Advertisement
ಮೂಳೂರು ಸಾಯಿರಾಧಾ ಹೆರಿಟೇಜ್‌ನಲ್ಲಿ ಡಾ| ತನ್ಮಯ್ ಗೋಸ್ವಾಮಿ ಅವರ ನೇತೃತ್ವದ ವೈದ್ಯಕೀಯ ತಂಡ, ದೇವೇಗೌಡ ಮತ್ತು ಕುಮಾರಸ್ವಾಮಿಗೆ ಪ್ರಕೃತಿ ಚಿಕಿತ್ಸೆ, ಆಯುರ್ವೇದ ಪದ್ಧತಿಯ ಚಿಕಿತ್ಸೆ, ಮಸಾಜ್ ಸಹಿತ ಪಂಚಕರ್ಮ ಚಿಕಿತ್ಸೆ, ಆಯುರ್ವೇದಿಕ್ ಪಂಚಕರ್ಮ ರಸಾಯನ್ ಥೆರಪಿಯನ್ನು ನೀಡಲಿದೆ.
Related Articles
Advertisement
ಈ ಮಧ್ಯೆ, ಸಿಎಂ ಮತ್ತು ಮಾಜಿ ಪ್ರಧಾನಿಗೆ ಭದ್ರತೆ ಒದಗಿಸುವ ಭರದಲ್ಲಿ ಪೊಲೀಸರು ಮಾಧ್ಯಮದವರನ್ನು ದೂರ ಇರಿಸುವ ಪ್ರಯತ್ನ ಮಾಡಿದರು. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಕಾಪು ವೃತ್ತ ನಿರೀಕ್ಷಕ ಶಾಂತರಾಮ್ ಮತ್ತು ಮಾಧ್ಯಮ ಪ್ರತಿನಿಧಿಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು.
ಇನ್ನು, ಸಿ.ಎಂ.ಜತೆಗೆ ಆಗಮಿಸಿರುವ ಸಚಿವ ಸಾ.ರಾ.ಮಹೇಶ್ ಮತ್ತು ವಿಧಾನಪರಿಷತ್ ಸದಸ್ಯ ಎಸ್. ಎಲ್.ಭೋಜೆಗೌಡ ಕೂಡ ರೆಸಾರ್ಟ್‌ನಲ್ಲೇ ಉಳಿದುಕೊಂಡಿದ್ದಾರೆ. ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಅವರು ಮೂಳೂರಿನಿಂದ ಕಾಪು ದೀಪಸ್ತಂಭದವರೆಗೆ ವಾಕಿಂಗ್ ಮಾಡಿದರೆ, ಭೋಜೇಗೌಡ ವೈದ್ಯರ ಸಲಹೆ ಪಡೆದು ಸಮುದ್ರ ದಡದಲ್ಲಿ ಸ್ಯಾಂಡ್ ಥೆರಪಿ ನಡೆಸಿದ್ದಾರೆ. ಬಳಿಕ, ಮೂಳೂರು ಬೀಚ್‌ನಲ್ಲಿ ಸಮುದ್ರ ಸ್ನಾನವನ್ನೂ ಮಾಡಿರುವುದಾಗಿ ತಿಳಿದು ಬಂದಿದೆ.
ಸಿಎಂ ಮತ್ತು ಮಾಜಿ ಪಿಎಂಗೆ ಮೂಳೂರು ಸಾಯಿರಾಧಾ ಹೆರಿಟೇಜ್‌ನಲ್ಲಿ ವಿಶ್ರಾಂತಿ ಮತ್ತು ಊಟೋಪಚಾರದ ವ್ಯವಸ್ಥೆ ಮಾಡಲಾಗಿದ್ದು, ಗೋಸ್ವಾಲ್ ಆಯುರ್ವೇದಿಕ್ ಸಂಸ್ಥೆಯ ವತಿಯಿಂದ ಆಯುರ್ವೇದಿಕ್ ಪಂಚಕರ್ಮ ರಸಾಯನ್ ಥೆರಪಿ ನಡೆಸಲಾಗುತ್ತದೆ. ಯೋಗ, ಲೇಪನ, ಮಸಾಜ್‌ನೊಂದಿಗೆ ಯೋಗಿಕ್ ಆಹಾರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆರೋಗ್ಯ ವರ್ಧನೆ, ದೇಹದ ಪುಷ್ಠಿಕರಣಕ್ಕಾಗಿ ಪಂಚಕರ್ಮ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡುತ್ತಿದ್ದಾರೆ.-ಡಾ| ತನ್ಮಯ್ ಗೋಸ್ವಾಮಿ.