ಮಡಿಕೇರಿ: ಸಹಕಾರ ಸಂಘಗಳು ರೈತರ ಬೆನ್ನೆಲುಬಾಗಿದ್ದು, ಸಹಕಾರ ಸಂಘಗಳಿಗೆ ಇನ್ನೂ ಹೆಚ್ಚಿನ ಸ್ವಾಯತ್ತತೆ ನೀಡಬೇಕಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಅವರು ಪ್ರತಿಪಾದಿಸಿದ್ದಾರೆ.
ಬಾಲಭವನದಲ್ಲಿ ಬುಧವಾರ ನಡೆದ ಸಹಕಾರ ಸಂಸ್ಥೆಗಳ ಮೂಲಕ ಆರ್ಥಿಕ ಸೇರ್ಪಡೆ, ತಂತ್ರಜ್ಞಾನ ಅಳವಡಿಕೆ ಮತ್ತು ಗಣಕೀಕರಣ ದಿನಾಚರಣೆ ಹಾಗೂ ಕೊಡಗು ಸಹಕಾರ ರತ್ನ, ಶ್ರೇಷ್ಠ ಸಹಕಾರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಹಕಾರ ಕ್ಷೇತ್ರದಲ್ಲಿ ಸೇವಾ ಸ್ವಾಯತ್ತತೆ ನೀಡಿದ್ದಲ್ಲಿ ರೈತರಿಗೆ ಹೆಚ್ಚಿನ ಅನುಕೂಲ ವಾಗಲಿದೆ ಎಂದು ಕೆ.ಜಿ. ಬೋಪಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಎ.ಕೆ. ಮನುಮುತ್ತಪ್ಪ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಬಾಂಡ್ ಗಣಪತಿ, ಪಿ. ಮುತ್ತಪ್ಪ ಶ್ರೇಷ್ಠ ಸಹಕಾರಿ ಪ್ರಶಸ್ತಿ ಪಡೆದ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಕೆ. ಚಿಣ್ಣಪ್ಪ ಬಲ್ಯಮನೆ ಗಣಪತಿ ಕೆ.ಪಿ. ನಾಗರಾಜು ಮಾತನಾಡಿದರು. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಉಪಾಧ್ಯಕ್ಷರಾದ ಕೆ.ಎಸ್. ಹರೀಶ್ ಪೂವಯ್ಯ, ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ಉಪಾಧ್ಯಕ್ಷರಾದ ಪಿ.ಸಿ. ಅಚ್ಚಯ್ಯ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನಿರ್ದೇಶಕರಾದ ಎಚ್.ಎಂ. ರಮೇಶ್, ರಘು ನಾಣಯ್ಯ, ಕನ್ನಂಡ ಸಂಪತ್, ಬಿ.ಕೆ. ಚಿಣ್ಣಪ್ಪ, ಕೆ.ಎ. ಜಗದೀಶ್, ಉಷಾ ತೇಜಸ್ವಿ, ಕೆ. ಅರುಣ್ ಭೀಮಯ್ಯ, ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನಿರ್ದೇಶಕಿ ಎಂ. ಪ್ರಮಾ ಸೋಮಯ್ಯ, ಎಸ್.ಪಿ. ನಿಂಗಪ್ಪ, ಬಿ.ಎ. ರಮೇಶ್ ಚಂಗಪ್ಪ, ಪಿ.ಜಿ. ನಂಜುಂಡ, ಕೆ.ಎಂ. ತಮ್ಮಯ್ಯ, ರವಿಬಸಪ್ಪ, ರಾಮಚಂದ್ರ, ರವಿಕುಮಾರ್ ಉಪಸ್ಥಿತರಿದ್ದರು. ಸಹಕಾರ ತರಬೇತಿ ಕೇಂದ್ರದ ನಿವೃತ್ತ ಪ್ರಾಂಶುಪಾಲರಾದ ಗುರುಮಲ್ಲಪ್ಪ ಮಾತನಾಡಿದರು.
ಸಹಕಾರ ರತ್ನ ಪ್ರಶಸ್ತಿಯನ್ನು ಮಂಡು ವಂಡ ಪಿ. ಮುತ್ತಪ್ಪ, ಶ್ರೇಷ್ಠ ಸಹಕಾರ ಪ್ರಶಸ್ತಿಯನ್ನು ಸಂಪಾಜೆಯ ಬಲ್ಯಮನೆ ಗಣಪತಿ, ಬೈರಂಬಾಡದ ಕೆ.ಪಿ.ನಾಗರಾಜು, ಕೊಡಿ³ಪೇಟೆಯ ಬಿ.ಕೆ. ಚಿನ್ನಪ್ಪ, ಶ್ರೇಷ್ಠ ಮಹಿಳಾ ಸಹಕಾರಿ ಪ್ರಶಸ್ತಿಯನ್ನು ಸುಂಟಿಕೊಪ್ಪದ ಲೀಲಾ ಮೇದಪ್ಪ ಅವರಿಗೆ ಪ್ರದಾನ ಮಾಡಲಾಯಿತು.
ಜಿಲ್ಲಾ ಸಹಕಾರ ಯೂನಿಯನ್‌ನ ಸಿಇಒ ಯೋಗೇಂದ್ರ ನಾಯಕ್ ನಿರೂಪಿಸಿದರು. ಕೊಡಪಾಲು ಗಣಪತಿ ಸ್ವಾಗತಿಸಿದರು. ಜಿಲ್ಲಾ ಸಹಕಾರ ಯೂನಿಯನ್ ಮಂಜುಳಾ ಪ್ರಾರ್ಥಿಸಿದರು. ರವಿ ಬಸಪ್ಪ ವಂದಿಸಿದರು.
ರೈತರ ಬೆಳವಣಿಗೆ
ಮಾರ್ಚ್ 31ರೊಳಗೆ ಎಲ್ಲ ಸಹಕಾರ ಬ್ಯಾಂಕ್ ಗಣಕೀಕರಣವಾಗುತ್ತದೆ, ಸಹಕಾರಿ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್‌ಗಳು ಪ್ರವಾಹದ ಸಂದರ್ಭದಲ್ಲಿ ಪರಿಹಾರ ನಿಧಿ ನೀಡಿವೆ. ಸಾಲವನ್ನು ಪಡೆಯುವ ಮೂಲಕ ಸಹಕಾರಿ ಬ್ಯಾಂಕಿನ ಸೌಲಭ್ಯ ಪಡೆಯಬಹುದು. ರೈತರ ಬೆಳೆಗೆ ಒಳ್ಳೆಯ ನಿರ್ದಿಷ್ಟ ಬೆಲೆ ಒದಗಿಸು ವುದು. ಕ್ರಿಮಿನಾಶಕ ಮತ್ತು ಗೊಬ್ಬರದ ದರದಲ್ಲಿ ರಿಯಾಯಿತಿ, ಮಧ್ಯವರ್ತಿಗಳಿಲ್ಲದೆ ಕೃಷಿಯ ಮಾರಾಟ ಮತ್ತು ರೈತರೇ ಬೆಳೆಯ ಬೆಲೆ ನಿರ್ಧಾರ ಮಾಡುವಂತಾದರೆ ಮಾತ್ರ ರೈತರ ಬೆಳವಣಿಗೆ ಸಾಧ್ಯ ಎಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಸೇವಾ ಮನೋಭಾವ ವಿರುವ ಯುವ ಜನತೆ ಸಹಕಾರ ಕ್ಷೇತ್ರವನ್ನು ಸೇರಬೇಕು ಎಂದರು.