Advertisement
ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಮತ್ತು ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಆಶ್ರಯದಲ್ಲಿ ಬುಧವಾರ ಉಡುಪಿಯಲ್ಲಿ ನಡೆದ 65ನೇ ಅಖೀಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು. ಸಾಲಮನ್ನಾವನ್ನು ಸರಕಾರಗಳು ಸಹಕಾರಿ ಸಂಸ್ಥೆಗಳ ಮೂಲಕ ಮಾಡಿಸಿಕೊಳ್ಳುತ್ತವೆ. ಆದರೆ ಸಹಕಾರಿ ಕ್ಷೇತ್ರಕ್ಕೆ ನೀಡುವ ಕೊಡುಗೆ ಅತ್ಯಲ್ಪ. ಈ ಕ್ಷೇತ್ರ ಸ್ವಂತ ಶಕ್ತಿಯಿಂದ ಬೆಳೆದಿದೆ ಎಂದರು. ದಿಕ್ಸೂಚಿ ಭಾಷಣ ಮಾಡಿದ ಬೆಂಗಳೂರು ಆರ್‌ಐಸಿಎಂ ನಿವೃತ್ತ ನಿರ್ದೇಶಕ ಡಾ| ಎಸ್.ಎ. ಸಿದ್ಧಾಂತಿ ಅವರು ಸಹಕಾರ ಕ್ಷೇತ್ರದ ಮೂಲಕ ಕೃಷಿ ಉತ್ಪನ್ನ ಮಾರಾಟವಾದರೆ ಯೋಗ್ಯ ಬೆಲೆ ದೊರೆಯಲಿದೆ ಎಂದರು.
ಜಯಕರ ಶೆಟ್ಟಿ ಇಂದ್ರಾಳಿ ಪ್ರಸ್ತಾವಿಸಿದರು. ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಡಾ| ದೇವಿಪ್ರಸಾದ್ ಶೆಟ್ಟಿ, ರಮೇಶ್ ಶೆಟ್ಟಿ, ಎಸ್.ಕೆ.ಮಂಜುನಾಥ್, ಸಂಜೀವ ಕಾಂಚನ್, ಎಲ್.ಉಮಾನಾಥ, ಪ್ರವೀಣ್ ಬಿ.ನಾಯಕ್, ಚಂದ್ರಪ್ರತಿಮಾ ಎಂ.ಜೆ., ಪುರುಷೋತ್ತಮ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ಮಾಸ್ ನಿರ್ದೇಶಕ ಶಿವಾಜಿ ಸುವರ್ಣ, ಅರುಣ್ ಕುಮಾರ್ ಎಸ್.ವಿ, ಪುರುಷೋತ್ತಮ ಎಸ್.ಪಿ ಉಪಸ್ಥಿತರಿದ್ದರು. ನವೀನ್ ಕೆ. ನಿರೂಪಿಸಿದರು.