Advertisement
ವೀರಶೈವರನ್ನು ಹೊರತುಪಡಿಸಿ ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಯಾಗಬೇಕೆಂದು ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಹಾಗೂ ಮತ್ತಿತರರು ಹೋರಾಟ ನಡೆಸುತ್ತಿರುವಾಗಲೇ, ಬಸವ ತತ್ವ ಪ್ರತಿಪಾದಿಸುವ 12ನೇ ಶತಮಾನದ ಶರಣರು ಹಾಗೂ ವೀರಶೈವ ಪರಂಪರೆ ಪ್ರತಿಪಾದಿಸುತ್ತಿರುವ ಪಂಚಾಚಾರ್ಯರ ತತ್ವಗಳೆರಡನ್ನೂ ಒಳಗೊಂಡಂತೆ ಹೊಸದಾಗಿ ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸಬೇಕೆಂದು ಸಮಿತಿ ವರದಿ ನೀಡಿರುವುದು ಭಿನ್ನರಾಗ ಹಿಡಿದಿರುವ ಲಿಂಗಾಯತ ಧರ್ಮ ಹೋರಾಟಗಾರರಿಗೆ ಒಗ್ಗಟ್ಟಿನ ಸಂದೇಶ ನೀಡಿದಂತಿದೆ.
Related Articles
Advertisement
ಮೊದಲ ಅಂತಸ್ತಿನ ವಚನಗಳಲ್ಲಿ ಬರುವ 770 ಅಮರ ಗಣಂಗಳ ಸಂಖ್ಯೆಯ ಸಂಖೇತವಾಗಿ 770 ಆಸನಗಳ ಸಭಾಭವನವಿರುತ್ತದೆ. ಕೆಳ ಅಂತಸ್ತಿನಲ್ಲಿ ಒಟ್ಟಿಗೆ 1500 ಜನ ಊಟ ಮಾಡಲು ಅವಕಾಶವಿರುವ ದಾಸೋಹ ಭವನ ಇರುತ್ತದೆ. ಇದರ ಹೊರತಾಗಿ ಗ್ರಂಥಾಲಯ, ಅತಿಥಿ ಗೃಹ, ಯೋಗ ಕೇಂದ್ರ, ಧ್ಯಾನ ಮಂದಿರ ನಿರ್ಮಾಣ ಮಾಡಲಾಗುವುದು. ಉಳಿದ ಪ್ರದೇಶದಲ್ಲಿ ಉದ್ಯಾನ ಅಭಿವೃದ್ಧಿ ಪಡಿಸಿ ಶರಣರ ಕಾಯಕ ಮೂರ್ತಿಗಳು, ನೀರಿನ ಕಾರಂಜಿ, ಹೂದೋಟ ಮಾಡಲು ಶಿಫಾರಸ್ಸು ಮಾಡಲಾಗಿದೆ.
ಈ ಯೋಜನೆಯಲ್ಲಿ 100 ಅಡಿ ಸುತ್ತಳತೆಯ ಜಗತ್ತಿನಲ್ಲಿಯೇ ಬೃಹತ್ ಎನಿಸುವ ಲಿಂಗಾಕಾರದ ಗೋಪುರ, ಕಟ್ಟಡದ ಒಳಭಾಗದಲ್ಲಿ ನೈಸರ್ಗಿಕ ಗಾಳಿ, ಬೆಳಕಿನ ವ್ಯವಸ್ಥೆ, ಬೇಸಿಗೆಯಲ್ಲಿಯೂ ನೆರವಾಗುವ ಅಂತರ್ ಜಲ ಸಂಗ್ರಹ, ಆಧುನಿಕ ರೋಬೋಟ್‌ಗಳ ವಾಯು ಚಾಲನೆ ವ್ಯವಸ್ಥೆ, ದ್ವಾರಗಳಲ್ಲಿ ಶರಣು ಶರಣಾರ್ಥಿ ಧ್ವನಿ ಮೂಲಕ ಸ್ವಾಗತ ಮಾಡುವ ತಂತ್ರಜ್ಞಾನವನ್ನು ಅಳವಡಿಸಲು ಸಮಿತಿ ಶಿಫಾರಸ್ಸು ಮಾಡಿದೆ.
ಅನುಭವ ಮಂಟಪದಲ್ಲಿ ಮುಂದೆ ವಚನ ವಿಶ್ವ ವಿದ್ಯಾಲಯ ಸ್ಥಾಪನೆಗೆ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕು. ಅನುಭವ ಮಂಟಪಕ್ಕೆ ಎಲ್ಲ ಜಾತಿ ಧರ್ಮದವರೂ ಮುಕ್ತವಾಗಿ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಬೇಕೆಂದು ಸಮಿತಿ ವರದಿಯಲ್ಲಿ ತಿಳಿಸಿದೆ.
ಕಾರ್ಯಕ್ರಮದಲ್ಲಿ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಬೀದರ ಸಂಸದ ಭಗವಂತ ರಾವ್ ಖೂಬಾ, ಬಸವ ಕಲ್ಯಾಣ ಶಾಸಕ ಮಲ್ಲಿಕಾರ್ಜುನ ಖೂಬಾ, ತಜ್ಞರ ಸಮಿತಿ ಸದಸ್ಯರಾದ ಡಾ. ಸಿ. ವೀರಣ್ಣ, ಡಾ. ಸಿದ್ದರಾಮ ಶರಣರು, ಡಾ. ಸಿದ್ದಲಿಂಗಯ್ಯ, ಪ್ರೊ. ಎಸ್. ಜಿ. ಸಿದ್ದರಾಮಯ್ಯ, ಡಾ. ರಂಜಾನ್ ದರ್ಗಾ ಹಾಗೂ ಅರವಿಂದ್ ಜತ್ತಿ ಹಾಜರಿದ್ದರು.
ಈಗ ಅನುಭವ ಮಂಟಪದ ವರದಿ ಬಂದಿದೆ. ಶರಣರ ಕಾಲದ ಅನುಭವ ಮಂಟಪ ಮಾಡಬೇಕೆನ್ನುವುದು ನನ್ನ ಮನದಾಸೆಯಾಗಿತ್ತು. ಈ ಯೋಜನೆಯನ್ನು ನಾವು ಮಾಡಿಯೇ ಮಾಡುತ್ತೇವೆ. ವರದಿಯನ್ನು ಶೀಘ್ರವೇ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಸಭೆಯ ಮುಂದಿಟ್ಟು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.– ಸಿದ್ದರಾಮಯ್ಯ, ಮುಖ್ಯಮಂತ್ರಿ ಅನುಭವ ಮಂಟಪ ಯಾವುದೇ ಶೈಲಿಯನ್ನು ಅನುಕರಣೆ ಮಾಡದೇ ನಮ್ಮ ಸಾಂಸ್ಕೃತಿಕ ನೆಲೆಗಟ್ಟಿನ ಹಿನ್ನೆಲೆಯಲ್ಲಿ ನಿರ್ಮಾಣಕ್ಕೆ ಶಿಫಾರಸ್ಸು ಮಾಡಿದ್ದೇವೆ. ಅದು ಕೇವಲ ಧಾರ್ಮಿಕ ಕೇಂದ್ರ ಆಗದೆ, ವಿಶ್ವ ಮಟ್ಟದ ಪ್ರವಾಸಿ ತಾಣವಾಗಬೇಕು.
– ಗೋ.ರು. ಚನ್ನಬಸಪ್ಪ, ತಜ್ಞರ ಸಮಿತಿ ಅಧ್ಯಕ್ಷ ಅನುಭವ ಮಂಟಪ ನಿರ್ಮಾಣ ವಿವರ
– ಮಹಾಮನೆ 25-30 ಎಕರೆ ವಿಸ್ತೀರ್ಣ
– ಅನುಭವ ಮಂಟಪ ವಿಸ್ತೀರ್ಣ 7.5 ಎಕರೆ
– ಒಟ್ಟು ಕಟ್ಟಡದ ಎತ್ತರ 182 ಅಡಿ
– ನಿರ್ಮಾಣದ ವೆಚ್ಚ 604 ಕೋಟಿ.
– ನಿರ್ಮಾಣದ ಅವಧಿ-ಸಿಮೆಂಟ್ ಕಟ್ಟಡ 2ರಿಂದ 2.5 ವರ್ಷ-100 ವರ್ಷ ಬಾಳಿಕೆ ಕಲ್ಲಿನ ಕಟ್ಟಡ 4 ರಿಂದ 5 ವರ್ಷ-1000 ವರ್ಷ ಬಾಳಿಕೆ.