Advertisement

ಸಿಎಂ ರಾಜೀನಾಮೆ ಬೇಡಿಕೆ ಹಾಸ್ಯಾಸ್ಪದ: ಬಿಜೆಪಿ

10:37 PM Nov 02, 2019 | Team Udayavani |

ಬೆಂಗಳೂರು: ಕಾಂಗ್ರೆಸ್‌ನವರಿಗೆ ಕಳ್ಳ ವಿಡಿಯೋ ಇಟ್ಟುಕೊಂಡು ರಾಜಕಾರಣ ಮಾಡುವುದು ಹವ್ಯಾಸವಾಗಿದೆ. ರಾಜ್ಯಪಾಲರ ಭೇಟಿ ಮಾಡಿ ಬಿ.ಎಸ್‌.ಯಡಿಯೂರಪ್ಪ ರಾಜೀನಾಮೆಗೆ ಹಾಗೂ ಸರ್ಕಾರ ವಜಾಗೆ ಒತ್ತಾಯಿಸಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಹಾಗೂ ಸಚಿವರಾದ ಬಸವರಾಜ ಬೊಮ್ಮಾಯಿ, ಸಿ.ಸಿ.ಪಾಟೀಲ್‌ ತಿಳಿಸಿದ್ದಾರೆ.

Advertisement

ಈ ಕುರಿತು ಹೇಳಿಕೆ ನೀಡಿರುವ ಅವರು, ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ಇರುವಾಗ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯುವ ತಂತ್ರವಾಗಿದೆ. ನ್ಯಾಯಾಲಯಕ್ಕೆ ಚ್ಯುತಿ ತರಲು ರಾಜಕೀಯ ಷಡ್ಯಂತ್ರ ಮಾಡುತ್ತಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸುವುದನ್ನು ಬಿಟ್ಟು, ಗೊಂದಲ ಸೃಷ್ಟಿ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.

ಇಂತಹ ಸುಳ್ಳು ಹೇಳಿಕೆಗಳು ಕಾಂಗ್ರೆಸ್‌ ನಾಯಕರ ದಿವಾಳಿತನವನ್ನು ಎತ್ತಿ ತೋರಿಸುತ್ತವೆ. ಕಾಂಗ್ರೆಸ್‌ ನಾಯಕರಿಗೆ ಇದೊಂದು ರೀತಿ ಚಾಳಿಯಾಗಿದೆ. ಅನರ್ಹ ಶಾಸಕರು ಮುಂಬೈನಲ್ಲಿ ಇದ್ದದ್ದು ಕೇಂದ್ರ ನಾಯಕರಿಗೂ ಗೊತ್ತಿದ್ದ ವಿಚಾರ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಕೀಲರಾಗಿದ್ದು, ಇಂತಹ ಕ್ಷುಲ್ಲಕ, ಕಾನೂನಿನ ಯಾವುದೇ ಮೌಲ್ಯವಲ್ಯದ ವಿಷಯದ ಬಗ್ಗೆ ಮಾನಾಡುವುದು ಅವರ ಕಾನೂನಿನ ಜ್ಞಾನದ ಬಗ್ಗೆ ಅನುಮಾನ ಮೂಡುತ್ತದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next