Advertisement

ಅಪೋಲೊ ಆಸ್ಪತ್ರೆಗೆ ಸಿಎಂ ಭೇಟಿ ; ಸಚಿವ ಡಿಕೆಶಿ ಆರೋಗ್ಯ ವಿಚಾರಣೆ 

10:10 AM Sep 20, 2018 | Team Udayavani |

ಬೆಂಗಳೂರು: ಫ‌ುಡ್‌ ಪಾಯ್ಸನ್‌ನಿಂದಾಗಿ ಅಸ್ವಸ್ಥಗೊಂಡು ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಡಿ.ಕೆ.ಶಿವಕುಮಾರ್‌ ಅವರನ್ನು  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

Advertisement

ಗುರುವಾರ ಬೆಳಗ್ಗೆ ಆಸ್ಪತ್ರೆಗೆ ಆಗಮಿಸಿದ ಸಿಎಂ ಕೆಲ ಹೊತ್ತು ಸಚಿವ ಡಿಕೆಶಿ ಅವರೊಂದಿಗೆ ಮಾತುಕತೆ ನಡೆಸಿ ವಾಪಾಸಾದರು. ಈ ವೇಳೆ ಸಂಸದ ಡಿ.ಕೆ.ಸುರೇಶ್‌ ಅವರು ಹಾಜರಿದ್ದರು.

ಮಂಗಳವಾರ ತೀವ್ರ ವಾಂತಿಯ ಬಳಿಕ ಸಚಿವ ಡಿಕೆಶಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಅವರು ಸಂಪೂರ್ಣ ಚೇತರಿಸಿಕೊಂಡಿದ್ದು ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಲಿದ್ದಾರೆ ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next