Advertisement

ಸಿಎಂ ಗ್ರಾಮ ವಾಸ್ತವ್ಯ ಸ್ವಾಗತಾರ್ಹ: ಹೆಗ್ಗಡೆ

10:57 PM Jun 21, 2019 | Lakshmi GovindaRaj |

ಬೆಳ್ತಂಗಡಿ: “ರಾಜ್ಯದ ಮುಖ್ಯಮಂತ್ರಿ ಗ್ರಾಮಗಳ ನೈಜ ಸಮಸ್ಯೆಗಳ ಗಂಭೀರತೆಯನ್ನು ಅರಿಯಲು ಗ್ರಾಮವಾಸ್ತವ್ಯ ನಡೆಸಬೇಕು’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸಲಹೆ ನೀಡಿದರು.

Advertisement

ಧರ್ಮಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಜನರೊಂದಿಗೆ ಬೆರೆಯುವ ದೃಷ್ಟಿಯಿಂದ ಹಿಂದೆ ರಾಜೀವ್‌ ಗಾಂಧಿ ಜನಸಂಪರ್ಕ ಆರಂಭಿಸಿದ್ದರು. ಜನಸಾಮಾನ್ಯರ ವಾಸ್ತವ ಸಮಸ್ಯೆಗಳು ಪ್ರಧಾನಮಂತ್ರಿ, ಮುಖ್ಯಮಂತ್ರಿಯವರೆಗೆ ತಲುಪುತ್ತಿಲ್ಲ.

ಮಂತ್ರಿಗಳ ಗ್ರಾಮವಾಸ್ತವ್ಯದ ಸಂದರ್ಭ ಅಧಿಕಾರಿಗಳು ನೈಜ ಸಮಸ್ಯೆಗಳ ಅರಿವು ನೀಡುತ್ತಿಲ್ಲ, ಸಮಸ್ಯೆಗಳಿಗೆ ಸಾಧ್ಯವಾದಷ್ಟು ಪರಿಹಾರ ಸೂಚಿಸುತ್ತಿಲ್ಲ. ಎಲ್ಲೋ ಆತ್ಮಹತ್ಯೆ, ದುರ್ಘ‌ಟನೆ ಆದ ಬಳಿಕ ಪರಿಹಾರ ಹುಡುಕುವ ಬದಲು ಸಮಸ್ಯೆಯ ಅರಿವು ಸರಕಾರಕ್ಕೆ ಮುಂಚಿತವಾಗಿಯೇ ಇರಬೇಕು’ ಎಂದರು. ಮುಖ್ಯಮಂತ್ರಿ ಅವರ ಗ್ರಾಮವಾಸ್ತವ್ಯವನ್ನು ಸ್ವಾಗತಿಸುತ್ತೇನೆ.

ಗ್ರಾಮ ವಾಸ್ತವ್ಯದಲ್ಲಿ ಅಧಿಕಾರಿಗಳು ಜನರ ಭೇಟಿ ತಡೆಯಬಾರದು. ಮುಕ್ತವಾಗಿ ಜನರೊಂದಿಗೆ ಸಂಭಾಷಣೆ, ಮಾತುಕತೆ ನಡೆಸಿ ಸಮಸ್ಯೆ ಆಲಿಸಿದರೆ ಇನ್ನೂ ಉತ್ತಮ. ಕನಿಷ್ಠ ಒಂದು ತಾಸಿನ ಸಂಪರ್ಕ ಸಭೆಯಾಗಿ ಗ್ರಾಮ ವಾಸ್ತವ್ಯ ಪರಿವರ್ತನೆಯಾಗಲಿ ಎಂದು ಹೆಗ್ಗಡೆ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next