Advertisement
ಪಟ್ಟಣದ ವಿದ್ಯೋದಯ ಕಾಲೇಜು ಆವರಣದಲ್ಲಿ ನಡೆದ ಬಿಜೆಪಿ ನವ ಕರ್ನಾಟಕ ನಿರ್ಮಾಣದ ಪರಿವರ್ತನಾ ಯಾತ್ರೆ ಸಮಾವೇಶ ಉದ್ಘಾಟಿಸಿ ಸನ್ಮಾನ ಹಾಗೂ ವಿವಿಧ ಸಮುದಾಯಗಳ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಸಿದ್ದರಾಮ ನಾನು ಅಂತ ಹೇಳಿಕೊಳ್ಳುತ್ತಿರಾ.
Related Articles
Advertisement
ಗೊಂದಲಕ್ಕೆ ಅಧಿವೇಶನದಲ್ಲಿ ಪರಿವಾರಹಾರ: ಲೋಕಸಭೆಯಲ್ಲಿ ಮುಂದಿನ ಫೆಬ್ರವರಿಯಲ್ಲಿ ನಡೆಯುವ ಬಜೆಟ್ ಅಧಿವೇಶನದಲ್ಲಿ ನಾಯಕ ಉಪ ಜಾತಿಗಳಾದ ಪರಿವಾರ, ತಳವಾರ, ಬೇಡ ಹಾಗೂ ಇನ್ನಿತರ ಸಮುದಾಯಗಳನ್ನು ನಾಯಕ ಸಮುದಾಯಕ್ಕೆ ಸೇರ್ಪಡೆಗೊಳಿಸಲು ಕೇಂದ್ರ ಸಚಿವರ ಜೊತೆಗೂಡಿ ಪ್ರಧಾನಿಗಳ ಗಮನಕ್ಕೆ ತಂದು ಗೊಂದಲ ಪರಿಹರಿಸಲಾಗುವುದು
ಎಂದು ನಾಯಕ ಸಮುದಾಯಗಳ ಮುಖಂಡರು ನೀಡಿದ ಮನವಿಯನ್ನು ಸ್ವೀಕರಿಸಿ ಭರವಸೆ ನೀಡಿದರು. ತಿ.ನರಸೀಪುರ ಕ್ಷೇತ್ರಕ್ಕೆ ಸಮೀಕ್ಷೆ ವೇಳೆ ಕಾರ್ಯಕರ್ತರು ಹಾಗೂ ಜನರು ಸೂಚಿಸುವ ವ್ಯಕ್ತಿಗೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೆಟ್ ನೀಡಲಾಗುವುದು ಎಂದರು.
ಮತ್ತೆ ಬಿಜೆಪಿಗೆ ಅಧಿಕಾರ ನೀಡಿ: ಮಾಜಿ ಶಾಸಕ ಡಾ.ಎನ್.ಎಲ್.ಭಾರತೀ ಶಂಕರ್ ಮಾತನಾಡಿ, ನವ ಕರ್ನಾಟಕ ನಿರ್ಮಾಣ ಮಾಡಲು ಬಿಜೆಪಿಯಿಂದ ಮಾತ್ರ ಸಾಧ್ಯ. ನಾಡಿನ ಜನರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರ ನೀಡಬೇಕು. ಕ್ಷೇತ್ರದ ಶಾಸಕರಾಗಿ ಪ್ರತಿನಿಧಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಕ್ಷೇತ್ರದ ಜನರು ಕೈಗೆ ಸಿಗುತ್ತಿಲ್ಲ. ನಾಲೆಗಳಿಗೆ ನೀರನ್ನು ಹರಿಸದೇ ರೈತರ ಬದುಕನ್ನು ಸಂಕಷ್ಟಕ್ಕೆ ದೂಡಿದ್ದಾರೆ ಎಂದು ದೂರಿದರು.
ಮಾಜಿ ಸಂಸದೆ ತೇಜಸ್ವಿನಿ ಗೌಡ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ವಿರಯ್ಯ, ಬಿ.ಜೆ.ಪುಟ್ಟಸ್ವಾಮಿ, ಮಾಜಿ ಸದಸ್ಯ ಸಿ.ರಮೇಶ್, ಮಾಜಿ ಸಚಿವ ಹಾಗೂ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ಮಾಜಿ ಅಧ್ಯಕ್ಷರಾದ ಹೇಮಂತ್ ಕುಮಾರ್‌ಗೌಡ, ಎಂ.ಜಿ.ರಾಮಕೃಷ್ಣಪ್ಪ, ಕ್ಷೇತ್ರಾಧ್ಯಕ್ಷ ಹೆಚ್.ಎಂ.ಪರಶಿವಮೂರ್ತಿ, ಜಿಪಂ ಮಾಜಿ ಸದಸ್ಯರಾದ ಪುಟ್ಟಬಸವಯ್ಯ, ಎಂ.ಸುಧಾ ಮಹದೇವಯ್ಯ,
ಶಶಿಕಲಾ ನಾಗರಾಜು, ಕೌಟಿಲ್ಯ ಆರ್.ರಘು, ಡಾ.ಶಿವರಾಮ, ಪ.ಪಂ ವಿರೇಶ್, ಡಾ.ಎಂ.ಸಿ.ಮಲ್ಲಿಕಾರ್ಜುನಸ್ವಾಮಿ, ಮುಖಂಡರಾದ ಕರೋಹಟ್ಟಿ ಮಹದೇವಯ್ಯ, ತೋಟದಪ್ಪ ಬಸವರಾಜು, ಬಿ.ವೀರಭದ್ರಪ್ಪ, ವೀಣಾ ಶಿವಕುಮಾರ್, ಶಿವಮ್ಮ ಮಹದೇವ, ಕೆ.ನಂಜುಂಡಸ್ವಾಮಿ, ಮಣಿಕಂಠರಾಜ್‌ಗೌಡ, ಬಿ.ಎನ್.ಸುರೇಶ, ನಾಗರಾಜು, ದಿಲೀಪ ಹಾಗೂ ಇನ್ನಿತರರು ಹಾಜರಿದ್ದರು.
ತಿ.ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಪೈಪೋಟಿಯನ್ನು ನೀಡುವ ಸಾಮರ್ಥ್ಯವಿರುವುದು ಬಿಜೆಪಿ ಮಾತ್ರ. ಕ್ಷೇತ್ರದ ಶಾಸಕರಾದ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರನ್ನು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ನಮ್ಮ ಶಿಷ್ಯ ಕ್ಷೇತ್ರದಲ್ಲಿ ಚನ್ನಾಗಿ ಕೆಲಸ ಮಾಡುತ್ತಿದ್ದಾನಲ್ಲ ಅಂತ ಜೆಡಿಎಸ್ ಟಿಕೆಟ್ ಕೇಳುವ ಆಕಾಂಕ್ಷಿಗಳಿಗೆ ಹೇಳುತ್ತಿದ್ದಾರೆ. ಅದಕ್ಕಾಗಿ ದುರ್ಬಲ ಅಭ್ಯರ್ಥಿಯನ್ನು ದಳದಿಂದ ಕಣಕ್ಕಿಳಿಸುತ್ತಾರೆ.-ಸಿ.ಪಿ.ಯೋಗೀಶ್ವರ್, ಚನ್ನಪಟ್ಟಣ ಶಾಸಕ ಬಿಜೆಪಿ ಮುಖಂಡರಿಬ್ಬರ ಜೇಬಿಗೆ ಕತ್ತರಿ: ವಿದ್ಯೋದಯ ಕಾಲೇಜು ಆವರಣದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮೂವರು ಮುಖಂಡರ ಜೇಬಿಗೆ ಕತ್ತರಿ ಕಾಕಿದ ಕಳ್ಳರು 90 ಸಾವಿರ ರೂ.ಹಣವನ್ನು ಎಗರಸಿದ್ದಾರೆ. ಜನದಟ್ಟಣೆಯ ಸಮಾವೇಶದಲ್ಲಿ ಕ್ಷೇತ್ರಾಧ್ಯಕ್ಷ ಹೆಚ್.ಎಂ.ಪರಶಿವಮೂರ್ತಿ ಅವರ ಬಳಿ 50 ಸಾವಿರ, ಮಾಜಿ ಜಿಲ್ಲಾ ಉಪಾಧ್ಯಕ್ಷ ತೋಟದಪ್ಪಬಸವರಾಜು ಅವರ ಬಳಿಯಿದ್ದ 24 ಸಾವಿರ ಹಾಗೂ ಬಿಲಿಗೆರೆಹುಂಡಿ ಗ್ರಾಮದ ಮುಖಂಡರೊಬ್ಬರ ಬಳಿ 15 ಸಾವಿರ ರೂ. ನಗದು ಹಣವನ್ನು ಕಳ್ಳತನ ಮಾಡಿದ್ದಾರೆ. ಈ ಸಂಬಂಧ ಮೂವರು ಮುಖಂಡರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.