Advertisement
ಬಿಜಿಎಸ್ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಮಾಡಿದ್ದು ಖುಷಿ ತಂದಿದೆ. ನಾಡಿನ ವಿದ್ಯಾರ್ಥಿಗಳ ಶೈಕ್ಷಣಿಕ ವ್ಯವಸ್ಥೆ ಮಾಡಲಾಗಿದೆ. ಜಾತ್ಯಾತೀತವಾಗಿ ಶಿಕ್ಷಣ ಬಾಗಿಲು ತೆರೆದಿದೆ. ಉನ್ನತ ಶಿಕ್ಷಣ ಜೊತೆಗೆ ಆಧುನಿಕತೆಯನ್ನ ಹೊಂದಿದೆ. ಕಡು ಬಡವರಿಗೂ ಸುಲಭ ದರದಲ್ಲಿ ಚಿಕಿತ್ಸೆ ದೊರೆಯುತ್ತಿದೆ. ಬಿಜಿಎಸ್ ಸಂಸ್ಥೆ ಸರ್ಕಾರದೊಂದಿಗೆ ಸಹಕಾರ ನೀಡಿದೆ ಎಂದಿದ್ದಾರೆ.
Related Articles
Advertisement
ಇದೇ ವೇಳೆ ನಿರ್ಮಲಾನಂದ ಶ್ರೀಗಳು ಮಾತನಾಡಿದ್ದು, ಬಿಜಿಎಸ್ ಮಠದಿಂದ ಹೊಸ ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ ಒಂದು ವರ್ಷದಿಂದ ಕೋವಿಡ್ ಕಾಣಿಸಿಕೊಂಡಿದೆ. ಕೋವಿಡ್ ರೋಗಿಗಳನ್ನ ಟ್ರೀಟ್ ಮಾಡುವ ಕೆಲಸ ಮಾಡ್ತಿದ್ದೇವೆ. ಇದಕ್ಕಾಗಿ ಆಸ್ಪತ್ರೆಯ 75 ರಷ್ಟು ಬೆಡ್ ಮೀಸಲಿಟ್ಟಿದ್ದೇವೆ. ಎಲ್ಲೆಡೆ ಆಕ್ಸಿಜನ್ ಕೊರತೆ ಇದೆ. ಆಕ್ಸಿಜನ್ 13 kL ಕೆಪಾಸಿಟಿ ಟ್ಯಾಂಕ್ ಉದ್ಘಾಟನೆ ಮಾಡಲಾಗಿದೆ. ಪ್ರಾರಂಭದಲ್ಲಿ ಸೋಶಿಯಲ್ ಡಿಸ್ಟೆನ್ಸ್, ಮಾಸ್ಕ್ ಬಳಕೆ ಕಡ್ಡಾಯ ಮಾಡಲಾಗಿತ್ತು.ಈ ಸಮಯದಲ್ಲಿ ಕೆಲಸ ಮಾಡ್ತಿರೋ ಆರೋಗ್ಯ ಸಿಬ್ಬಂದಿಗಳಿಗೆ ಧನ್ಯವಾದಗಳು ಎಂದರು.