಕ್‌ ಎನ್‌ ಶೆಟ್ಟಿಗೆ ಏಕಲವ್ಯ ಪ್ರಶಸ್ತಿ

ತಂಡದ ಆಯ್ಕೆ ತಮ್ಮ ಕೈಯಲ್ಲಿಲ್ಲ, ಅಲ್ಲಿ ತಮ್ಮ ಅಭಿಪ್ರಾಯವನ್ನು ಕೇಳುವುದಿಲ್ಲ ಎಂಬ ಇನ್ನೊಂದು ಮಾತನ್ನೂ ಅವರು ಖಚಿತಪಡಿಸಿದ್ದಾರೆ. ಆಸೀಸ್ ವಿರುದ್ಧದ ಮೂರು ಮಾದರಿಯ ತಂಡಕ್ಕೂ ರೋಹಿತ್ ರನ್ನು ಕೈಬಿಡಲಾಗಿದೆ. ರೋಹಿತ್ ಬದಲು ಏಕದಿನ ಮತ್ತು ಟಿ20 ತಂಡಗಳಿಗೆ ಕನ್ನಡಿಗ ಕೆ ಎಲ್ ರಾಹುಲ್ ರನ್ನು ಉಪ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next