Advertisement

ಎಷ್ಟು ಜನರಿಗೆ ಎಂಎಲ್ಸಿ ಸ್ಥಾನ ಕೊಡುವುದು? ನಮ್ಮ ಕಷ್ಟ ನಿಮಗೆ ಅರ್ಥವಾಗಲ್ಲ: ಸಿಎಂ

08:37 PM May 25, 2024 | Team Udayavani |

ಮೈಸೂರು:  ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ಸಿಎಂ ನಿವಾಸದ ಬಳಿ ತಮ್ಮ ಅಹವಾಲು ಹೇಳಲು ಹಾಗೂ ಮನವಿ ಸಲ್ಲಿಸಲು ಬಂದವರಲ್ಲಿಯೇ ಸಿಎಂ ಸಿದ್ದರಾಮಯ್ಯ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

Advertisement

ಸಿಎಂ ನಿವಾಸಕ್ಕೆ ಭೇಟಿ ನೀಡಿದ ಕೆಲವು ನಾಯಕರ ಬೆಂಬಲಿಗರು ತಮ್ಮ ನೆಚ್ಚಿನ ನಾಯಕರಿಗೆ ಪರಿಷತ್‌ ಚುನಾವಣೆಯಲ್ಲಿ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಅದನ್ನು ಆಲಿಸಿದ ಸಿದ್ದರಾಮಯ್ಯ, ಎಷ್ಟು ಜನರಿಗೆ ಎಂಎಲ್ಸಿ ಸ್ಥಾನ ಕೊಡುವುದು? ನಮ್ಮ ಕಷ್ಟ ನಿಮಗೆ ಅರ್ಥವಾಗದು ಎಂದು ಹೇಳಿದರು.

ಇದೇ ವೇಳೆ ಸಾರ್ವಜನಿಕರಿಂದ ಮನವಿ ಸ್ವೀಕರಿಸಿದ ಸಿಎಂ, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರೆ, ಉಳಿದ ಮನವಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದರು.

ಮತ್ತೆ ದೋಸೆ ಸವಿದ ಸಿದ್ದರಾಮಯ್ಯ :

ಮೈಸೂರು: ಎರಡು ದಿನಗಳಿಂದ ಮೈಸೂರಿನಲ್ಲೇ ವಾಸ್ತವ್ಯ ಹೂಡಿರುವ ಸಿಎಂ ಸಿದ್ದರಾಮಯ್ಯ ಶನಿವಾರ ಮುಂಜಾನೆಯೂ ಅಗ್ರಹಾರದಲ್ಲಿ ಮೈಲಾರಿ ಹೊಟೆಧೀಲ್‌ಗೆ ತೆರಳಿ ದೋಸೆ, ಇಡ್ಲಿ ಸವಿದರು. ಶನಿವಾರ ಬೆಳಗ್ಗೆ ಮಂಗಳೂರಿಗೆ ತೆರಳುವ ಮುನ್ನ  ನಗರದ ಅಗ್ರಹಾರದಲ್ಲಿರುವ ಮೈಲಾರಿ ಹೊಟೇಲ್‌ಗೆ ಸಚಿವ ಕೆ. ವೆಂಕಟೇಶ್‌ ಜತೆಗೆ ತೆರಳಿದ ಸಿದ್ದರಾಮಯ್ಯ, ಬಿಸಿ ಬಿಸಿ ಮೈಲಾರಿ ದೋಸೆ ಹಾಗೂ ಇಡ್ಲಿ ಸವಿದರು. ಈ ವೇಳೆ ಹೊಟೇಲ್‌ ಮಾಲಕರನ್ನು ಹತ್ತಿರಕ್ಕೆ ಕರೆದು ಆತ್ಮೀಯವಾಗಿ ಮಾತನಾಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next