ಕಲಬುರಗಿ: ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ನೆರವೇರಿಸಲು ಹಾಗೂ ರೈತರಿಗೆ ಸಾಲ ವಿತರಿಸಲು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ನಗರಕ್ಕೆ ಆಗಮಿಸಿದರು.
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಸುಸಜ್ಜಿತ ತರಕಾರಿ ಮಾರುಕಟ್ಟೆ ಸಂಕೀರ್ಣ ಕ್ಕೆ ಅಡಿಗಲ್ಲು ಹಾಗೂ ಲೋಕೋಪಯೋಗಿ ಇಲಾಖೆ ಲೋಕೋಪಯೋಗಿ ಭವನ ಉದ್ಘಾಟನೆಯನ್ನು ನೆರವೇರಿಸುವರು.
ತದನಂತರ ಡಾ. ಎಸ್. ಎಂ ಪಂಡಿತ ರಂಗ ಮಂದಿರದಲ್ಲಿ ಡಿಸಿಸಿ ಬ್ಯಾಂಕ್ ನ ವತಿಯಿಂದ ರೈತರಿಗೆ ನೀಡಲಾಗುವ 50 ಕೋ.ರೂ ಮೊತ್ತದ ಸಾಲ ವಿತರಣೆಗೆ ಚಾಲನೆ ನೀಡುವರು.
ಇದನ್ನೂ ಓದಿ:ಸತ್ಯದ ಪರವಾಗಿ ನಿಂತಾಗ, ಬಹಳಷ್ಟು ಶತ್ರುಗಳು ಹುಟ್ಟಿಕೊಳ್ಳುತ್ತಾರೆ: ಸುಮಲತಾ
ತದನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್ ನಿಯಂತ್ರಣ ಕುರಿತಾಗಿ ಸಭೆ ನಡೆಸಿ ವಿಶೇಷ ವಿಮಾನ ಮೂಲಕ ಬೆಂಗಳೂರಿಗೆ ತೆರಳುವರು.
ಲೋಕೋಪಯೋಗಿ ಸಚಿವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಮುರುಗೇಶ ನಿರಾಣಿ, ಶ್ರೀ ರಾಮುಲು, ಬೈರತಿ ಬಸವರಾಜ್, ಎಸ್. ಟಿ.ಸೋಮಶೇಖರ ಮುಖ್ಯಮಂತ್ರಿ ಗಳಿಗೆ ಸಾಥ್ ನೀಡಿದರು.