ಗಂಗಾವತಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಿಂಧನೂರು ಮತ್ತು ರಾಯಚೂರು ಕಾರ್ಯಕ್ರಮಗಳಿಗೆ ತೆರಳುವ ಮಾರ್ಗ ಮಧ್ಯೆ ಗಂಗಾವತಿಯ ಕೊಪ್ಪಳ ರಸ್ತೆಯಲ್ಲಿ ಅಭಿಮಾನಿಗಳು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿ ಸಿಎಂ ಸಿದ್ದರಾಮಯ್ಯನವರಿಗೆ ಹಾರ ಶಾಲು ಹೂವಿನ ಬೊಕ್ಕೆ ಕೊಟ್ಟು ಸ್ವಾಗತಿಸಿದರು.
ಅಭಿಮಾನಿಗಳು ಕೊಟ್ಟ ಹೂವಿನ ಹಾರ ಶಾಲು ಮತ್ತು ಬೊಕ್ಕೆಯನ್ನು ಸ್ವೀಕರಿಸಿ ಅವರತ್ತ ಸಿದ್ದರಾಮಯ್ಯ ಕೈಬೀಸಿದರು. ಮಧ್ಯಾಹ್ನ 3:30ರ ಸುಮಾರಿನಲ್ಲಿ ಕೊಪ್ಪಳದಿಂದ ಗಂಗಾವತಿ ಮಾರ್ಗದಲ್ಲಿ ತೆರಳುವ ಪ್ರವಾಸದ ಕುರಿತು ಅಧಿಕೃತ ಆದೇಶದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕಾಂಗ್ರೆಸ್ ಕಾರ್ಯಕರ್ತರು
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ರಣಾ ಪ್ರತಾಪ್ ಸಿಂಗ್ ಸರ್ಕಲ್ ವರೆಗೆ ಬೆಳಗ್ಗೆ 11 ಗಂಟೆಯಿಂದ ಜಮಾವಣೆಗೊಂಡಿದ್ದರು. ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಹಾಸ ಪಟ್ಟರು.
ಜಂಗಮರ ಕಲ್ಗುಡಿ, ಶ್ರೀರಾಮನಗರ, ಸಿದ್ದಾಪುರ, ಕಾರಟಗಿ ಪಟ್ಟಣದಲ್ಲಿ ಸಹ ಸಿದ್ದರಾಮಯ್ಯನವರಿಗೆ ಭರ್ಜರಿ ಸ್ವಾಗತ ನೀಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ,ಕೊಪ್ಪಳದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ,ಸಂಸದ ಕೆ.ರಾಜಶೇಖರ ಹಿಟ್ನಾಳ,ಕಾಂಗ್ರೆಸ್ ಮುಖಂಡರಾದ ಯಮನಪ್ಪ ವಿಠಲಾಪುರ ,ಸಣ್ಣಕ್ಕಿ ನೀಲಪ್ಪ, ಆರ್ಹಾಳ ರುದ್ರೇಶ್, ಯಮನಪ್ಪ ಎಸ್ .ಬಿ .ಖಾದ್ರಿ ,ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಇಲಿಯಾಸ್ ಖಾದ್ರಿ ,ಶೇಕ್ ಇಲಿಯಾಸ್ ಬಾಬಾ, ರಾಜಪ್ಪ ಗುಂಜಳ್ಳಿ ಮಾರೇಶ ,ಆನಂದ, ಅಯುಬ್ ಸೇರಿ ಅನೇಕ ಮುಖಂಡರು ಇದ್ದರು.