Advertisement

ಚಾಮುಂಡೇಶ್ವರಿಯಲ್ಲೇ ಸಿಎಂ ಸಿದ್ದರಾಮಯ್ಯ ರಾಜಕೀಯ ಜೀವನ ಕೊನೆ

06:05 AM Apr 03, 2018 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಜೀವನ ಆರಂಭಿಸಿದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲೇ ಈ ಬಾರಿಯ ಚುನಾವಣೆಯಲ್ಲಿ ಅವರ ರಾಜಕೀಯ ಜೀವನ ಕೊನೆಯಾಗಲಿದೆ ಎಂದು ಜೆಡಿಎಸ್‌ ವರಿಷ್ಠ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

Advertisement

ಜೆಡಿಎಸ್‌ ಕಚೇರಿಯಲ್ಲಿ ಸೋಮವಾರ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಮುಖಂಡ ಅಲ್ತಾಫ್ ಖಾನ್‌ ಅವರನ್ನು ಜೆಡಎಸ್‌ಗೆ ಸೇರಿಸಿಕೊಂಡ ಬಳಿಕ ಮಾತನಾಡಿದ ಅವರು, ಇದು ನನ್ನ ಕೊನೇ ಚುನಾವಣೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರಾಜಕೀಯ ಜೀವನ ಆರಂಭಿಸಿದ್ದು, ಅಲ್ಲಿಯೇ ಅದು ಕೊನೆಯಾಗಲಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ ಶಾಸಕರ ವಿರುದ್ಧ ಏವರ ಹೆಸರು ಪ್ರಸ್ತಾಪಿಸದೆ ಕಿಡಿ ಕಾರಿದ ದೇವೇಗೌಡ, ಅವರು ಈ ಪಕ್ಷದಿಂದ (ಜೆಡಿಎಸ್‌) ಬೆಳೆದು ಅಧಿಕಾರ ಅನುಭವಿಸಿದರು. ಉಪಮುಖ್ಯಮಂತ್ರಿ ಮಾಡಿದರೂ ಸಾಕಾಗಲಿಲ್ಲ. ಪಕ್ಷ ಬಿಟ್ಟು ಬೇರೆ ಪಕ್ಷ ಸೇರಿ ಮುಖ್ಯಮಂತ್ರಿಯಾದರು. ಆದರೂ ಸುಮ್ಮನಾಗದೆ ತಾಯಿ ಪಕ್ಷವನ್ನು ಮುಗಿಸಲು ಪ್ರಯತ್ನ ಮಾಡಿದ್ದಾರೆ. ನಮ್ಮ ಪಕ್ಷದವರನ್ನೂ ಕರೆದುಕೊಂಡು ಹೋದರು. ಅದಕ್ಕೆ ಸಹಾಯ ಮಾಡಿದ್ದೂ ನಮ್ಮ ಶಾಸಕರು. ಪಕ್ಷಕ್ಕೆ ದ್ರೋಹ ಬಗೆದವರು ತಾಯಿಗೆ ದ್ರೋಹ ಮಾಡಿದಂತೆ. ಅವರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ ಎಂದು ಕಿಡಿ ಕಾರಿದರು.

ಇಂದು ನನ್ನ ರಾಜಕೀಯ ಹೋರಾಟದಲ್ಲಿ ವಿಶೇಷ ಸಂದರ್ಭ. ನಾನು ನಂಬಿ ಬೆಳೆಸಿದವರು ಬಿಟ್ಟು ಹೋಗಿ ನಮ್ಮನ್ನೇ ಮುಗಿಸುವ ಮಾತುಗಳನ್ನಾಡುತ್ತಿದ್ದಾರೆ. ಆದರೆ, ನಾನು ದೇವರನ್ನು ನಂಬಿದ್ದೇನೆ. ಈಶ್ವರನನ್ನು ಪೂಜಿಸುತ್ತೇನೆ. ಈಶ್ವರ ಮತ್ತು ಅಲ್ಲ ಇಬ್ಬರೂ ಒಂದೇ. ಹೀಗಾಗಿ ಯಾರೂ ಸ್ವೇಚ್ಛಾಚಾರದ ಮಾತುಗಳನ್ನಾಡಬಾರದು. ಯಾರ ಬಗ್ಗೆಯಾದರೂ ಮಾತನಾಡುವ ಮೊದಲು ನಾವು ಎಲ್ಲಿಂದ ಬಂದಿದ್ದೇವೆ? ಯಾರು ನಮ್ಮನ್ನು ಬೆಳೆಸಿ¨ªಾರೆ ಎಂಬ ಕನಿಷ್ಟ ಜ್ಞಾನ ಬೇಕು. ಕಳೆದ ನಾಲ್ಕು ವರ್ಷಗಳಿಂದ ನಮ್ಮ ಬಗ್ಗೆ ಅನೇಕ ಟೀಕೆ ಮಾಡಿ¨ªಾರೆ. ಆದರೆ, ಏಪ್ರಿಲ್‌ 30ರೊಳಗೆ ರಾಜ್ಯದಲ್ಲಿ ಅನೇಕ ಬೆಳವಣಿಗೆಗಳು ನಡೆಯಲಿದ್ದು, ನಮ್ಮ ವಿರುದ್ಧ ಹೋರಾಟ ಅಷ್ಟು ಸುಲಭವಲ್ಲ ಎಂಬುದನ್ನು ವಿರೋಧಿಗಳು ಮನದಟ್ಟುಮಾಡಿಕೊಳ್ಳಬೇಕು ಎಂದರು.

ರಾಹುಲ್‌ ಗಾಂಧಿ ಮೇಲೆ ಮತ್ತೆ ಆಕ್ರೋಶ ವ್ಯಕ್ತಪಡಿಸಿದ ಅವರು, ರಾಹುಲ್‌ ಗಾಂಧಿ ಅವರು ಜೆಡಿಎಸ್‌ ಎಂದರೆ ಜನತಾ ದಳ ಸಂಘ ಪರಿವಾರ ಎಂದರು. ನನ್ನನ್ನು ಸ್ವತ್ಛವಾಗಿ ಬನ್ನಿ ಎಂದಿದ್ದಾರೆ.  ಈ ಬಗ್ಗೆ ನನಗೆ ಬೇಸರವಿಲ್ಲ. ಆದರೆ, ಒಬ್ಬ ರಾಷ್ಟ್ರೀಯ ಅಧ್ಯಕ್ಷರ ಬಳಿ ಈ ರೀತಿ ಹೇಳಿಸಿದ್ದಾರಲ್ಲಾ ಎಂಬುದೇ ಬೇಸರ. ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರಾದರೂ ಸುಮ್ಮನಿರಬೇಕಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ಇದೆಲ್ಲಕ್ಕೂ ಕಾಲವೇ ಉತ್ತರಿಸಲಿದೆ ಎಂದು ತಿಳಿಸಿದರು. ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್‌, ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ, ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ, ಜೆಡಿಎಸ್‌ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್‌.ಪ್ರಕಾಶ್‌ ಮತ್ತಿತರರು ಇದ್ದರು.

Advertisement

ಪ್ರಜ್ವಲ್‌ ಸ್ಪರ್ಧೆ 13ರಂದು ನಿರ್ಧಾರ
ಬೆಂಗಳೂರು:
ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್‌ ರೇವಣ್ಣ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಯೇ ಎಂಬ ಪ್ರಶ್ನೆಗೆ ಏ. 13ರಂದು ಉತ್ತರ ಸಿಗಲಿದೆ.

ಏ. 13ರಂದು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಸಮಾವೇಶ ನಡೆಯಲಿದ್ದು, ಈ ಸಮಾವೇಶದಲ್ಲಿ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆ ಮಾಡಲಾಗುವುದು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಗೆ ಪ್ರಜ್ವಲ್‌ ರೇವಣ್ಣ ರಾರರಾಜೇಶಅವರಿ ನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತು ಈ ಹಿಂದೆ ಕೇಳಿಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next