Advertisement

 ಸಿ.ಎಂ. ಭೇಟಿ ಹಿನ್ನೆಲೆ, ಜಿಲ್ಲಾಧಿಕಾರಿ ಪರಿಶೀಲನೆ

10:10 AM Dec 31, 2017 | Team Udayavani |

ಮೂಡಬಿದಿರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಜ.7ರಂದು ಮೂಡಬಿದಿರೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ
ಧಿಕಾರಿ ಸಸಿಕಾಂತ್‌ ಸೆಂಥಿಲ್‌ ಎಸ್‌. ಅವರು ಶನಿವಾರ ಅಪರಾಹ್ನ ಮೂಡಬಿದಿರೆಗೆ ಆಗಮಿಸಿ ಸ್ಥಳ ಪರಿಶೀಲನೆಗೈದು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

Advertisement

ಹೆಲಿಪ್ಯಾಡ್‌ ರಚಿಸಲಾಗಿರುವ ಮಹಾವೀರ ಕಾಲೇಜು ಕ್ರೀಡಾಂಗಣ, ನೂತನ ಮೆಸ್ಕಾಂ ಕಚೇರಿ ಆವರಣಕ್ಕೆ ತೆರಳಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಅವರು ತಹಶೀಲ್ದಾರ್‌ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಫಲಾನುಭವಿಗಳು, ಅಗತ್ಯವಿರುವ ಶಾಲಾ ಮಕ್ಕಳು ಹೀಗೆ ವಿವಿಧ ಯೋಜನೆಗಳಿಗೆ ಸಂಬಂಧಿಸಿದವರು ಕಾರ್ಯಕ್ರಮದಲ್ಲಿ ಹಾಜರಿರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಮೂರು ದಿನಗಳ ಬಳಿಕ ಮತ್ತೂಮ್ಮೆ ಆಗಮಿಸಿ ಅಂತಿಮ ಹಂತದ ಪರಿಶೀಲನೆಯನ್ನು ನಡೆಸುವುದಾಗಿ ಸೂಚಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿಎಂ ಭೇಟಿಯ ಹಿನ್ನೆಲೆಯಲ್ಲಿ ಬೆಳ್ತಂಗಡಿ, ಪುತ್ತೂರು, ಮೂಡಬಿದಿರೆಯಲ್ಲಿ
ಸ್ಥಳ ಪರಿಶೀಲನೆ ಮಾಡಿದ್ದು , ಸಿದ್ಧತೆಗಳು ಉತ್ತಮವಾಗಿವೆ. ಮೂಡಬಿದಿರೆ ದ.ಕ. ಜಿಲ್ಲೆಯ ಹೆಮ್ಮೆಯ ಪಾರಂಪರಿಕ ತಾಣವಾಗಿದ್ದು, ಈ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಸಾಕಷ್ಟು ಅವಕಾಶಗಳಿವೆ. ಒಂದಷ್ಟು ಸಮಸ್ಯೆಗಳೂ ಇವೆ. ತಾಲೂಕು ಕೇಂದ್ರವಾಗುತ್ತಿರುವ ಕಾರಣಕ್ಕಾಗಿ ಮೂಲ ಸೌಕರ್ಯಗಳನ್ನು ತ್ವರಿತವಾಗಿ ಒದಗಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಕುಮಾರ್‌, ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌, ಸಹಾಯಕ ಕಮಿಷನರ್‌ ರೇಣುಕಾ ಪ್ರಸಾದ್‌, ಯೋಜನಾ ನಿರ್ದೇಶಕ ಪ್ರಸನ್ನ ಕುಮಾರ್‌, ತಹಶೀಲ್ದಾರ್‌ ಮಹಮ್ಮದ್‌ ಇಸಾಕ್‌ ಮತ್ತಿತರರು ಉಪಸ್ಥಿತರಿದ್ದರು.

ಅಧಿಕಾರಿಗಳಿಗೆ ಸೂಚನೆ
ಮುಖ್ಯಮಂತ್ರಿ ಮೂಡಬಿದಿರೆಗೆ ಆಗಮಿಸುತ್ತಿರುವುದ ರಿಂದ ಬೆಳಕು, ವೇದಿಕೆ, ಆಸನಗಳು, ಕುಡಿ ಯುವ ನೀರಿನ ವ್ಯವಸ್ಥೆಯಲ್ಲಿ ಗೊಂದಲಗಳಾಗದಂತೆ ಸೂಕ್ತ ಮುನ್ನೆ ಚ್ಚರಿಕೆ ವಹಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next