Advertisement

CM ಆಕ್ರೋಶ; ಯಡಿಯೂರಪ್ಪನವರಿಗೆ ಪ್ರತಿಭಟನೆ ಮಾಡಲು ಯಾವ ನೈತಿಕ ಹಕ್ಕಿದೆ?

03:44 PM Jun 24, 2023 | Team Udayavani |

ಬೆಂಗಳೂರು: ಯಡಿಯೂರಪ್ಪನವರಿಗೆ ಪ್ರತಿಭಟನೆ ಮಾಡಲು ಯಾವ ನೈತಿಕ ಹಕ್ಕಿದೆ ಎಂದು ಸಿಎಂ‌ ಸಿದ್ದರಾಮಯ್ಯ ಶನಿವಾರ ಕಿಡಿ ಕಾರಿದ್ದಾರೆ.

Advertisement

ಬಡವರ ಕಾರ್ಯಕ್ರಮಕ್ಕೆ ತೊಂದರೆ ಕೊಡಬೇಕು ಅಂತಿದ್ದಾರೆ.ಅಕ್ಕಿ ಇಟ್ಟುಕೊಂಡು ಕೊಡುತ್ತಿಲ್ಲ. ಖಾಸಗಿಯವರಿಗೆ ಕೊಡುತ್ತಿದ್ದಾರೆ.ನಾವು ಪುಕ್ಕಟ್ಟೆ ಕೇಳುತ್ತಿಲ್ಲ ಹಣ ಕೊಡುತ್ತೇವೆ ಅಂದರೂ ಕೊಡುತ್ತಿಲ್ಲ.ಯಾವ ಉದ್ದೇಶದಿಂದ ಕೊಡುತ್ತಿಲ್ಲ.ಇವರನ್ನ ಬಡವರ ವಿರೋಧಿ ಅಂತ ಕರೆಯಬೇಕಾ ಅಥಾವ ಬಡವರ ಪರ ಅಂತ ಕರೆಯಬೇಕಾ.ಜನರು ಯೋಜನೆ ಮಾಡಬೇಕು ಎಂದರು.

ಜುಲೈ 1 ರಿಂದ ವಿದ್ಯುತ್ ಕೊಡುತ್ತಿದ್ದೇವೆ.ಅಕ್ಕಿ ಕೊಡಲು ತೀರ್ಮಾನ ಮಾಡಿದ್ದೆವು, ಆದರೆ ಅಕ್ಕಿ ಸಿಗುತ್ತಿಲ್ಲ.ತೆಲಂಗಾಣ ದವರು ಭತ್ತ ಕೊಡುತ್ತೇವೆ, , ಛತ್ತೀಸಗಡದಿಂದ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡುತ್ತೇವೆ ಎಂದಿದ್ದಾರೆ.ಪಂಜಾಬ್ ನವರು ನವೆಂಬರ್ ನಿಂದ ಕೊಡುತ್ತೇವೆ ಅಂತಾರೆ.ಹೀಗಾಗಿ NCCF ಕೇಂದ್ರಿಯ ಭಂಡಾರ, ನಫೆಡ್ ನಿಂದ ಕೊಟೆಷನ್ ಕೇಳಿದ್ದೇವೆ.ಅವರು ಕೊಟ್ಟ ಬಳಿಕ ದರ, ಗುಣಮಟ್ಟ, ಪ್ರಮಾಣ ವನ್ನ ನೋಡಿಕೊಂಡು ತೀರ್ಮಾನ ಮಡುತ್ತೇವೆ ಎಂದರು.

ಓಪನ್ ಮಾರ್ಕೆಟ್ ನಿಂದ ಖರೀದಿ ಮಾಡಬೇಕಾದರೆ, ಟೆಂಡರ್ ಕರೆಯಬೇಕಾಗುತ್ತೆ ಅದಕ್ಕೆ ಸಮಯ ಆಗುತ್ತದೆ. ರಾಗಿ, ಜೋಳ ಎರಡೆರಡು ಕೆ.ಜಿ. ಕೊಡಬಹುದು, ಆದರೆ ಇನ್ನು 3 ಕೆ.ಜಿ. ಅಕ್ಕಿ ಕೊಡಬೇಕಲ್ಲ, ಅದೇ ಸಮಸ್ಯೆ ಎಂದರು. ಹಾಲಿನ ದರ ಏರಿಕೆ ವಿಚಾರ ಸಂಬಂಧಿಸಿ ಚರ್ಚೆ ಮಾಡಿ ಪರಿಶೀಲನೆ ನಡೆಸುತ್ತೇವೆ ಎಂದು ಸಿಎಂ ಹೇಳಿದರು.

ನಿನ್ನೆಯಿಂದ ಮಳೆ ಬರುತ್ತಿದೆ,ವ್ಯಾಪಕವಾಗಿ ಬರುತ್ತಿಲ್ಲ ಅಷ್ಟೇ.ಒಂದು ವೇಳೆ ಸಮಸ್ಯೆಯಾದರೆ, ಎಲ್ಲ ಸಮಸ್ಯೆಯನ್ನ ಎದುರಿಸುವ ಸಾಮರ್ಥ್ಯ ರಾಜ್ಯ ಸರ್ಕಾರಕ್ಕಿದೆ.ಮಳೆ ಬರಲಿ ಎಂದು ಪ್ರಾರ್ಥನೆ ಮಾಡ್ತಿದ್ದೇವೆ. ಬಿತ್ತನೆ ಕೆಲವಕಡೆ ಶುರುವಾಗಿದೆ ಕೆಲವುಕಡೆಯಾಗಿಲ್ಲ.ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ‌.ಕುಡಿಯುವ ನೀರಿನ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಡಿ ಸಿ ಗಳಿಗೆ ಸೂಚಿಸಿದ್ದೇನೆ. ಎರಡು ಬಾರಿ ಡಿ ಸಿ ಗಳ ಸಭೆ ನಡೆಸಿದ್ದೇನೆ.ಮಳೆ ಯಾವಾಗಲೆ ಬಂದರೂ ಬಿತ್ತನೆಗೆ ಕ್ರಮ ಕೈಗೊಂಡಿದ್ದೇವೆ.ಬಿತ್ತನೆ ಬೀಜ, ಗೊಬ್ಬರ ಸಿದ್ದವಾಗಿಟ್ಟುಕೊಳ್ಳುವಂತೆ ಕೃಷಿ ಇಲಾಖೆಗೆ ಸೂಚಿಸಿದ್ದೇನೆ ಎಂದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next