ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೂನ್ 12 ಮತ್ತು 13 ರಂದು ಜಿಲ್ಲಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರ ಸಭೆ ನಡೆಸಲಿದ್ದಾರೆ.
ಬರ ನಿರ್ವಹಣೆ, ಬರ ಪರಿ ಹಾರ ಬಿಡುಗಡೆ, ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಂಡಿರುವ ಬಗ್ಗೆ ಹಾಗೂ ಬರ ಪರಿಹಾರಕ್ಕೆ ಬಿಡುಗಡೆ ಯಾದ ಹಣದ ವೆಚ್ಚ ಕುರಿತು ಸಮಗ್ರ ಮಾಹಿತಿ ಪಡೆಯಲು ತೀರ್ಮಾನಿಸಿದ್ದಾರೆ.
ಜೂನ್ 21ರಿಂದ ಮುಖ್ಯ ಮಂತ್ರಿಯವರು ಗ್ರಾಮ ವಾಸ್ತವ್ಯಕ್ಕೆ ತೆರಳುತ್ತಿದ್ದು ಅದಕ್ಕೆ ಮುನ್ನ ಬರ ನಿರ್ವಹಣೆ ಸೇರಿ ಜಿಲ್ಲಾಮಟ್ಟದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರ ಜತೆ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಪ್ರತಿಪಕ್ಷ ನಾಯಕ ಯಡಿಯೂರಪ್ಪ ಸೇರಿ ಬಿಜೆಪಿ ನಾಯಕರು ಗ್ರಾಮ ವಾಸ್ತವ್ಯ ಕುರಿತು ಟೀಕಿಸಿ ಬರ ನಿರ್ವ ಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಬರ ನಿರ್ವ ಹಣೆ ಕುರಿತು ಅಂಕಿ-ಅಂಶ ಸಮೇತ ಮಾಹಿತಿ ಪಡೆದು ಕೊಂಡು ಗ್ರಾಮವಾಸ್ತವ್ಯಕ್ಕೆ ತೆರಳಲು ಸಿಎಂ ತೀರ್ಮಾನಿಸಿದ್ದಾರೆ.
ತಿರುಗೇಟು: ಈ ಮಧ್ಯೆ, ಗ್ರಾಮ ವಾಸ್ತವ್ಯ ಕುರಿತ ಟೀಕೆಗೆ ತಿರು ಗೇಟು ನೀಡಿರುವ ಮುಖ್ಯ ಮಂತ್ರಿ, ಗ್ರಾಮ ವಾಸ್ತವ್ಯ ಎನ್ನುವುದು ಯಾವುದೇ ಜನ ಪ್ರಿಯತೆ ಗಿಟ್ಟಿಸುವ ಗಿಮಿಕ್ ಅಲ್ಲ. ಗ್ರಾಮ ವಾಸ್ತವ್ಯದ ಮುಖ್ಯ ಗುರಿ ಆಡಳಿತ ಯಂತ್ರದ ಕಾರ್ಯವೈಖರಿ ಅರಿಯು ವುದು. ಸರ್ಕಾರ ರೂಪಿಸಿದ ಯೋಜನೆ ಫಲಕಾರಿಯೇ, ಜನರ ಅಭಿಪ್ರಾಯವೇನು ಎಂಬುದನ್ನು ಅರಿ ಯುವುದಾಗಿದೆ. ಸಾರಾಯಿ ನಿಷೇಧ, ಲಾಟರಿ ನಿಷೇಧ, ಸಾಲ ಮನ್ನಾ, ಸುವರ್ಣ ಗ್ರಾಮ ಯೋಜನೆ ಜಾರಿ, ಒಂದು ಸಾವಿರ ಪ್ರೌಢ ಶಾಲೆ, ಐದು ನೂರು ಪಿಯು ಹಾಗೂ ಪದವಿ ಕಾಲೇಜುಗಳ ಸ್ಥಾಪನೆ ತೀರ್ಮಾನಕ್ಕೆ ಗ್ರಾಮ ವಾಸ್ತವ್ಯವೇ ಕಾರಣ ಎಂದು ಹೇಳಿದ್ದಾರೆ.