Advertisement
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ತಮ್ಮ ಸರಕಾರದ ಸಾಧನೆಯ ರಿಪೋರ್ಟ್ ಕಾರ್ಡ್ ಸಲ್ಲಿಕೆ ಮಾಡುವುದು ಬೊಮ್ಮಾಯಿ ಅವರ ಉದ್ದೇಶ. ಇದರ ಜತೆಗೆ ಸಂಪುಟ ವಿಸ್ತರಣೆ ಬಗ್ಗೆ ಪ್ರಾಸಂಗಿಕವಾಗಿ ಮಾತನಾಡುವ ಉದ್ದೇಶವನ್ನು ಅವರು ಹೊಂದಿದ್ದಾರೆ. ಆದರೆ ಪ್ರಧಾನಿ ಹಾಗೂ ಪಕ್ಷದ ವರಿಷ್ಠರಿಂದ ಇನ್ನೂ ಭೇಟಿಗೆ ಸಮಯ ನೀಡದೇ ಇರುವುದರಿಂದ ಸಿಎಂ ದಿಲ್ಲಿ ಪ್ರವಾಸ ಇನ್ನೂ ತೂಗುಯ್ಯಾಲೆಯಲ್ಲೇ ಇದೆ.
Related Articles
ಬಿಜೆಪಿ ಮೂಲಗಳ ಪ್ರಕಾರ ಯಾವ ಕ್ಷಣದಲ್ಲಿ ಬೇಕಾದರೂ ಸಂಪುಟ ವಿಸ್ತರಣೆಗೆ ಸಿಎಂ ಸಿದ್ದರಿದ್ದಾರೆ. ಆದರೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸರ‍್ಪಡೆ ಮಾಡಿಕೊಳ್ಳುವ ವಿಚಾರ ಪ್ರಕ್ರಿಯೆಯನ್ನು ನಿಧಾನಗೊಳಿಸಿದೆ. ತಮ್ಮ ಪುತ್ರನಿಗೆ ಸಂಪುಟದಲ್ಲಿ ಅವಕಾಶ ನೀಡಲೇಬೇಕೆಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ. ಆದರೆ ಪಕ್ಷದ ಕಡೆಯಿಂದ ಇದಕ್ಕೆ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.
Advertisement
ಇದರ ಮಧ್ಯೆ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಅನೇಕ ಹಿರಿಯರಿಂದಲೂ ವಿಜಯೇಂದ್ರ ಸಂಪುಟ ಸೇರ್ಪಡೆಗೆ ವಿರೋಧವಿದೆ. ಆದರೆ ಯತ್ನಾಳ್ ರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಕ್ಕೆ ಸಿಎಂ ಮುಕ್ತ ಮನಸ್ಸಿನಿಂದ ಇದ್ದಾರೆ. ಹೀಗಾಗಿ ಪಕ್ಷದೊಳಗಿನ ಎರಡು ಬಣಗಳ ಸಮನ್ವಯ ಈಗ ಬೊಮ್ಮಾಯಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ ಬೊಮ್ಮಾಯಿ ಅವರ ದಿಲ್ಲಿ ಭೇಟಿ ಸಾಕಷ್ಟು ಕುತೂಹಲ ಸೃಷ್ಟಿಸಿದೆ.
ಆಕಾಂಕ್ಷಿಗಳು ಯಾರು ?ಸಚಿವ ಸ್ಥಾನಕ್ಕೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿಯೇ ಇದೆ. ಬಸನಗೌಡ ಪಾಟೀಲ್ ಯತ್ನಾಳ್, ವಿಜಯೇಂದ್ರ, ಅರವಿಂದ ಬೆಲ್ಲದ್, ರೇಣುಕಾಚಾರ್ಯ, ರಾಜುಗೌಡ, ಪೂರ್ಣಿಮಾ ಸೇರಿದಂತೆ ಹಲವಾರು ಅಪೇಕ್ಷಿತರು ಇದ್ದಾರೆ. ಎಲ್ಲರಿಗೂ ಅವಕಾಶ ಕಲ್ಪಿಸಬೇಕಿದ್ದರೆ ಸಂಪುಟ ಪುನಾರಚನೆಯೇ ಆಗಬೇಕಿದೆ