ಚಿಕ್ಕಮಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಡಿ.25ರಂದುಚಿಕ್ಕಮಗಳೂರು ನಗರಕ್ಕೆ ಆಗಮಿಸಲಿದ್ದಾರೆ.
ಸಿ.ಎಂ. ಜಿಲ್ಲೆಗೆ ಆಗಮಿಸುವ ಹಿನ್ನೆಲೆಯಲ್ಲಿ ಅನೇಕ ವರ್ಷಗಳಿಂದ ಡಾಂಬರ್ ಕಾಣದ ರಸ್ತೆಗಳಿಗೆ ಈಗ ಹೊಸದಾಗಿ ಡಾಂಬರ್ ಹಾಕುತ್ತಿದ್ದು, ಸದ್ಯ ರಸ್ತೆಗಳು ಕಪ್ಪು ಸುಂದರಿಯಂತೆ ಕಂಗೊಳಿಸುತ್ತಿವೆ. ಡಿ.25ರಂದು 1060 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮ ನಗರದ ಸುಭಾಷ್‌ಚಂದ್ರ ಬೋಸ್ ಆಟದ ಮೈದಾನದಲ್ಲಿ ನಡೆಯಲಿದೆ. ಈಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಭರ್ಜರಿ ಸಿದ್ಧತೆಯೂನಡೆಯುತ್ತಿದೆ. ಇದರ ನಡುವೆ ಅನೇಕ ವರ್ಷಗಳಿಂದ ಡಾಂಬರು ಕಾಣದೆ ಹೊಂಡ-ಗುಂಡಿಗಳಿಂದ ಕೂಡಿದ್ದರಸ್ತೆಗಳಿಗೆ ತುರಾತುರಿಯಲ್ಲಿ ಡಾಂಬರು ಬಳಿಯುವ ಕೆಲಸವನ್ನು ಮಾಡಲಾಗುತ್ತಿದೆ.
ಸಿ.ಎಂ.ಯಡಿಯೂರಪ್ಪ ಅವರು ಅಂದು ಹೆಲಿಕ್ಯಾಟರ್ ನಗರದ ಐಡಿಎಸ್‌ಜಿ ಕಾಲೇಜು ಆವರಣದಲ್ಲಿ ಲ್ಯಾಂಡ್ ಆಗಲು ವ್ಯವಸ್ಥೆಕಲ್ಪಿಸಲಾಗುತ್ತಿದೆ. ಅಲ್ಲಿಂದ ಹೊರಟು ಬೈಪಾಸ್ ರಸ್ತೆಮೂಲಕ ಪ್ರವಾಸಿ ಮಂದಿರಕ್ಕೆ ಬಂದು ನಂತರ ಜಿಲ್ಲಾಆಟದ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಸಾಗಿ ಬರುವ ರಸ್ತೆ ಉದ್ದಕ್ಕೂ ತರಾತುರಿಯಲ್ಲಿ ಡಾಂಬರೀಕರಣ ನಡೆಸಲಾಗುತ್ತಿದೆ. ಇಷ್ಟು ವರ್ಷಗಳು ಹೊಂಡ-ಗುಂಡಿಗಳಿಂದ ಕೂಡಿದ್ದ ರಸ್ತೆ ಅಧಿಕಾರಿಗಳ ಕಣ್ಣಿಗೆ ಬಿದ್ದಿರಲಿಲ್ಲವೇ ಎಂದು ಸಾರ್ವಜನಿಕರು ಆಶ್ಚರ್ಯ ಚಕಿತರಾಗಿದ್ದಾರೆ.
ನಗರದಲ್ಲಿ ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಅನೇಕ ರಸ್ತೆಗಳು ಹೊಂಡ ಗುಂಡಿ ಬಿದ್ದು ಸಾರ್ವಜನಿಕರು ಪ್ರತಿನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ಅನೇಕ ಸಂಘ ಸಂಸ್ಥೆಗಳು ರಸ್ತೆ ಸರಿಪಡುವಂತೆ ಹೋರಾಟಗಳನ್ನು ನಡೆಸಿದ್ದರು.
ಇದ್ಯಾವುದಕ್ಕೂ ಕ್ಯಾರೇ ಎನ್ನದ ಅಧಿಕಾರಿಗಳು ಈಗ ತುರಾತುರಿಯಲ್ಲಿ ಮುಖ್ಯಮಂತ್ರಿಗಳು ಆಗಮಿಸುವ ರಸ್ತೆಗಳಿಗೆ ಡಾಂಬರು ಬಳಿಯುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಈಗ ಹಾಕುತ್ತಿರುವ ಕಾಮಗಾರಿಯೂ ತುರಾತುರಿಯಲ್ಲಿ ಅವೈಜ್ಞಾಕವಾಗಿ ಹಾಕಲಾಗುತ್ತಿದ್ದುಸಾರ್ವಜನಿಕರ ಹಣ ಪೋಲು ಮಾಡುತ್ತಿರುವುದಕ್ಕೆ ಸಾರ್ವಜನಿಕರು ಗರಂ ಆಗಿದ್ದಾರೆ.