Advertisement
ಕಾರ್ಯಕ್ರಮದಲ್ಲಿ ಕೈಗೊಂಡ ವಿಜಯಪುರ ನಿರ್ಣಯದ ಕುರಿತು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುತ್ತ ಕನ್ನಡದಲ್ಲೇ ಸರ್ಕಾರ ಕೈಗೊಳ್ಳುವ ಕ್ರಮಗಳನ್ನು ವಿವರಿಸುತ್ತಿದ್ದರು. ಈ ಹಂತದಲ್ಲಿ ರಾಷ್ಟ್ರೀಯ ಜಲ ಸಮಾವೇಶದಲ್ಲಿ ರಾಷ್ಟ್ರದ 101 ನದಿ ಪಾತ್ರದ ಎಲ್ಲ ರಾಜ್ಯಗಳ ಜನರು ಪಾಲ್ಗೊಂಡಿದ್ದಾರೆ. ಹೀಗಾಗಿ ಇಂಗ್ಲಿಷ್‌ನಲ್ಲಿ ಮಾತನಾಡಿ ಎಂಬ ಕೂಗು ಕೇಳಿಬಂತು. ಸಚಿವ ಎಂ.ಬಿ.ಪಾಟೀಲರೂ ಇದಕ್ಕೆ ಧ್ವನಿಗೂಡಿಸಿದರು. ಆಗ “ನೋ… ನೋ… ಐ ಡೋಂಟ್ ಟಾಕ್ ಇನ್ ಇಂಗ್ಲಿಷ್, ಸಚಿವ ಎಂ.ಬಿ. ಪಾಟೀಲ ಅವರು ಈಗಾಗಲೇ ಇದೇ ವಿಷಯಗಳನ್ನು ಇಂಗ್ಲಿಷ್‌ನಲ್ಲಿ ಓದಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಹೀಗಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ’ ಎಂದು ಭಾಷಣ ಮುಂದುವರಿಸಿದರು. ಆಗ ಸಭಿಕರಿಂದ ಸಿಎಂ ನಡೆ ಬೆಂಬಲಿಸಿ ಜೋರಾದ ಕೂಗು ಕೇಳಿಬಂತು. Advertisement
ಇಂಗ್ಲಿಷ್‌ನಲ್ಲಿ ಮಾತನಾಡಲು ಒಪ್ಪದ ಸಿಎಂ
08:05 AM Aug 19, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.