Advertisement

ಮಹಿಳಾ ಕ್ರಿಕೆಟ್‌ ಕೋಚ್‌ ನೇಮಕಾತಿ ಪ್ರಕ್ರಿಯೆ ಅಸಾಂವಿಧಾನಿಕ: ಎಡುಲ್ಜಿ

07:03 PM Dec 21, 2018 | udayavani editorial |

ಹೊಸದಿಲ್ಲಿ : ‘ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ಕೋಚ್‌ (ಡಬ್ಲ್ಯು ವಿ ರಾಮನ್‌)  ನೇಮಕಾತಿ ಪ್ರಕ್ರಿಯೆಯು ಅಸಾಂವಿಧಾನಿಕವಾಗಿ ನಡೆದಿದೆ’ ಎಂದು ಮಾಜಿ ಮಹಿಳಾ ಕ್ರಿಕೆಟ್‌ ನಾಯಕಿ ಮತ್ತು ಆಡಳಿತ ಸಮಿತಿಯ ಇಬ್ಬರು ಸದಸ್ಯರಲ್ಲಿ ಓರ್ವರಾಗಿರುವ ಡಯಾನಾ ಎಡುಲ್ಜಿ  ಆರೋಪಿಸಿದ್ದಾರೆ. 

Advertisement

ಸುಪ್ರೀಂ ಕೋರ್ಟ್‌ ನಿಂದ ನೇಮಕಗೊಂಡಿದ್ದ ವಿನೋದ್‌ ರಾಯ್‌ ಅಧ್ಯಕ್ಷತೆಯ ನೇಮಕಾತಿ ಸಮಿತಿಯು ಕ್ರಿಕೆಟ್‌ ಕೋಚ್‌ ನೇಮಕಾತಿಯಲ್ಲಿ ಅಸಾಂವಿಧಾನಿಕ ಕ್ರಮವನ್ನು ಅನುಸರಿಸಿದೆ ಎಂದು ಎಡುಲ್ಜಿ ಹೇಳಿದ್ದಾರೆ. 

ಸಿಓಎ ಅಧ್ಯಕ್ಷ ವಿನೋದ್‌ ರಾಯ್‌ ಅವರಿಗೆ ಕಳಿಸಿರುವ ಇ-ಮೇಲ್‌ ನಲ್ಲಿ ಎಡುಲ್ಜಿ ಅವರು ಕೋಚ್‌ ನೇಮಕಾತಿ ಪ್ರಕ್ರಿಯೆಯು ಕಾನೂನು ಬಾಹಿರ ಮತ್ತು ಅಕ್ರಮ ಎಂದು ಟೀಕಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next