Advertisement

ಜೋರಾಗಿದೆ ಮಾತಿನ ಮಲ್ಲರ ಛೂ ಬಾಣ

06:00 AM Apr 03, 2018 | Team Udayavani |

ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ವಿವಿಧ ಪಕ್ಷಗಳ ನಾಯಕರ ವಾಕ್ಸಮರ ತಾರಕಕ್ಕೇರಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ಮುಖಂಡರ ಕೆಸರೆರಚಾಟ ಒಂದುಕಡೆಯಾದರೆ, ಪ್ರಾದೇಶಿ ಪಕ್ಷ ಜೆಡಿಎಸ್‌ ತಾನೇನು ಕಡಿಮೆ ಎಂದು ಎರಡೂ ಪಕ್ಷಗಳ ವಿರುದ್ಧ ಹರಿಯಾಯುತ್ತಿದೆ. ಇದಕ್ಕೊಂದು ಉದಾಹರಣೆ ಎನ್ನುವಂತೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಬಾಣಕ್ಕೆ ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಹಾವೇರಿಯಲ್ಲಿ ತಿರುಗುಬಾಣ  ನೀಡಿದ್ದಾರೆ.

Advertisement

ಸಿಎಂ ಹೇಳಿದ್ದೇನೇನು?
1. ಯಡಿಯೂರಪ್ಪಗೂ ವರುಣಾ ಕ್ಷೇತ್ರಕ್ಕೂ ಏನು ಸಂಬಂಧ? ಅವರ ಮಗ ಬಂದು ಚುನಾವಣೆಗೆ ಸ್ಪರ್ಧಿಸಿದ ಕೂಡಲೇ ಕ್ಷೇತ್ರದ ಜನ ಅವರ ಹಿಂದೆ ಓಡಿ ಹೋಗಿಬಿಡುತ್ತಾರಾ?
3. ನನ್ನ ಮಗ ನಿಂತರೂ ಸಿಎಂ ಮಗ ಎಂದು ಜನ ಮತ ಹಾಕಲ್ಲ, ಕ್ಷೇತ್ರದಲ್ಲಿ ನಾನು ಮಾಡಿರುವ ಕೆಲಸದ ಆಧಾರದ ಮೇಲೆ ಮತಹಾಕುತ್ತಾರೆ.
4. ವರುಣಾ ಕ್ಷೇತ್ರದ ಕಷ್ಟಕ್ಕೆ ಸ್ಪಂದಿಸಿರುವುದು ನಾವು. ಆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದು ನಾನು. ಹೀಗಿರುವಾಗ ಯಾರೋ ಬಂದು ಚುನಾವಣೆಗೆ ನಿಂತ ತಕ್ಷಣ ಅಲ್ಲಿನ ಜನ ಬದಲಾಗುವುದಿಲ್ಲ.
5. ಕ್ಷೇತ್ರದ ಜನರಿಗೆ ಯಾರಿಗೆ ಮತ ಹಾಕಬೇಕು ಎಂಬುದು ಗೊತ್ತಿದೆ. ಮಾಜಿ ಸಿಎಂಗಳ ಮಕ್ಕಳು ಚುನಾವಣೆಗೆ ನಿಂತು ಗೆಲ್ಲುವುದಾಗಿದ್ದರೆ, ಯಾರ್ಯಾರೋ ಶಾಸಕರಾಗಿರುತ್ತಿದ್ದರು. ವಿಜಯೇಂದ್ರ ಬಗ್ಗೆ ನನ್ನ ಬಳಿ ಪ್ರಶ್ನೆ ಕೇಳಬೇಡಿ.

ವರುಣಾ ಕ್ಷೇತ್ರಕ್ಕೆ ಬಿ.ವೈ.ವಿಜಯೇಂದ್ರ ಯಾಕೆ? ಅವರಪ್ಪ ಯಡಿಯೂರಪ್ಪ ಅವರೇ ಬಂದು ಸ್ಪರ್ಧಿಸುವುದಕ್ಕೆ ಹೇಳಿ.
– ಸಿದ್ದರಾಮಯ್ಯ. ಮುಖ್ಯಮಂತ್ರಿ

ಈಶ್ವರಪ್ಪ ಹೇಳಿದ್ದೇನೇನು?
1. ಸಿದ್ದರಾಮಯ್ಯ ಹಿಂದುಳಿದ ವರ್ಗದ ನಕಲಿ ನಾಯಕ. ಪ್ರಧಾನಿ ಮೋದಿ ಅಸಲಿ ನಾಯಕ.
2. ಹಲವು ವರ್ಷಗಳ ಕಾಲ ಅಹಿಂದ ಜಪ ಮಾಡಿದ ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯಲ್ಲಿ ಆ ವರ್ಗಕ್ಕೆ ನೀಡಿದ ಕೊಡುಗೆ ಶೂನ್ಯ.
3. ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡು ಯಡಿಯೂರಪ್ಪನವರ ಬಗ್ಗೆ ಹಗುರವಾಗಿ ಮಾತನಾಡುವುದು ಸಲ್ಲ.

ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ತಾವೇ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಹೈಕಮಾಂಡ್‌ ಚಕಾರವೆತ್ತಿಲ್ಲ. ಸದ್ಯ ಇವರು ಸ್ವಯಂ ಘೋಷಿತ ಸಿಎಂ.
– ಕೆ.ಎಸ್‌. ಈಶ್ವರಪ್ಪ, ಪರಿಷತ್‌ ವಿಪಕ್ಷ ನಾಯಕ

Advertisement
Advertisement

Udayavani is now on Telegram. Click here to join our channel and stay updated with the latest news.

Next