Advertisement

ಮತದಾರರು ಬಿಎಸ್‌ವೈ ಜೇಬಲ್ಲಿಲ್ಲ : ಸಿಎಂ ತಿರುಗೇಟು

10:45 AM Mar 10, 2017 | Team Udayavani |

ಬೆಂಗಳೂರು: ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಗಳಲ್ಲಿ ಬಿಜೆಪಿ ಜಯ ಗಳಿಸಲಿದೆ ಎಂಬ ಬಿಜೆಪಿ
ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮತದಾರರು
ಯಡಿಯೂರಪ್ಪ ಅವರ ಜೇಬಿನಲ್ಲಿಲ್ಲ ಎಂದು ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ್ದಾರೆ.

Advertisement

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ಈಗಾಗಲೇ ಚುನಾವಣೆ ಕಾರ್ಯತಂತ್ರ ಆರಂಭಿಸಿದೆ. ಎರಡೂ ಕ್ಷೇತ್ರಗಳನ್ನು ನಾವು ಗೆಲ್ಲುವುದು ಖಚಿತ ಎಂದು ಹೇಳಿದರು. ಶ್ರೀನಿವಾಸ್‌ ಪ್ರಸಾದ್‌ ಪಕ್ಷ ತೊರೆದಿರುವುದು
ಹಾಗೂ ಮಹದೇವ ಪ್ರಸಾದ್‌ ಅವರ ಅಕಾಲಿಕ ನಿಧನದಿಂದ ಅನಿವಾರ್ಯವಾಗಿ ಬಂದಿರುವ ಉಪ ಚುನಾವಣೆಯ ಫ‌ಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿ ಆಗಲಾರದು ಎಂದರು.

ಬಿಜೆಪಿಯಿಂದ ನಮ್ಮ ಪಕ್ಷಕ್ಕೂ ಬರುವವರಿದ್ದಾರೆ
ಮದ್ದೂರು:
ಕಾಂಗ್ರೆಸ್‌ ಪಕ್ಷದಿಂದ ಯಾರೂ ವಲಸೆ ಹೋಗುತ್ತಿಲ್ಲ. ಇವತ್ತು ಯಾರೋ ಕೆಲವರು ಬಿಜೆಪಿಗೆ ಸೇರಿರಬಹುದು. ಮುಂದೆ ಆ ಪಕ್ಷದಿಂದ ನಮ್ಮ ಪಕ್ಷಕ್ಕೆ ಯಾರ್ಯಾರು ಬರುತ್ತಾರೆ ಎನ್ನುವುದು ಮುಂದಿನ ದಿನಗಳಲ್ಲಿ
ತಿಳಿಯಲಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.

ಬೆಂಗಳೂರಿನಿಂದ ಕೊಳ್ಳೇಗಾಲ ತಾಲೂಕಿನ ಹನೂರು ಗ್ರಾಮದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ತೆರಳುವಾಗ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.

ಜಯಪ್ರಕಾಶ್‌ ಹೆಗ್ಡೆ, ರತನ್‌ಸಿಂಗ್‌ ಅವರೆಲ್ಲಾ ಮೊದಲೇ ಬಿಜೆಪಿ ಸೇರುವ ಬಗ್ಗೆ ಮಾತನಾಡಿಕೊಂಡಿದ್ದರು. ಈಗ ಬಿಜೆಪಿ
ಸೇರ್ಪಡೆಯಾಗಿದ್ದಾರೆ. ಅವರನ್ನು ಬಿಟ್ಟು ಇನ್ಯಾವ ಮುಖಂಡರೂ ಹೋಗುತ್ತಿಲ್ಲವಲ್ಲ ಎಂದರು. ಮಾಜಿ ಸಿಎಂ ಎಸ್‌.ಎಂ.ಕೃಷ್ಣ, ಮಾಜಿ ಸಚಿವ ಅಂಬರೀಶ್‌ ಬಿಜೆಪಿ ಸೇರುತ್ತಾರೆ ಎನ್ನುವುದು ಕೇವಲ ಊಹಾಪೋಹ ಇನ್ನೂ ಯಾವುದೂ ಖಚಿತವಾಗಿಲ್ಲ. ಆ ಬೆಳವಣಿಗೆಗಳಾದ ಬಳಿಕ ಮಾತನಾಡೋಣ. ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್‌ ಗೆದ್ದು ಅಧಿಕಾರಕ್ಕೆ ಬರುತ್ತೆ. ಬಿಜೆಪಿ ವಿಪಕ್ಷದಲ್ಲಿರುತ್ತದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next