ಬಾಗೇಪಲ್ಲಿ : ‘ನಾನೇನು ಅರ್ಜಿ ಹಾಕಿಕೊಂಡು ಹಿಂದು ಧರ್ಮದಲ್ಲಿ ಹುಟ್ಟಿದ್ದೇನಾ? ನನ್ನ ಅಪ್ಪ , ಅಮ್ಮ ಕುರುಬ ರಾಗಿದ್ದರಿಂದ ನಾನು ಕುರುಬ ಜಾತಿಯವನಾಗಿದ್ದೇನೆ. ಧರ್ಮ, ಜಾತಿ ಮರೆತು ಮನುಷ್ಯರಾಗಿ ಬದುಕಬೇಕು’ ಎಂದು ಸಿಎಂ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ.
ಬಾಗೇಪಲ್ಲಿ ಶಾಸಕ ಸುಬ್ಟಾರೆಡ್ಡಿ ಅವರು ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ.
ಬಿಜೆಪಿ,ಜೆಡಿಎಸ್ ವಿರುದ್ಧ ಕಿಡಿ
ಸಮಾರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಸಾಧನಾ ಸಮಾವೇಶವನ್ನು ಏನು ನಮ್ಮ ಖರ್ಚಿನಲ್ಲಿ ಮಾಡಲಿಕ್ಕೆ ಆಗುತ್ತದಾ ? ಅದನ್ನು ಸರ್ಕಾರದ ಹಣದಲ್ಲೆ ಮಾಡುವುದು ಎಂದು ಬಿಜೆಪಿಗೆತಿರುಗೇಟು ನೀಡಿದರು.
ಹೈಕಮಾಂಡ್‌ಗೆ ಕೆಲ ಸಚಿವರು ಕಪ್ಪ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ ಕುಮಾರಸ್ವಾಮಿ ಅವರ ವಿರುದ್ಧ ಕಿಡಿ ಕಾರಿ ಅವರು ಬೇಜವಾಬ್‌ದಾರಿ ಆರೋಪ ಮಾಡುವುದನ್ನು ಬಿಟ್ಟು ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಚಾಮುಂಡೇಶ್ವರಿಯಲ್ಲೇ ಸ್ಪರ್ಧೆ
ಇದೇ ವೇಳೆ ನಾನು ಚಾಮುಂಡೇಶ್ವರಿ ಕ್ಷೇತ್ರದಿಂದಲೆ ಸ್ಪರ್ಧೆ ಮಾಡುವುದಾಗಿ ತಿಳಿಸಿದರು.
ಕುರಿಮರಿ ಗಿಫ್ಟ್
ಸಮಾರಂಭದಲ್ಲಿ ಮುಖ್ಯಮಂತ್ರಿಗಳಿಗೆ ಕುರುಬ ಸಂಘದ ಸದಸ್ಯರು ಕುರಿ ಯ ಮರಿಯೊಂದನ್ನು ಉಡುಗೊರೆಯಾಗಿ ನೀಡಿದರು. ಖುಷಿಯಾಗಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ ಕುರಿ ಮರಿಯ ಬೆನ್ನು ತಡವಿದರು.