ನೀಡಲು ಅನುಕೂಲವಾಗುವಂತೆ ಸುಸಜ್ಜಿತವಾಗಿ ಗೃಹ ಕಚೇರಿ “ಕೃಷ್ಣಾ’ದಲ್ಲಿ ನಿರ್ಮಾಣವಾಗಿರುವ “ವರುಣ’ ಸ್ಟುಡಿಯೋವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಉದ್ಘಾಟಿಸಿದರು. “ಕೃಷ್ಣಾ’ದಲ್ಲಿ ಮಾಧ್ಯಮಗಳಿಗೆ ಸಂದರ್ಶನ ನೀಡಲು ಅನನುಕೂಲವಾಗುತ್ತಿತ್ತು. ಹಾಗಾಗಿ ಮಾಧ್ಯಮಗಳಿಗೆ ಸಂದರ್ಶನ ನೀಡಲು ಅಗತ್ಯ ಸೌಲಭ್ಯಗಳನ್ನು ಒಳಗೊಂಡ ಸ್ಟುಡಿಯೋ ನಿರ್ಮಿಸಲಾಗಿದೆ ಎಂದು ಹೇಳಿದರು.
Advertisement
ಸ್ಟುಡಿಯೋಗೆ “ವರುಣ’ ಎಂದು ಹೆಸರಿಟ್ಟಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಇದು ನಾನು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ಹೆಸರಲ್ಲ. ವರುಣ ಎಂದರೆ ಮಳೆ ದೇವರ ಹೆಸರು.
ಗೃಹ ಕಚೇರಿ “ಕೃಷ್ಣಾ’ದ ಬಲಭಾಗದಲ್ಲಿ ಸುಸಜ್ಜಿತ “ವರುಣ ಸ್ಟುಡಿಯೋ ನಿರ್ಮಾಣವಾಗಿದೆ. ಸಂದರ್ಶನ, ಸಂವಾದಕ್ಕೆ ಪೂರಕವಾದ ಸಕಲ ಸೌಕರ್ಯವನ್ನು ಒಂದೇ ಸೂರಿನಡಿ ಕಲ್ಪಿಸಲಾಗಿದೆ. ಸಂದರ್ಶನಕ್ಕೆ ಅನುಕೂಲವಾಗುವಂತೆ ಆಸನ ವ್ಯವಸ್ಥೆ, ಧ್ವನಿ- ಬೆಳಕಿನ ಸೌಲಭ್ಯ, ಅಗತ್ಯಕ್ಕೆ ತಕ್ಕಂತೆ ಬದಲಾಯಿಸಬಹುದಾದ ಹಿನ್ನೆಲೆ ಪರದೆ, ಟೆಲಿಪ್ರಾಂಪ್ಟರ್, ರೆಕಾರ್ಡಿಂಗ್ ಸಲಕರಣೆಗಳು, ಕಂಪ್ಯೂಟರ್ ಸೇರಿದಂತೆ ಇತರೆ ಸೌಲಭ್ಯವನ್ನು ಸ್ಟುಡಿಯೋ ಒಳಗೊಂಡಿದೆ.
Related Articles
Advertisement