Advertisement

ಮಹಾ ಚುನಾವಣೆ: ಉದ್ಧವ್ ಠಾಕ್ರೆ ಪಾಲಾಗುತ್ತಾ ಮುಖ್ಯಮಂತ್ರಿ ಹುದ್ದೆ?

09:59 AM Sep 30, 2019 | keerthan |

ಮುಂಬೈ: ಮಹಾರಾಷ್ಟ್ರಾ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಆಡಳಿತಾರೂಢ ಬಿಜೆಪಿ – ಶಿವಸೇನೆ ಪಕ್ಷಗಳ ಸೀಟು ಹಂಚಿಕೆ ಒಪ್ಪಂದ ಇನ್ನು ಅಧಿಕೃತವಾಗಿ ಹೊರಬಿದ್ದಿಲ್ಲ. ಆದರೆ ಶಿವಸೇನೆ ಮುಖ್ಯಮಂತ್ರಿ ಪದವಿಗೆ ಪಟ್ಟು ಹಿಡಿದು ಕುಳಿತಿದೆ ಎಂದು ವರದಿಯೊಂದು ತಿಳಿಸಿದೆ.

Advertisement

ಮೂಲಗಳ ಮಾಹಿತಿ ಪ್ರಕರಾ ಉಭಯ ಪಕ್ಷಗಳ ಸೀಟು ಹಂಚಿಕೆ ಮಾತುಕತೆ ಮುಗಿದಿದ್ದು, ರವಿವಾರ ಹೊಬೀಳುವ ನಿರೀಕ್ಷೆಯಿದೆ. ವರದಿಯ ಪ್ರಕಾರ ಮಹಾರಾಷ್ಟ್ರ ವಿಧಾನಸಭೆಯ 288 ಕ್ಷೇತ್ರಗಳ ಪೈಕಿ ಬಿಜೆಪಿಗೆ 144 ಮತ್ತು ಶಿವಸೇನೆಗೆ 126 ಎಂದು ಹಂಚಲಾಗಿದೆ. ಉಳಿದ 18 ಕ್ಷೇತ್ರಗಳನ್ನು ಉಳಿದ ಸಣ್ಣ ಮಿತ್ರ ಪಕ್ಷಗಳಿಗೆ ನೀಡಲಾಗಿದೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮಹಾರಾಷ್ಟ್ರ ಬಿಜೆಪಿ ಮುಖಂಡರು ಮತ್ತು ಶಿವಸೇನಾ ಮುಖಂಡರೊಂದಿಗೆ ಶನಿವಾರ ಸಭೆ ನಡೆಸಿದ್ದಾರೆ.
ಶನಿವಾರ ಅಮಿತ್ ಶಾ ಭೇಟಿಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಸೇನಾ ವಕ್ತಾರ ಉದ್ಧವ್ ಠಾಕ್ರೆ, ನಾನು ಅಪ್ಪ ಬಾಳಾ ಠಾಕ್ರೆಯವರಿಗೆ ಒಬ್ಬ ಶಿವ ಸೇನಾ ಕಾರ್ಯಕರ್ತನನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದೆ. ಆ ಮಾತನ್ನು ಉಳಿಸಿಕೊಳ್ಳಬೇಕಿದೆ ಎಂದಿದ್ದರು. ಈ ಎಲ್ಲಾ ಬೆಳವಣಿಗೆಗಳು ಉದ್ಧವ್ ಠಾಕ್ರೆ ಅವರೇ ಮುಂದಿನ ಬಿಜೆಪಿ- ಸೇನಾ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಸೂಚಿಸುತ್ತಿದೆ.

2014ರ ಚುನಾವಣೆಯಲ್ಲಿ ಬಿಜೆಪಿ 122 ಮತ್ತು ಸೇನಾ 63 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಬಿಜೆಪಿಯ ದೇವೇಂದ್ರ ಫಡ್ನವೀಸ್ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next