Advertisement

ಸಚಿವ ಸ್ಥಾನದಿಂದ ತೆಗೆಯುವುದು ಸಿಎಂ ನಿರ್ಧಾರ: ಸುಪ್ರೀಂ

12:38 AM Jan 06, 2024 | Team Udayavani |

ಹೊಸದಿಲ್ಲಿ: ಬಂಧಿತ ತಮಿಳು­ನಾಡು ಸಚಿವ ವಿ.ಸೆಂಥಿಲ್‌ ಬಾಲಾಜಿ ಅವರನ್ನು ಮುಖ್ಯ­ಮಂತ್ರಿಯ ಒಪ್ಪಿಗೆ ಇಲ್ಲದೇ ಸಚಿವ ಸ್ಥಾನದಿಂದ ವಜಾಗೊಳಿ­ಸಲು ಬರುವು­ದಿಲ್ಲ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. ಇದೇ ವೇಳೆ ಸಚಿವ ಸ್ಥಾನದಿಂದ ಬಾಲಾಜಿ ಅವರನ್ನು ತೆಗೆದುಹಾಕಬೇಕೆಂದು ಕೋರಿ ಸಾಮಾಜಿಕ ಕಾರ್ಯ­ಕರ್ತ ಎಂ.ಎಲ್‌.ರವಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ.

Advertisement

ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಸರಕಾರದಲ್ಲಿ ಸಚಿವ ಸ್ಥಾನದಲ್ಲಿ ಬಾಲಾಜಿ ಅವರು ಮುಂದು­ವರಿಯ ಬೇಕೇ ಅಥವಾ ಬೇಡವೇ ಎಂಬುದನ್ನು ತಮಿಳು­ನಾಡು ಮುಖ್ಯಮಂತ್ರಿ ನಿರ್ಧರಿ­ಸಬೇಕು. ಸಚಿವರನ್ನು ಅಮಾನತು­­ಗೊಳಿಸುವ ನಿರ್ಧಾರ ರಾಜ್ಯ­ಪಾಲರಿಗೆ ಸಂಬಂಧಿಸಿದ್ದು, ಇದರಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲು ಬರುವುದಿಲ್ಲ ಎಂದು ಇದಕ್ಕೂ ಮುನ್ನ ಹೇಳಿದ್ದ ಮದ್ರಾಸ್‌ ಹೈಕೋರ್ಟ್‌ನ ಅಭಿಪ್ರಾಯ­ವನ್ನೇ ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next