Advertisement

ಮುಂದಿನ ಬಾರಿ ಸ್ಪರ್ಧೆ ಮಾಡಲ್ಲ… ನಿವೃತ್ತಿಗೆ ತೀರ್ಮಾನ ಮಾಡಿದ್ದೇನೆ: ಮಸೂರಿನಲ್ಲಿ ಸಿಎಂ

12:17 PM Apr 02, 2024 | Team Udayavani |

ಮೈಸೂರು: ಮುಂದಿನ ಬಾರಿ ನಾನು ಚುನಾವಣೆಗೆ ನಿಲ್ಲಲ್ಲ ಹಾಗಾಗಿ ಈ ಬಾರಿ ನಾನು ಕೊನೆಯದಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

Advertisement

ಮೈಸೂರಿಗೆ ಭೇಟಿ ನೀಡಿ ಮಾತನಾಡಿದ ಅವರು ಮುಂದಿನ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ತೀರ್ಮಾನಿಸಿದ್ದೇನೆ. ಜನರು ಪ್ರೀತಿಯಿಂದ ಮತ್ತೆ ಮತ್ತೆ ಸ್ಪರ್ಧೆ ಮಾಡಿ ಎಂದು ಕೇಳುತಿದ್ದಾರೆ ಆದರೆ ನಾನು ನಿವೃತ್ತಿಗೆ ತೀರ್ಮಾನ ಮಾಡಿದ್ದೇನೆ. ಮುಂದಿನ ನಾಲ್ಕು ವರ್ಷಕ್ಕೆ ನನಗೆ 83 ವಯಸ್ಸು ಆಗಿ ಬಿಡುತ್ತದೆ. 83 ವರ್ಷ ಆದ ಮೇಲೆ ಇಷ್ಟೊಂದು ಉತ್ಸಾಹದಲ್ಲಿ ಕೆಲಸ ಮಾಡಲು ಆಗುವುದಿಲ್ಲ ಎಂಬುದು ಗೊತ್ತಿದೆ. ನನ್ನ ದೇಹದ ಸ್ಥಿರಿ ನನಗೆ ಮಾತ್ರ ಗೊತ್ತಿರುತ್ತೆ‌, ಇದಕ್ಕೆ ಚುನಾವಣಾ ರಾಜಕಾರಣ ಸಾಕು ಎಂದಿಕೊಂಡಿದ್ದೇನೆ ಎಂದು ಹೇಳಿದರು.

ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಗೂಂಡಾ ಎಂಬ ಹೇಳಿಕೆ ನೀಡಿದ ವಿಚಾರದಲ್ಲಿ ನನ್ನ ಮಗನಿಗೆ ಚುನಾವಣಾ ಆಯೋಗದಿಂದ ನೋಟಿಸ್ ಬಂದಿದೆ. ಅದಕ್ಕೆ ಉತ್ತರವನ್ನೂ ಕೊಟ್ಟಿದ್ದೇವೆ. ನಾನು ಆ ಬಗ್ಗೆ ಮತ್ತೇನು ಪ್ರತಿಕ್ರಿಯೆ ಕೊಡುವುದಿಲ್ಲ. ನೋಟೀಸ್ ನಲ್ಲಿ ಏನಿದೆ ಎಂಬ ಬಗ್ಗೆ ನನ್ನ ಮಗನಿಗೆ ಗೊತ್ತು ಎಂದು ಹೇಳಿದರು.

ಅಮಿತ್ ಶಾ ರಾಜ್ಯ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅಮಿತ್ ಶಾಗೆ ಕನ್ನಡಿಗರ ಮತ ಕೇಳಲು ಯಾವ ನೈತಿಕತೆ ಇದೆ. ನಮಗೆ ಬರಗಾಲದ ಪರಿಹಾರ ಐದು ಪೈಸೆಯೂ ಬಂದಿಲ್ಲ. ಹೀಗಿರುವಾಗ ಪರಿಹಾರ ಕೊಡದೆ ಹೇಗೆ ಬಂದು ಇಲ್ಲಿ ಮತ ಕೇಳುತ್ತಾರೆ. ಅಮಿತ್ ಶಾ ತಮ್ಮ ಮನೆಯಿಂದ ಏನು ಬರ ಪರಿಹಾರದ ಹಣ ಕೊಡುತ್ತಾರಾ. ಅದೇನು ನಮಗೆ ನೀಡುವ ಭಿಕ್ಷೆನಾ ಎಂದು ಕಿಡಿಕಾರಿದ ಸಿದ್ದು, ಬಿಜೆಪಿ ಜೊತೆ ಕೈಜೋಡಿಸಿರುವ ಕುಮಾರಸ್ವಾಮಿ ರಾಜ್ಯಕ್ಕೆ ಪರಿಹಾರ ಕೊಡಿಸಿ ನಂತರ ಕೇಂದ್ರ ಸಚಿವರನ್ನು ಕರೆದುಕೊಂಡು ಬರಬೇಕಿತ್ತು. ಕನ್ನಡಿಗರು ಈ ಚುನಾವಣೆಯಲ್ಲಿ ಅವರಿಗೆ ಸರಿಯಾದ ಪಾಠ ಕಲಿಸುತ್ತಾರೆ. ಕುಮಾರಸ್ವಾಮಿ ಬಿಜೆಪಿಯ ದೊಡ್ಡ ವಕ್ತಾರನಂತೆ ವರ್ತಿಸುತ್ತಿದ್ದಾರೆ ಆದರೆ ಪರಿಹಾರ ಕೊಡದನ್ನ ಕುಮಾರಸ್ವಾಮಿ ಸಮರ್ಥಿಸಿಕೊಳ್ಳುತ್ತಾರ ಎಂದು ಪ್ರಶ್ನಿಸಿದರು.

ಮಂಡ್ಯದ ಸ್ಪರ್ಧೆ ದೇವರ ಇಚ್ಚೆ ಎಂದು ಹೇಳಿದ್ದ ಕುಮಾರಸ್ವಾಮಿ ಹೇಳಿಕೆಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಅವರು ಮಗನನ್ನ ನಿಲ್ಲಿಸುವಾಗ ಯಾರ ಇಚ್ಚೇ ಇತ್ತು. ಈಗ ದೇವರು ಎಂದರೆ ಆಗ ಯಾರಿದ್ದರು. ಸಿಎಂ ಆಗಿದ್ದಾಗಲೇ ಅವರ ಮಗ ಅಲ್ಲಿ ಸೋತ್ತಿದ್ದಾನೆ. ಈ ಬಾರಿ ಜೆಡಿಎಸ್ ಮೂರಕ್ಕೆ ಮೂರರಲ್ಲೂ ಸೋಲುತ್ತಾರೆ. ಕಳೆದ ಬಾರಿ ಮೈಸೂರಿನಲ್ಲಿ ಜೆಡಿಎಸ್ ನವರು ಕಾಂಗ್ರೆಸ್ ಗೆ ಹಾಕಿದ್ದು ಯಾವ ಚೂರಿ. ಮೈತ್ರಿ ಧರ್ಮ ಎಂದರೆ ಎಲ್ಲಾ ಕ್ಷೇತ್ರಕ್ಕೂ ಒಂದೇ. ಮೈಸೂರಿನಲ್ಲಿ ಚೂರಿ ಹಾಕಿ ಈಗ ಮಂಡ್ಯದಲ್ಲಿ ನಮಗೆ ಚೂರಿ ಹಾಕಿದ್ದಾರೆ ಎಂದರೇ ಅದರಲ್ಲಿ ಯಾವ ನ್ಯಾಯ ಇದೆ ಹೇಳಿ. ಕಳೆದ ಬಾರಿ ನಾನು ಹೋಗಿದ್ದಕ್ಕೆ ಹಾಸನದಲ್ಲಿ ಪ್ರಜ್ವಲ್ ಗೆದಿದ್ದು. ಈ ಬಾರಿಯೂ ಹಾಸನಕ್ಕೆ ಹೋಗುತ್ತೇನೆ. ಪ್ರಜ್ವಲ್ ನನ್ನು ಸೋಲಿಸುತ್ತೇನೆ. ಪ್ರಜ್ವಲ್ ಸೋಲಿಸಲೇ ಬೇಕೆಂದು ನಮ್ಮವರು ಪಣ ತೊಟ್ಟಿದ್ದಾರೆ, ಪ್ರಜ್ವಲ್ ಸೋಲುತ್ತಾನೆ ಎಂದರು.

Advertisement

ವರುಣದಲ್ಲಿ ಭಾವನಾತ್ಮಕವಾಗಿ ಮತ ಕೇಳಿದ ವಿಚಾರಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ ಅವರು ಅದರಲ್ಲಿ ಭಾವನಾತ್ಮಕ ಏನು ಅಲ್ಲ. ಹೆಚ್ಚು ಲೀಡ್ ಬೇಕು ಎಂದು ಸ್ವಕ್ಷೇತ್ರದವರನ್ನ ಕೇಳಿದ್ದೇನೆ ಅಷ್ಟೇ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಮಗೆ ಬರಿ 9 ಸಾವಿರ ಲೀಡ್ ಬಂದಿತ್ತು. ಈ ಬಾರಿ ಅದನ್ನ 60 ಸಾವಿರ ಮುಟ್ಟಿಸಿ ಎಂದು ಹೇಳಿದ್ದೇನೆ. ಅದಕ್ಕೆ ಬೇರೆ ರೀತಿಯ ವಿಶ್ಲೇಷಣೆ ಏನು ಇಲ್ಲ. ಅದು ನನ್ಮ ಸಹಜವಾದ ಮಾತುಗಳು ಅಷ್ಟೇ. ಮೈಸೂರು ಚಾಮರಾಜನಗರ ಮಾತ್ರವಲ್ಲ 28 ಕ್ಷೇತ್ರ ವಿಚಾರದಲ್ಲೂ ನಾನು ಗಂಭೀರವಾಗಿದ್ದೇನೆ.

ಮತ್ತೊಂದು ಬಾರಿ ಈ ಕಡೆ ಭಾಗಕ್ಕೆ ಪ್ರವಾಸಕ್ಕೆ ಬರುತ್ತೇನೆ, ಬಿಜೆಪಿವರು ಬಂದರೇ ಬಡವರು ಕಾರ್ಯಕ್ರಮಗಳು ನಿಂತು ಹೋಗುತ್ತವೆ‌. ಹೀಗಾಗಿ ಬಿಜೆಪಿಯನ್ನ ಅಧಿಕಾರದಿಂದ ದೂರ ಇಡಲು ಹೆಚ್ಚು ಲೀಡ್ ಕೊಡಿ ಎಂದು ಕೇಳಿಕೊಂಡಿದ್ದೇನೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇಲ್ಲ. ಸುಮ್ಮನೆ ಕೆಲವೊಮ್ಮೆ ಊಹಾ ಪೋಹದ ವರದಿ ಬರೆಯುತ್ತಾರೆ. ಕೆಲ ಒಂದೆರಡು ಕಡೆ ಸಮಸ್ಯೆ ಇದ್ದರು ಅದನ್ನು ಬಗೆ ಹರಿಸುವಂತೆ ಹೇಳಿದ್ದೇನೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಯಾವ ಹಣದ ಸಮಸ್ಯೆ ಇಲ್ಲ. ಚುನಾವಣೆ ಇರುವುದರಿಂದ‌ ಸಭೆ ಮಾಡಲು ಆಗುತ್ತಿಲ್ಲ ಅಷ್ಟೆ. ಯಾವ ಸಮಸ್ಯೆ ಆಗದಂತೆ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Trump ಮೀಡಿಯಾ ಸಂಸ್ಥೆ ಷೇರು ಮೌಲ್ಯ ಕುಸಿತ…ಆದಾಯದಲ್ಲಿ 1 ಶತಕೋಟಿ ಡಾಲರ್‌ ನಷ್ಟ!

Advertisement

Udayavani is now on Telegram. Click here to join our channel and stay updated with the latest news.

Next