Advertisement

ಸಮಾಜದ್ರೋಹಿಗಳಿಗೆ ಸಿಎಂ ಬೆಂಬಲ : ಪ್ರಭಾಕರ ಭಟ್‌ ವಾಗ್ಧಾಳಿ

06:35 AM Jan 29, 2018 | Team Udayavani |

ತುಮಕೂರು: ರಾಜ್ಯದಲ್ಲಿ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಸಮಾಜದಲ್ಲಿ ಅಶಾಂತಿ  ಉಂಟು ಮಾಡಿದ ದ್ರೋಹಿಗಳನ್ನು  ಬೆಂಬಲಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಂದಾಗಿದ್ದು  ಅಲ್ಪಸಂಖ್ಯಾಕರ ಮೇಲಣ ಪ್ರಕರಣಗಳನ್ನು ವಾಪಸ್‌ ಪಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಮುಗ್ಧ ಎಂದು ಹೇಳುವುದು ಸಿದ್ದರಾಮಯ್ಯ ಅಲ್ಲ ಅದನ್ನು ನ್ಯಾಯಾಲಯ ಹೇಳಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣಮಧ್ಯ ಕ್ಷೇತ್ರೀಯ ಕಾರ್ಯಕಾರಣಿ ಸದಸ್ಯ ಡಾ. ಪ್ರಭಾಕರ ಭಟ್‌ ತೀವ್ರ ವಾಗ್ಧಾಳಿ ನಡೆಸಿದರು.

Advertisement

ನಗರದ ಸರಕಾರಿ ಜ್ಯೂನಿಯರ್‌ ಕಾಲೇಜು ಮೈದಾನದಲ್ಲಿ ರವಿವಾರ ಸಂಜೆ ನಗರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ  ಏರ್ಪಡಿಸಿದ್ದ  ಪಥ ಸಂಚಲನದ ನಂತರ ನಡೆದ  ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಗೆ ಕಾರಣವಾಗಿರುವ  ಪಿಎಫ್ಐ ಮತ್ತು ಎಸ್‌.ಡಿ.ಪಿ.ಐ. ಸದಸ್ಯರ ವಿರುದ್ಧದ ಪ್ರಕರಣಗಳನ್ನು ರಾಜ್ಯ ಸರಕಾರ ವಾಪಸ್‌ ಪಡೆದಿದ್ದರಿಂದಲೇ ರಾಜ್ಯದಲ್ಲಿ ಹಿಂದೂಗಳ ಹತ್ಯೆ ನಡೆಯುತ್ತಿದೆ. ರಾಜ್ಯದಲ್ಲಿ  ಮತ್ತೆ ಕೋಮುಗಲಭೆಯನ್ನು ಸೃಷ್ಟಿಸಿ  ಅಧಿಕಾರ ಗದ್ದುಗೆ ಹಿಡಿಯುವ ಹುನ್ನಾರದಲ್ಲಿ ಸರಕಾರ ತೊಡಗಿದೆ ಎಂದು ಆರೋಪಿಸಿದರು.

ಹಿಂದೂ  ಎಂದರೆ ಕೋಮುವಾದಿಗಳು ಎನ್ನುತ್ತಿದ್ದ  ಸಿದ್ದರಾಮಯ್ಯ ಇಂದು ನಾನು ಸಾಫ್ಟ್ ಹಿಂದೂ ಎಂದು ಹೇಳಿಕೊಳ್ಳುತ್ತಿದ್ದಾರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶಯವೂ ಇದೇ ಆಗಿದೆ ಈ ದೇಶದಲ್ಲಿ ಇರುವ ಪ್ರತಿಯೊಬ್ಬರು ಹಿಂದೂಗಳಾಗಬೇಕು ಎಂದ ಅವರು ದೇವಾಲಯಗಳಿಗೆ ಹೋಗದೆ ಇದ್ದ ಕಾಂಗ್ರೆಸಿಗರ ದಂಡು ಈಗ ದೇವಾಲಯಗಳಿಗೆ ಹೋಗುತ್ತಿದೆ ಎಂದು ಕಿಚಾಯಿಸಿದರು. ಮಹಿಳೆಯನ್ನು ಪೂಜಿಸಿ ಗೌರವಿಸುವ ಧರ್ಮ ಹಿಂದು ಧರ್ಮ ದೇಶದ ಭೂಮಿಯನ್ನು ಆರಾಧಿಸುವ, ಮಹಾಪುರುಷರ ಪರಂಪರೆಯನ್ನು ಗೌರವಿಸುವ, ಸಂಸ್ಕೃತಿಯನ್ನು ಪೂಜಿಸುವವರು ಮಾತ್ರ ಭಾರತ ಮಾತೆಯ ಹೆಮ್ಮೆಯ ಪುತ್ರರಾಗುತ್ತಾರೆ ಎಂದು ನುಡಿದರು.

ವಿಶ್ವದಲ್ಲಿ ತಮ್ಮ ದೇಶವನ್ನು ತಾಯಿ ಎಂದು ಹೇಳಿರು ವುದು ಭಾರತ ದೇಶದ ಹಿಂದೂಗಳು ಮಾತ್ರ. ಬೇರೆ ದೇಶಗಳಲ್ಲಿ ಹೆಣ್ಣನ್ನು  ಭೋಗದ ವಸ್ತುವಾಗಿ ನೋಡುತ್ತಾರೆ. ಭಾರತದಲ್ಲಿ  ಮಾತ್ರವೇ ಹೆಣ್ಣನ್ನು ತಾಯಿ ಎಂದು ಪೂಜಿಸುವ ಮನೋಭಾವ ಇದೆ ಎಂದ ಅವರು ನಮ್ಮದು  ಪ್ರಕೃತಿಯನ್ನು ಆರಾಧನೆ  ಮಾಡುವ ದೇಶ. ಭಾರತ ಮಾತೆಯ ಮಣ್ಣಿನ ಕಣಕಣದಲ್ಲೂ ಪಾಪವನ್ನು ತೊಳೆಯುವ ಶಕ್ತಿ ಇದೆ ಎಂದರು. ಹೆಣ್ಣುಮಕ್ಕಳನ್ನು ತಾಯಿ ಎಂದು ಗೌರವಿಸುವ ನಮ್ಮ ನಾಡಿನಲ್ಲಿ ಹೆಣ್ಣುಮಕ್ಕಳನ್ನು ಲವ್‌ ಜೆಹಾದ್‌ ಹೆಸರಲ್ಲಿ  ಹಿಂಸಿಸಲಾಗುತ್ತಿದೆ ಎಂದವರು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next