Advertisement

ಸಿಎನ್‌ಎನ್‌, ಎನ್‌ಬಿಸಿ ವಿರುದ್ಧ ಟ್ರಂಪ್‌ ಕೆಂಡ

03:45 AM Jul 02, 2017 | Team Udayavani |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದಾಗಿನಿಂದಲೂ ಅಮೆರಿಕದ ಮಾಧ್ಯಮಗಳು ಅವರ ವಿರುದ್ಧ ಸುದ್ದಿ ಮಾಡುವುದನ್ನು ನಿಲ್ಲಿಸಿಲ್ಲ. ಟ್ರಂಪ್‌ ಕೂಡ ಸಮಯ ಸಿಕ್ಕಾಗಲೆಲ್ಲ ಮಾಧ್ಯಮಗಳ ವಿರುದ್ಧ ಕೆಂಡಕಾರುವುದನ್ನೂ ಬಿಟ್ಟಿಲ್ಲ. 

Advertisement

ಶನಿವಾರ ಟ್ರಂಪ್‌ ಮಾಧ್ಯಮಗಳ ವಿರುದ್ಧ ಟ್ವಿಟರ್‌ನಲ್ಲಿ ಇನ್ನಿಲ್ಲದಂತೆ ಹರಿಹಾಯ್ದಿದ್ದಾರೆ. ಅಮೆರಿಕದ ಜನಪ್ರಿಯ ಮಾಧ್ಯಮಗಳಾದ ಸಿಎನ್‌ಎನ್‌ ಮತ್ತು ಎನ್‌ಬಿಸಿಗಳ ಕಾರ್ಯಕ್ರಮಗಳನ್ನು ಗಮನದಲ್ಲಿರಿಸಿಕೊಂಡು ಕಾರ್ಯ ಕ್ರಮಗಳ ನಿರೂಪಕರನ್ನು ಕಟುವಾಗಿ ಟೀಕಿಸಿದ್ದಾರೆ. ಪತ್ರಕರ್ತರಾದ ಮೈಕಾ ಬ್ರೆಝಿನ್ಸಿ$R ಮತ್ತು ಜೋಯ್‌ ಸ್ಕಾರೊºàರಫ್ರನ್ನು “ಕಲ್ಲಿನಂತೆ ಹೆಡ್ಡರು’ ಎಂದು ಟೀಕಿಸಿದ್ದಾರೆ.

ಟ್ರಂಪ್‌ ಈ ಟೀಕೆಗಳನ್ನು ಮಾಡಲು ಆರಂಭಿಸಿದ್ದು ಸಿಎನ್‌ಎನ್‌ನಲ್ಲಿ “ಮಾರ್ನಿಂಗ್‌ ಜೋಯೆ’ ಎಂಬ ಕಾರ್ಯಕ್ರಮದಲ್ಲಿ ಟ್ರಂಪ್‌ರ ಕುರಿತು ಹೀಯಾಳಿಸಿದ ಕಾರಣ. “ಹುಚ್ಚ ಜೋಯೆ ಮತ್ತು ಹೆಡ್ಡ ಮೈಕಾ ಕೆಟ್ಟವರಲ್ಲ. ಆದರೆ ಅವರ ಮಾಲಕರಿಗಾಗಿ ಅವರು ಕೀಳು ಮಟ್ಟದ ಕಾರ್ಯಕ್ರಮ ಮಾಡುತ್ತಿದ್ದಾರೆ’ ಎಂದಿದ್ದಾರೆ ಟ್ರಂಪ್‌. ಇಷ್ಟೊಂದು ಕಡಿಮೆ ಐಕ್ಯೂ ಇರುವ ಅವರಿಬ್ಬರೂ ಮರ್‌-ಅ-ಲಾಗೊ ಕಾರ್ಯಕ್ರಮದಲ್ಲಿ ಹೇಗೆ ಭಾಗವಹಿಸಿದ್ದರು ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next