Advertisement

ಪಾಪ ! ಸಿ.ಎಂ ಯಡಿಯೂರಪ್ಪ ಅವರಿಗೆ ಅನರ್ಹರನ್ನು ಸಮರ್ಥಿಸಿಕೊಳ್ಳದೆ ವಿಧಿಯಿಲ್ಲ: ಸಿದ್ದರಾಮಯ್ಯ

09:33 AM Nov 29, 2019 | Mithun PG |

ಬಳ್ಳಾರಿ: ವಿಜಯನಗರ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಆನಂದ್ ಸಿಂಗ್ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಅವರನ್ನು ನಂಬಿ ನಾವು ಮೋಸ ಹೋಗಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Advertisement

ವಿಜಯ ನಗರ ಕ್ಷೇತ್ರದ ಉಪಚುನಾವಣೆ ನಿಮಿತ್ತ ಜಿಲ್ಲೆಯ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದರು. ಅನರ್ಹ ಶಾಸಕ ಆನಂದ್ ಸಿಂಗ್ ಅವರನ್ನು ನಂಬಿ ನಾವು ಮೋಸ ಹೋಗಿದ್ದೇವೆ. ನಾನೆಲ್ಲೂ ಹೋಗಲ್ಲ ಎಂದು ನನ್ನ ಬಳಿ ಸಿಂಗ್ ಹೇಳಿಕೊಂಡಿದ್ದರು. ಆದರೆ ಇದ್ದಕ್ಕಿದ್ದಂತೆ ಬಿಜೆಪಿ ಸೇರಿಕೊಂಡು ತಮ್ಮನ್ನು ತಾವು ಮಾರಿಕೊಂಡಿದ್ದಾರೆ ಎಂದು ದೂರಿದರು.

ರಾಜ್ಯದ ಅನರ್ಹ ಶಾಸಕರ‌ ಕ್ಷೇತ್ರಗಳಲ್ಲಿ ಜನರು ಆಕ್ರೋಶಗೊಂಡಿದ್ದಾರೆ. ಹಾಗಾಗಿ ಈ ಬಾರಿ ಕ್ಷೇತ್ರದ ಜನರು ಅನರ್ಹರನ್ನು ಸೋಲಿಸಲಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

15 ಕ್ಷೇತ್ರಗಳಲ್ಲಿ ಗೆಲುವು :

ಬಿಎಸ್ ಯಡಿಯೂರಪ್ಪ, ಅನರ್ಹರನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ ಪಾಪ ! ಎಂದು ಬಿಎಸ್ ವೈ ಪರ  ಮೃದು ಧೋರಣೆ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಎಂಟು ಕ್ಷೇತ್ರದಲ್ಲಿ ಗೆದ್ದು ತೋರಿಸಲಿ ಎಂಬ ಸಚಿವ ಈಶ್ವರಪ್ಪ ಸವಾಲಿಗೆ, ನಾನ್ಯಾಕೆ ಸವಾಲು ಹಾಕಲಿ, ಇರುವ ವಾಸ್ತವ ಹೇಳಿದ್ದೇನೆ ಎಂದು ಟಾಂಗ್ ನೀಡಿದರು.

Advertisement

ಬಿ.ಸಿ ಪಾಟೀಲ್ ಗೆ ಜ್ಞಾನವಿಲ್ಲ

ಇದೇ ವೇಳೆ ಹಿರೇಕೆರೂರು ಅನರ್ಹ ಶಾಸಕ ಬಿ.ಸಿ.ಪಾಟೀಲ್ ವಿರುದ್ಧ ಗುಟುರು ಹಾಕಿದ ಸಿದ್ದರಾಮಯ್ಯ, ಅವನಿಗೆ ಜ್ಞಾನವಿಲ್ಲ. ನಾನು ಪಕ್ಷಾಂತರ ಮಾಡಿಲ್ಲ. ಅವನಿಗೆ ಅದು ಅರ್ಥವಾಗುತ್ತಿಲ್ಲ. ನನ್ನನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಿದ್ದರು. ಆಗ ಸೋನಿಯಾ ಗಾಂಧಿಯಾವರು ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದರು. ನಾನೇ ಜೆಡಿಎಸ್ ಪಕ್ಷವನ್ನು ಬಿಡಲಿಲ್ಲ. ಸೋಲಿನ ಹತಾಶೆಯಿಂದ ಬಿ.ಸಿ.ಪಾಟೀಲ್ ಮಾತನಾಡುತ್ತಿದ್ದಾರೆ. ನಾನು ಎಷ್ಟು ಕೋಟಿಗೂ ಮಾರಾಟವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಬಳಿಕ ಕ್ಷೇತ್ರದ ಗಾದಿಗನೂರು, ಪಿಕೆ ಹಳ್ಳಿ, ಕಮಲಾಪುರದಲ್ಲಿ ಕೈ ಅಭ್ಯರ್ಥಿ ವೆಂಕಟರಾವ್ ಘೋರ್ಪಡ ಪರ ಪ್ರಚಾರ ನಡೆಸಿದರು.

ಸಂಡೂರು ಶಾಸಕ ಈ.ತುಕಾರಾಂ ಸಿದ್ದರಾಮಯ್ಯರನ್ನು ಸ್ವಾಗತಿಸಿಸರು. ಈ ವೇಳೆ ಕಂಪ್ಲಿ ಶಾಸಕ ಜೆ.ಎನ್ ಗಣೇಶ್, ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್, ಶಾಸಕ ಭೀಮಾನಾಯ್ಕ್ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next